Wednesday, 11th December 2024

ವಿಶ್ವವಾಣಿ ಪ್ರಯೋಗಕ್ಕೆ ವ್ಯಾಪಕ ಪ್ರಶಂಸೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು

ಕರೋನಾ ಭೀತಿಯಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದ್ದರೂ ವಿಶ್ವವಾಣಿ ಪತ್ರಿಕೆ ಕರೋನಾ ಕುರಿತಂತೆ ವರದಿಯನ್ನು ವಿಭಿನ್ನವಾಗಿ ನೀಡುತ್ತಿರುವ ಕುರಿತು ಓದುಗರ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಲೌಕ್‌ಡೌನ್‌ಗೆ ಸಂಬಂಧಿಸಿದಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶ್ವವಾಣಿ ತನ್ನ ಮುಖಪುಟದಲ್ಲಿ ಮಾಸ್ಟರ್ ಹೆಡ್ ಅನ್ನು ವಿಭಿನ್ನವಾಗಿ ರೂಪಿಸಿ ಸಾಮಾಜಿಕ ಅಂತರದ ಮಹತ್ವ ಸಾರಿತ್ತು. ವಿಶ್ವವಾಣಿಯ ಈ ಪ್ರಯೋಗಕ್ಕೆ ಸಂಬಂಧಿಸಿದಂತೆ ಓದುಗರು, ಪ್ರಯೋಗವೆಂದರೆ ಇದು, ವಿಶ್ವವಾಣಿಯ ಹೆಡ್‌ಮಾಸ್ಟರ್ ಅವರ ಮಾಸ್ಟರ್ ಮೈಂಡ್‌ಗೊಂದು ಸಲಾಂ ಎಂಬುದಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾಾರೆ.

‘ದಿನದ ವಿಶ್ವವಾಣಿ ವಿಭಿನ್ನ ಮತ್ತು ಆರೋಗ್ಯಪೂರ್ಣ’ ಆ ಪತ್ರಿಕೆ ಸಿಗದಿದ್ದರೆ ಇ-ಪತ್ರಿಕೆ ನೋಡಿ ಎಂಬ ವಾಕ್ಯವಂತೂ ಸೂಪರ್, ಮಾಸ್‌ಟ್‌ ಹೆಡ್‌ನಲ್ಲಿ ಸಾಮಾಜಿಕ ಅಂತರದ ಮೂಲಕ ಚೆನ್ನಾಗಿ ಜಾಗೃತಿ ಸಂದೇಶವನ್ನು ನೀಡಿದ್ದೀರಿ ಎಂಬಿತ್ಯಾದಿ ಕಾಮೆಂಟ್‌ಗಳನ್ನು ಜಾಲತಾಣಗಳಲ್ಲಿ ಓದುಗರು ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಅಂತರ ಶಿರೋನಾಮೆಯಲ್ಲೂ ಕಂಡು ಸೊಜಿಗವೆನಿಸಿತು….ವಿಭಿನ್ನವಾದ ಪ್ರಯೋಗಕ್ಕೆ ಅಭಿನಂದನೆಗಳು ಸರ್ ಎಂದು ಓದುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾಾರೆ.

ಜತೆಗೆ ವಿಶ್ವವಾಣಿ ಪ್ರತಿದಿನ ಮುದ್ರಣ ಆವೃತಿ ಜತೆಗೆ ಸಂಜೆ ವೇಳೆಗೆ ಮತ್ತೊೊಂದು ಟೈಮ್ಲಿ ಮಾದರಿಯ ಡಿಜಿಟಲ್ ಆವೃತ್ತಿಯನ್ನು ಹೊರತರುತ್ತಿದ್ದು, ಈ ಪಯೋಗಕ್ಕೂ ಓದುಗರು ಜೈ ಎಂದಿದ್ದಾರೆ. ವಿಶ್ವವಾಣಿಯಿಂದಷ್ಟೇ ಇಂತಹ ಸಂದಿಂಗ್ಧ ಸಂದರ್ಭದಲ್ಲೂ ಇಂತಹ ಪ್ರಯೋಗ ಮಾಡಲು ಸಾಧ್ಯ. ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾದ ಪ್ರಯೋಗಗಳಿಂದಲೇ ಮನೆ ಮಾತಾದ ವಿಶ್ವವಾಣಿ ಈಗ ಮತ್ತೊೊಂದು ಪ್ರಯೋಗದ ಮೂಲಕವೇ ಜನಪ್ರಿಯವಾಗುತ್ತಿದೆ. ಕರೋನಾ ಕಾಡುತ್ತಿರುವ ದಿನಗಳಲ್ಲಿ ವಿಶ್ವವಾಣಿ ನೀಡುತ್ತಿರುವ ಮಹತ್ವಪೂರ್ಣ ಮಾಹಿತಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಪೂರಕವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಒಟ್ಟಾರೆ, ಕರೋನಾ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವವಾಣಿ ನಿರ್ವಹಿಸುತ್ತಿರುವ ಕಾರ್ಯ ಮತ್ತು ಪತ್ರಿಕೆಯನ್ನು ಹೊರತರುವಲ್ಲಿ ತೋರುತ್ತಿರುವ ವಿಭಿನ್ನತೆಗೆ ಓದುಗರು ಮಾರು ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆಗೈದಿದ್ದಾರೆ. ಓದುಗರು ಮತ್ತು ನೆಟ್ಟಿಗರ ಇಂತಹ ಪ್ರೋತ್ಸಾಹ ನಮ್ಮನ್ನು ಮತ್ತಷ್ಟು ಪ್ರಯೋಗಗಳನ್ನು ಮಾಡುವ ಕಡೆಗೆ ಗಮನ ನೀಡುವಂತೆ ಮಾಡಿದೆ ಎನ್ನಬಹುದು.