ನವದೆಹಲಿ: ಕಳೆದ ಜನವರಿಯಲ್ಲಿ ಸಿಇಎಸ್ ೨೦೨೨ರಲ್ಲಿ ಫ್ರೀಸ್ಟೈಲ್ ಬಿಡುಗಡೆಯಾಗಿದ್ದು ಭಾರತಕ್ಕೆ ಸದ್ಯದಲ್ಲೇ ಬರಲಿದೆ.
ಗ್ರಾಹಕರು ಮಾರ್ಚ್ ೧೮-೨೮, ೨೦೨೨ರವರೆಗೆ ಸ್ಯಾಮ್‌ಸಂಗ್‌ನ ಅಧಿಕೃತ ಆನ್‌ಲೈನ್ ಮಳಿಗೆಯಲ್ಲಿ ರೂ.೨೦೦೦ಕ್ಕೆ ಕಾಯ್ದಿರಿಸಬಹುದು ಮತ್ತು ಅಚಿsತಿಚಿ ಕೊಳ್ಳುವಿಕೆಯಲ್ಲಿ ರೂ.೪,೦೦೦ ಕಡಿತ ಪಡೆಯಬಹುದು.
ಜಾಗತಿಕಾಗಿ ದಿ ಫ್ರೀಸ್ಟೈಲ್ ತನ್ನ ಆವಿಷ್ಕಾರಕ ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಅದರ ಎಲ್ಲ ಕಾರ್ಯಗಳನ್ನೂ ಆಧುನಿಕ ಜೀವನಶೈಲಿಗೆ ಪ್ರತಿಕ್ರಿಯಿಸುವಂತೆ ವಿನ್ಯಾಸ ಗೊಳಿಸಿದ್ದು ಅದನ್ನು ೨೦೨೨ರ ಅತ್ಯಂತ ಗಮನಾರ್ಹ ಗ್ಯಾಡ್ಜೆಟ್‌ಗಳಲ್ಲಿ ಒಂದಾ ಗಿಸಿದೆ!
ದಿ ಫ್ರೀಸ್ಟೈಲ್ ಪೋರ್ಟಬಲ್ ಪ್ರೊಜೆಕ್ಟರ್ ಕೇವಲ ೦.೮ ಕೆಜಿ ತೂಕವಿದ್ದು ಒಂದೇ ಕೈ ಯಲ್ಲಿ ಎತ್ತಬಹುದಾದಷ್ಟು ಕಿರಿದಾಗಿದೆ ಮತ್ತು ೧೮೦ ಡಿಗ್ರಿಗಳಷ್ಟು ಪ್ರೊಜೆಕ್ಟ್ ಮಾಡುವ ಸಾಮರ್ಥ್ಯ ಹೊಂದಿದೆ. ದಿ ಫ್ರೀಸ್ಟೈಲ್ ಸ್ಯಾಮ್‌ಸಂಗ್ ಸ್ಮಾರ್ಟ್ ಟಿ.ವಿ.ಗಳಲ್ಲಿ ಲಭ್ಯ ವಿರುವ ಸ್ಮಾರ್ಟ್ ಫೀರ‍್ಸ್ ಕೂಡಾ ಹೊಂದಿದ್ದು ಬಿಲ್ಟ್ ಇನ್ ಸರ್ಟಿಫೈಡ್ ಒಟಿಟಿ ಅಪ್ಲಿಕೇ ಷನ್ಸ್ ಹೊಂದಿದೆ.
ಸ್ಮಾರ್ಟ್ ಕನೆಕ್ಟಿ ವಿಟಿಗೆ ಆಂಡ್ರಾಯಿಡ್ ಮತ್ತು ಐಒಎಸ್ ಮೊಬೈಲ್ ಡಿವೈಸ್‌ಗಳಿಂದ ಮಿರರಿಂಗ್ ಮತ್ತು ಕ್ಯಾಸ್ಟಿಂಗ್ ಸೌಲಭ್ಯಗಳು ಲಭ್ಯವಿವೆ. ಇದರೊಂದಿಗೆ ದಿ ಫ್ರೀಸ್ಟೈಲ್ ಆಂಬಿಯೆಂಟ್ ಮೋಡ್‌ನಲ್ಲಿ ಆ್ಯಂಬಿ ಯೆನ್ಸ್ ನಿಗದಿಪಡಿಸುತ್ತದೆ ಮತ್ತು ಲೆನ್ಸ್ ಕ್ಯಾಪ್ ಬಳಸಿ ಪ್ರಿಸಂ ಎಫೆಕ್ಟ್ ನೀಡುತ್ತದೆ.
ಇದರ ೩೬೦-ಡಿಗ್ರಿ ಧ್ವನಿ ಗ್ರಾಹಕರು ಎಲ್ಲೇ ಇದ್ದರೂ ಸಿನಿಮಾ ಗುಣಮಟ್ಟದ ಧ್ವನಿ ಅನುಭವ ಆನಂದಿಸಲು ಅನುಮತಿಸುತ್ತದೆ.