Saturday, 23rd November 2024

ಯೋಧರು ಸಾಗುತ್ತಿದ್ದ ಬಸ್ ಮೇಲೆ ಉಗ್ರರ ದಾಳಿ

ಶ್ರೀನಗರ: ಯೋಧರು ಸಾಗುತ್ತಿದ್ದ ಬಸ್ ಮೇಲೆ ಸಹ ಶುಕ್ರವಾರ ಉಗ್ರರು ದಾಳಿ ಮಾಡಿದ್ದಾರೆ.

ಈ ನಡುವೆ ಜಮ್ಮು ಮತ್ತು ಕಾಶ್ಮೀರದ ಬಾರಮುಲ್ಲಾದ ಮಾಲ್ವ ಪ್ರದೇಶದಲ್ಲಿ ನಡೆಯುತ್ತಿರುವ ಎನ್‌ಕೌಂಟರ್ 2ನೇ ದಿನಕ್ಕೆ ಕಾಲಿಟ್ಟಿದೆ. ಬುದ್‌ಗಾಂವ್ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಉಗ್ರರ ಜೊತೆ ಗುಂಡಿನ ಕಾಳಗ ನಡೆಸುತ್ತಿವೆ.

ಎಲ್‌ಇಟಿ ಉಗ್ರ ಸಂಘಟನೆ ಕಮಾಂಡರ್ ಯೂಸೂಫ್ ಕಾಂಥ್ರೋ ಸಹ ಸೇರಿದ್ದಾನೆ. ಗುರುವಾರ ಆರಂಭವಾದ ಎನ್‌ಕೌಂಟರ್ ಇನ್ನೂ ಮುಂದುವರೆದಿದೆ. ಕಟ್ಟಡವೊಂದರಲ್ಲಿ ಇನ್ನೂ ಮೂವರು ಉಗ್ರರು ಅಡಗಿ ಕುಳಿತಿದ್ದಾರೆ. ಯೋಧರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ.

ಗುಂಡಿನ ಕಾಳಗದಲ್ಲಿ ಇದುವರೆಗೂ ನಾಲ್ವರು ಯೋಧರು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಮೊದಲು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಯಲ್ಲಿದ್ದ ಯೂಸೂಫ್ ಕಾಂಥ್ರೋ 2005ರಲ್ಲಿ ಬಂಧಿಸಲಾಗಿತ್ತು.

ಟಾಪ್ 10 ಉಗ್ರರ ಪಟ್ಟಿಯಲ್ಲಿದ್ದ ಯೂಸೂಫ್ ಕಾಂಥ್ರೋನನ್ನು ಎನ್‌ ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಳಿದ ಉಗ್ರರ ಗುರುತು ಇನ್ನೂ ಪತ್ತೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಏ.24ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.