ಪೋರ್ಟ್ ಬ್ಲೇರ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾನು ವಾರ ಭೂಮಿ ಕಂಪಿಸಿದ ಅನುಭವವಾಗಿದೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.9ರಷ್ಟು ದಾಖಲಾಗಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಮಾಹಿತಿ ನೀಡಿದೆ. ಭಾನುವಾರ ಬೆಳಗ್ಗೆ ಕಂಪನ ಕಂಡು ಬಂದಿದೆ. ಸದ್ಯಕ್ಕೆ ಸುನಾಮಿ ಅಲರ್ಟ್ ನೀಡಲಾಗಿಲ್ಲ. ಭೂಕಂಪದ ತೀವ್ರತೆ 4.9 ಎಂದು ರಿಕ್ಟರ್ ಮಾಪಕ ಸೂಚಿಸಿದೆ.
ಸಮಯ ಸುಮಾರು 07:02:26 IST, ಅಕ್ಷಾಂಶ: 7.50 & ರೇಖಾಂಶ: 94.31, ಆಳ: 10 ಕಿಮೀ ,ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಕ್ಯಾಂಪ್ಬೆಲ್ ಬೇ ಇಂದ 70ಕಿಮೀ ಈಶಾನ್ಯಕ್ಕೆ ಸಂಭವಿಸಿದೆ.
ಇತ್ತೀಚೆಗೆ ಪೋರ್ಟ್ಬ್ಲೇರ್ನ ಆಗ್ನೇಯ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉತ್ತರ-ವಾಯುವ್ಯಕ್ಕೆ 276 ಕಿಮೀ ದೂರದಲ್ಲಿರುವ ದಿಗ್ಲಿಪುರ್ ಬಳಿ ಕಂಪನದ ಅನುಭವ ವಾಗಿತ್ತು.