ಕ್ಲಬ್ಹೌಸ್ ಸಂವಾದ 244
ವಿಶ್ವವಾಣಿ ಕ್ಲಬ್ಹೌಸ್ನಲ್ಲಿ ‘ಕಾಶ್ಮೀರದ ಇಂದಿನ ಸ್ಥಿತಿಗೆ ಹೊಣೆ ಯಾರು?’ ಕುರಿತು ಸೂಲಿಬೆಲೆ ಉಪನ್ಯಾಸ
ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಬಂದ ನಂತರ ಕಾಶ್ಮೀರ ಕಣಿವೆಯಲ್ಲಿ ಪಂಡಿತರಿಗೆ ಆದ ಅನ್ಯಾಯ, ದೌರ್ಜನ್ಯದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದನ್ನು ಗಮನಿಸಿದಾಗ 1990ರ ನಂತರ ಕಾಶ್ಮೀರದಿಂದ ಪಂಡಿತರ ನಿರ್ಗಮನವಾಯಿತು ಎಂದು ಗೊತ್ತಾಗುತ್ತದೆ. ಆದರೆ, ಅದು ಅವರ ಮೊದಲನೇ ನಿರ್ಗಮನವಲ್ಲ.
೧೪ನೇ ಶತಮಾನದಲ್ಲಿ ಸಿಕಂದರ್ ಶಾ ಆಳುವಾಗ ಮೊದಲನೇ ಬಾರಿಗೆ ಕಾಶ್ಮೀರಿ ಪಂಡಿತ ರನ್ನು ಓಡಿಸಲಾಗಿತ್ತು. ಔರಂಗಜೇಬನ ಅವಧಿಯಲ್ಲಿ, ೧೮ನೇ ಶತಮಾನದಲ್ಲಿ ಅಹಮದ್ ಷಾ ಅಬ್ದಾಲಿ ಕಾಲದಲ್ಲಿ , ೧೯೩೧ರಲ್ಲಿ ಬ್ರಿಟೀಷ್ರ ಕಾಲದಲ್ಲಿ ಸೇರಿದಂತೆ ಒಟ್ಟು ಏಳು ಬಾರಿ ಕಾಶ್ಮೀರಿ ಪಂಡಿತರು ಅಲ್ಲಿ ಮುಸ್ಲಿಮರ ದೌರ್ಜನ್ಯಕ್ಕೆ ಒಳಗಾಗಿ ಕಾಶ್ಮೀರ ಬಿಟ್ಟು ದೇಶದ ನಾನಾ ಭಾಗಗಳಿಗೆ ಓಡಿಬಂದಿದ್ದಾರೆ.
ವಿಶ್ವವಾಣಿ ಕ್ಲಬ್ಹೌಸ್ ಏರ್ಪಡಿಸಿದ್ದ ‘ಕಾಶ್ಮೀರದ ಇಂದಿನ ಸ್ಥಿತಿಗೆ ಹೊಣೆ ಯಾರು?’ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿ ಯಾಗಿ ಆಗಮಿಸಿದ ಚಿಂತಕ, ಪ್ರಖರ ವಾಗ್ಮಿಗಳಾದ ಚಕ್ರವರ್ತಿ ಸೂಲಿಬೆಲೆ ಕಾಶ್ಮೀರದ ಈ ಸ್ಥಿತಿ ಕುರಿತಂತೆ ವಿವರಣೆ ನೀಡಿದ್ದು ಹೀಗೆ… ಕಾಶ್ಮೀರಿ ಗಳು ಎಂದಿಗೂ ಭಾರತದ ಪರವಾಗಿಯೇ ಇದ್ದರು. ಆದರೆ, ನಮ್ಮ ದೇಶದ ನಾಯಕರು ದುರ್ಬಲರಾಗಿದ್ದರು. ಅವರಲ್ಲಿ ದೂರದೃಷ್ಟಿತ್ವದ ಕೊರತೆ ಎದ್ದು ಕಾಣುತ್ತಿತ್ತು.
ಜವಾಹರ್ಲಾಲ್ ನೆಹರು ಅವರಿಗೆ ಕಾಶ್ಮೀರದ ಮೇಲಿ ಇದ್ದುದಕ್ಕಿಂತ ಹೆಚ್ಚಿನ ಪ್ರೀತಿ ಶೇಕ್ ಅಬ್ದುಲ್ಲಾ ಮೇಲಿತ್ತು. ಆ ಪ್ರೀತಿ ನೆಹರು ಕುಟುಂಬದ ಮುಂದಿನ ಪೀಳಿಗೆ ಮತ್ತು ಶೇಕ್ ಅಬ್ದುಲ್ಲಾ ಕುಟುಂಬದ ಮುಂದಿನ ಪೀಳಿಗೆಯೊಂದಿಗೆ ಬೆಳೆದುಕೊಂಡೇ ಬಂದಿದೆ. ಮನಮೋಹನ್ ಸಿಂಗ್ ದೇಶದ ಪ್ರಧಾನಿ ಯಾಗಿದ್ದಾಗ ಕಾಶ್ಮೀರಕ್ಕೆ ಭೇಟಿಕೊಟ್ಟಿದ್ದರು. ಆಗ ನಾನೂ ಅಲ್ಲೇ ಇದ್ದೆ. ಆ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಿದ್ದು ಭಾರತದ ತ್ರಿವರ್ಣ ಧ್ವಜಗಳಲ್ಲ, ಬದಲಾಗಿ ದಾರಿ ಉದ್ದಕ್ಕೂ ಪಾಕಿಸ್ತಾನದ ಭಾವುಟಗಳೇ ಸ್ವಾಗತ ಮಾಡಿದ್ದವು. ಎಲ್ಲೆಡೆ ಪ್ರತ್ಯೇಕತಾವಾದದ ಕೂಗು ಕೇಳಿಸುತ್ತಿತ್ತು. ಕಾಶ್ಮೀರಕ್ಕೆ ಭೇಟಿ ನೀಡಿದ್ದ ಮನಮೋಹನ್ ಸಿಂಗ್ ೩೦೦೦ ಕೋಟಿ ರು. ಪ್ಯಾಕೇಜ್ ಘೋಷಿಸಿದ್ದರು.
ಕಾಶ್ಮೀರದಲ್ಲಿ ಪ್ರತ್ಯೇಕವಾದದ ಕೂಗು ಹೆಚ್ಚಾದಾಗ ಅದನ್ನು ಶಮನ ಮಾಡುತ್ತಿರಲಿಲ್ಲ. ಬದಲಾಗಿ ಪ್ಯಾಕೇಜ್ ಘೋಷಿಸಿ, ಒಂದಷ್ಟು ಹಣ ಕೊಟ್ಟು ಸರಕಾರಗಳು ಸುಮ್ಮನಾಗುತ್ತಿದ್ದವು. ಸಂವಿಧಾನದ ೩೭೦ನೇ ವಿಽಯಡಿ ಜಮ್ಮು ಕಾಶ್ಮೀರಕ್ಕೆ ವಿಶೇಷ
ಸ್ಥಾನಮಾನ ನೀಡಿದ್ದು ತಾತ್ಕಾಲಿಕವಾಗಿಯಾಗಿತ್ತು. ಅದರ ಪರಿಣಾಮ ಪ್ರತ್ಯೇಕ ಸಂವಿಧಾನ, ಪ್ರತ್ಯೇಕ ಬಾವುಟ ಅವರಿಗೆ ಸಿಕ್ಕಿತ್ತು.
ರಾಜಕಾರಣಕ್ಕಾಗಿ ರಾಜಕೀಯ ನಾಯಕರ ನಿರ್ಲಕ್ಷ್ಯದಿಂದ ೨೦೧೯ರವರೆಗೆ ಇದು ಮುಂದುವರಿಯಿತು. ಕಾಶ್ಮೀರಿಗಳು ಭಾರತದ
ಒಳಗಿದ್ದರೂ ಪ್ರತ್ಯೇಕವಾಗಿದ್ದರು. ಇದರಲ್ಲೇ ಗೊತ್ತಾಗುತ್ತದೆ ಕಾಶ್ಮೀರದ ಇಂದಿನ ಸ್ಥಿತಿಗೆ ಯಾರು ಹೊಣೆ ಎಂದು.
ಈ ಎಲ್ಲಾ ಕಾರಣದಿಂದ ಕಾಶ್ಮೀರ ತನಗೆ ಇಷ್ಟ ಬಂದಂತೆ ಆಡಲು ಪ್ರಾರಂಭಿಸಿತು. ಅದು ಎಷ್ಟರ ಮಟ್ಟಿಗೆ ಎಂದರೆ, ಮಕ್ಮೂಲ್
ಭಟ್ ಎಂಬ ಮುಸಲ್ಮಾನ ಆರೋಪಿಗೆ ನೇಣು ಶಿಕ್ಷೆ ನೀಡಿದ ಕಾರಣ, ಮಾರುಕಟ್ಟೆಯಲ್ಲಿ ಜನರ ಮಧ್ಯೆಯೇ ನಿವೃತ್ತ ನ್ಯಾಯಾಧೀಶ ನೀಲಕಂಠ ಗಂಜು ಅವರನ್ನು ಬರ್ನರವಾಗಿ ಹತ್ಯೆ ಮಾಡುವ ಸ್ಥಿತಿಗೆ ತಲುಪಿತು. ಇವೆಲ್ಲವನ್ನು ನೋಡಿದರೂ ಅಸಹಾಯಕ ಸ್ಥಿತಿಯನ್ನು ರಾಜ್ಯಪಾಲರಾಗಿದ್ದ ಜಗಮೋಹನ್ ಅನುಭವಿಸುವಂತಾಗಿತ್ತು.
ಫಾರುಕ್ ಅಬ್ದುಲ್ಲ ರಾಜ್ಯಪಾಲರ ಎಲ್ಲಾ ಅಧಿಕಾರವನ್ನು ಕಸಿದುಕೊಂಡ ಕಾರಣ ಮತ್ತು ಕೇಂದ್ರ ಸರಕಾರದಿಂದ ಯಾವುದೇ ಸಹಕಾರ ಸಿಗದ ಪರಿಣಾಮ ಕಾಶ್ಮೀರ ಈ ಸ್ಥಿತಿಗೆ ತಲುಪಿತು. ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ನಾಲ್ಕೈದು ಕುಟುಂಬಗಳ ಕಥೆಯನ್ನು ಒಟ್ಟುಗೂಡಿಸಿ ಅದನ್ನು ಒಂದು ಕಥೆಯಾಗಿ ತೋರಿಸಿದ್ದಾರೆ ಎಂದು ಸ್ಪಷ್ಟವಾಗಿ ಕಾಣಿಸುತ್ತದೆ. ಕಾಶ್ಮೀರ ಮೂಲತಃ ಹಿಂದೂಗಳಿಗೆ
ಸೇರಿದ್ದು. ಎಂದಿಗೂ ಮುಸಲ್ಮಾನರಿಗೆ ಸೇರಿದ್ದಲ್ಲ ಮತ್ತು ಸೇರಿರಲೂ ಇಲ್ಲ. ವಾಸ್ಥವವಾಗಿ ನೋಡಿದರೆ ರಾಜ ತರಂಗಿಣಿ, ಜೋನ್ ರಾಜ ಬರೆದಿರುವ ಇತಿಹಾಸ ಓದಿದರೆ ಹೇಗೆ ಕಾಲಾನುಕ್ರಮವಾಗಿ ಕಾಶ್ಮೀರ ಬೆಳೆದು ಬಂದಿದೆ ಎಂದು ತಿಳಿಯುತ್ತದೆ. ಮುಂಗೋಲರ
ಆಕ್ರಮಣದಿಂದ ಮುಸಲ್ಮಾನರ ಪರ್ವ ಪ್ರಾರಂಭವಾಗುವುದು ತಿಳಿದುಬರುತ್ತದೆ.
ಜ್ಞಾನ ನಾಶಕ್ಕೆ ಕಾಶ್ಮೀರ ನಾಶ ಮಾಡಲು ಯತ್ನಿಸಿದರು: ಶಾರದೆಯನ್ನು ಕಾಶ್ಮೀರ ಪುರವಾಸಿನಿ ಎಂದು ಕರೆಯಲಾಗುತ್ತದೆ.
ಕಾಶ್ಮೀರದಲ್ಲಿ ಶಾರದೆ ಉಳಿದಿದ್ದಾಳೆ ಎಂಬುವುದಕ್ಕೆ ಈ ಮಾತು ಬಂದಿದ್ದಲ್ಲ. ಶಾರದೆ eನದ ಸಂಕೇತ. ಹೀಗಾಗಿ ಜ್ಞಾನವೇ ಅಲ್ಲಿ
ನೆಲೆನಿಂತಿದೆ ಎಂದು ಈ ಮಾತಿನ ಅರ್ಥ. ಯಾವ ದೇಶವನ್ನು ನಾವು ನಾಶ ಮಾಡಬೇಕೆಂದಾದರೆ ಮೊದಲು ಅಲ್ಲಿರುವ ಜ್ಞಾನ ವನ್ನು ನಾಶ ಮಾಡಬೇಕು. ಆಗ ಆ ದೇಶ ನಾಶವಾಗಿ ನಮ್ಮ ವಶವಾಗುತ್ತದೆ ಎಂಬುದು ಭಾರತವನ್ನು ಆಕ್ರಮಿಸಿದ ಪ್ರತಿಯೊಬ್ಬರ
ಯೋಜನೆಯಾಗಿತ್ತು.
ಹೀಗಾಗಿ ಭಾರತಕ್ಕೆ ದಾಳಿ ಮಾಡಿದವರೆಲ್ಲಾ ಅತ್ಯಂತ ಶ್ರೇಷ್ಠವಾದ, ಜ್ಞಾನದ ಸ್ಥಳವಾದ ಕಾಶ್ಮೀರವನ್ನು ಧ್ವಂಸ ಮಾಡುವುದಕ್ಕೆ ಪ್ರಾರಂಭಿಸಿದರು. ಈ ಬಗ್ಗೆ ಕಾಶ್ಮೀರ್ ಫೈಲ್ಸ್ ಚಿತ್ರ ದಲ್ಲಿ ಕೃಷ್ಣ ಪಂಡಿತ್ ಪಾತ್ರದಾರಿಯೂ ಹೇಳಿದ್ದಾನೆ. ಅಲ್ಲಿರುವವರು ಅನೇಕರು ಮುಸಲ್ಮಾನರಾಗಿ ಕಂಡುಬಂದರೂ, ಮೂಲತಃ ಅವರು ಪಂಡಿತರೇ ಆಗಿದ್ದು, ನಂತರ ಕತ್ತಿಯ ಅಲಗಿನ ಕಾರಣಕ್ಕಾಗಿ ಮತಾಂತರ ವಾಗಿದ್ದಾರೆ. ಮತಾಂತರದಲ್ಲಿ ಎರಡು ರೀತಿ ಇವೆ, ಒಂದು ಕತ್ತಿಯ ಕಾರಣ ಮತ್ತೊಂದು ಸೂಫಿಗಳ ಆಗಮನದಿಂದ. ಸೂಫಿಗಳು ಆರಂಭದಲ್ಲಿ ಹಿಂದು ಮತ್ತು ಮುಸ್ಲಿಂ ಇಬ್ಬರ ಚಿಂತನೆಗಳನ್ನು ಬೆಸೆಯುವ ಚಿಂತಕರಾಗಿ ಕಂಡು ಬಂದರೂ ನಂತರ ಕತ್ತಿ ಹಿಡಿದು ಇಸ್ಲಾಂ ಪಂಥ ಸ್ಥಾಪನೆಗೆ ನಿಂತು ಮತಾಂತರ ಮಾಡುವ ವ್ಯವಸ್ಥೆಗೆ ಪ್ರಯತ್ನ ಮಾಡಿದರು. ಹಿಂದೂಗಳ ವಿಚಾರಗಳನ್ನು ಮುಸಲ್ಮಾನ ರಾಜನಿಗೆ ತಿಳಿಸುವ ವ್ಯವಸ್ಥೆ ಸ್ಥಾಪಿಸಿದರು.
ಹಂ ದೇಕೇಂಗೆ ವಿದ್ರೋಹ ಗೀತೆ
ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ತೋರಿಸಿರುವ ‘ಹಂ ದೇಕೇಂಗೆ’ ಹಾಡು ಪಾಕಿಸ್ಥಾನದಲ್ಲಿ ವಿದ್ರೋಹದ ಗೀತೆಯಾಗಿ ಹುಟ್ಟಿದ್ದು. ಈ
ವಿದ್ರೋಹ ಗೀತೆ ಹೇಗಿರುತ್ತವೆ ಎಂದು ನೋಡಿದರೆ, ಅಲ್ಲಾನ ರಾಜ್ಯವನ್ನು ನಾವು ಸ್ಥಾಪಿಸುತ್ತೇವೆ. ಅಲ್ಲಾ ಒಂದು ದಿನ ಎಲ್ಲರನ್ನೂ ತನ್ನವರಾಗಿಸಿಕೊಳ್ಳುತ್ತಾನೆ. ತನ್ನ ಪಂಥಕ್ಕೆ ಸೆಳೆದುಕೊಳ್ಳುತ್ತಾನೆ ಎಂಬ ಚಿಂತನೆಗಳು ವ್ಯಾಪಕವಾಗಿ ತುಂಬಿರುತ್ತದೆ. ಭಾರತ ದಲ್ಲೂ ವ್ಯಾಪಕವಾಗಿ ಇದು ಹಬ್ಬಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು.
***
ಕಾಶ್ಮೀರದ ವಿಚಾರದಲ್ಲಿ ಭಾರತದ ಮುಂದೆ ಪಾಕಿಸ್ಥಾನ ಮಾನಸಿಕವಾಗಿ ಶರಣಾಗಿದೆ. ಅದು ದೈಹಿಕವಾಗಿ ಶರಣಾಗುವಂತೆ ಮಾಡಬೇಕು. ಪಾಕಿಸ್ಥಾನಕ್ಕೆ ಯಾವ ಯೋಗ್ಯತೆಯೂ ಇಲ್ಲ. ಯೋಗ್ಯತೆ ಮತ್ತು ಸಾಮರ್ಥ್ಯ ಇದ್ದರೆ ಅದು ಹಿಂದೂಸ್ಥಾನಕ್ಕೆ ಮಾತ್ರ ಎಂಬ ವ್ಯಾಪಕವಾದ ಮನಸ್ಥಿತಿ ಹುಟ್ಟಿಸಿದಾಗ ಕಾಶ್ಮೀರಿ ಪಂಡಿತರು ತಾವೇ ತಾವಾಗಿ ಹೋಗಿ ಕಾಶ್ಮೀರದಲ್ಲಿ ನೆಲೆಯೂರುತ್ತಾರೆ. ಅಂಥಹ ದಿನ ಬೆಗ ಬರಲಿ ಎಂದು ಆಶಿಸೋಣ.
– ಚಕ್ರವರ್ತಿ ಸೂಲಿಬೆಲೆ ವಾಗ್ಮಿ
ಯಾವ ರಾಜಕೀಯ ನಾಯಕರಾದರೂ ಕರೆ ಕೊಟ್ಟರೆ ಹಣ ನೀಡಿ ಜನರನ್ನು ಕರೆತರಬೇಕಾಗಿದೆ. ಆದರೆ, ಚಕ್ರವರ್ತಿ ಕರೆ ಕೊಟ್ಟರೆ ೧೦ ಸಾವಿರ ಯುವಕರು ಕೆಲಸ ಕಾರ್ಯಗಳನ್ನು ಬಿಟ್ಟು ಬರುತ್ತಾರೆ. ಸಂಸ್ಕೃತಿಯ ಬೀಡುಗಳು ಶಿಥಿಲಾವಸ್ಥೆಯಲ್ಲಿದ್ದರೆ ಅದಕ್ಕೆ ಹೊಸ ರೂಪ ನೀಡುತ್ತಾರೆ. ಅನೇಕರು ತಮ್ಮ ಹೋರಾಟವನ್ನು ಸಮಾಜಿಕ ಜಾಲತಾಣಕ್ಕೆ ಸೀಮಿತ ಮಾಡಿದ್ದರೆ ಚಕ್ರವರ್ತಿ ಸೂಲಿಬೆಲೆ ಅವರದ್ದು ಫೀಲ್ಟ್ ವರ್ಕ್. ಅವರ ಬದ್ಧತೆ ಪ್ರಶ್ನಾತೀತ. ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡುವವರು ಅಪರೂಪ. ಅಂತಹವರಲ್ಲಿ ಚಕ್ರವರ್ತಿ ಕೂಡ ಒಬ್ಬರು.
-ವಿಶ್ವೇಶ್ವ ಭಟ್, ಪ್ರಧಾನ ಸಂಪಾದಕರು ವಿಶ್ವವಾಣಿ ಪತ್ರಿಕೆ
? ೩೦ವರ್ಷಗಳ ನಂತರ ಇಡೀ ಭಾರತ ದೇಶ ನಮ್ಮ ಜತೆಗಿದೆ ಎಂಬ ಧರ್ಯದಿಂದ ಕಾಶ್ಮೀರಿ ಪಂಡಿತರು ಧೈರ್ಯದಿಂದ
ಹೊರ ಸಮಾಜಕ್ಕೆ ಬರುತ್ತಿದ್ದಾರೆ.
? ಯಾವ ಲಾಲ್ಚೌಕ್ ಮೇಲೆ ಧ್ವಜಾರೋಹಣ ಮಾಡಲು ಬಲಿದಾನವಾಗುತ್ತಿತ್ತೋ ಅಂಥ ಕಾಶ್ಮೀರದಲ್ಲಿ ಈಗ ಕಾಶ್ಮೀರಿಗಳೇ ಭಾರತ ಧ್ವಜ ಹಾರಿಸುವಂತ ವಾತಾವರಣ ನಿರ್ಮಾಣವಾಗಿದೆ.
? ಮುಸಲ್ಮಾನರು ಬದಲಾವಣೆ ಪರ್ವದಲ್ಲಿದ್ದರೆ ನಾವು ಒಪ್ಪಿಕೊಳ್ಳಬಹುದು. ಇಲ್ಲವಾದರೆ ಮೇಲಿಂದ ಮೇಲೆ ಏಟು ತಿನ್ನಬೇಕಾಗು ತ್ತದೆ.
? ಕಾಶ್ಮೀರಿ ಪಂಡಿತರನ್ನು ಮತ್ತೆ ಕಣಿವೆ ರಾಜ್ಯಕ್ಕೆ ಕರೆದೊಯ್ದು ಕೂರಿಸುವುದಲ್ಲ, ಅಲ್ಲಿ ಉಳಿದುಕೊಳ್ಳಲು ಬೇಕಾದ
ವಾತಾ ವರಣ ನಿರ್ಮಿಸಬೇಕು