ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಆಗಿದ್ದ ಪೀಟರ್ ನೆವಿಲ್ ಕ್ರಿಕೆಟ್’ಗೆ ವಿದಾಯ ಹೇಳಿದ್ದಾರೆ.
ಪದೇ ಪದೇ ಗಾಯದಿಂದ ಬಳಲುತ್ತಿರುವ ಪೀಟರ್ ತನ್ನ ಕ್ರಿಕೆಟ್ ವೃತ್ತಿ ಜೀವನ ವನ್ನು ಅಂತಿಮಗೊಳಿಸಲು ನಿರ್ಧರಿಸಿದ್ದಾರೆ.
ನ್ಯೂ ಸೌತ್ ವೇಲ್ಸ್ ಪರವಾಗಿ ಆಡುತ್ತಿದ್ದ ಪೀಟರ್ ನೆವಿಲ್ ಭುಜದ ಗಾಯಕ್ಕೆ ಒಳಗಾಗಿದ್ದರು. ಹೀಗಾಗಿ ಕಳೆದ ಫೆಬ್ರವರಿಯಿಂದ ಆಡಲು ಸಾಧ್ಯವಾಗಿರಲಿಲ್ಲ.
ನನ್ನ ವೃತ್ತಿಜೀವನದ ಉಳಿದ ಭಾಗಗಳಿಗಿಂತ ಗಾಯದ ಕಾರಣದಿಂದ ಈ ಋತುವಿನಲ್ಲಿ ನಾನು ಹೆಚ್ಚಿನ ಪಂದ್ಯಗಳನ್ನು ಕಳೆದು ಕೊಂಡಿದ್ದೇನೆ. ನಾನು ಆಸ್ಟ್ರೇಲಿಯಾಕ್ಕಾಗಿ ಆಡಿದ್ದೇನೆಂದು ಹೇಳಿಕೊಳ್ಳಲು ನಾನು ತುಂಬಾ ಹೆಮ್ಮೆಪಡುತ್ತೇನೆ ಎಂದು ನೆವಿಲ್ ಹೇಳಿದರು.
2015ರ ಆಶಸ್ ಸರಣಿಯಲ್ಲಿ ಪೀಟರ್ ನೆವಿಲ್ ಆಸೀಸ್ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. 17 ಟೆಸ್ಟ್ ಪಂದ್ಯವಾಡರುವ ನೆವಿಲ್ 468 ರನ್ ಗಳಿಸಿದ್ದಾರೆ. 2016ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನೆವಿಲ್ ಕೊನೆಯ ಬಾರಿ ಆಸೀಸ್ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಒಂಬತ್ತು ಟಿ20 ಪಂದ್ಯವಾಡಿರುವ ನೆವಿಲ್ ಗೆ ಏಕದಿನ ಪಂದ್ಯವಾಡುವ ಅವಕಾಶ ಸಿಕ್ಕಿಲ್ಲ.