ಹರಪನಹಳ್ಳಿ: ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಮಣ್ಣಿನಲ್ಲದೇ ಬದುಕಿಲ್ಲ ಭವಿಷ್ಯವೂ ಇಲ್ಲ. ಮಣ್ಣಿನ ಮೇಲೆ ಅವಲಂಬಿಸಿರುವವರ ಸಂಖ್ಯೆಯೇ ಹೆಚ್ಚು ಹಾಗಾಗಿ ಮುಂದಿನ ಪೀಳಿಗೆಗೆ ಮಣ್ಣಿನ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಾಗಿದೆ ಎಂದು ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಗಳಾದ ಫಕ್ಕಿರವ್ವ ಕೆಳಗೇರಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಪಂಚಾಯತಿ ಕಾರ್ಯಲಯ ಹರಪನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಭೂಮಿ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿಗೆ ನೀರು ಏರೆಯುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು.
ನಾವು ಸೇವಿಸುವ ಆಹಾರ ತೊಡುವ ಬಟ್ಟೆ , ವಾಸಿಸುವ ಮನೆ ಎಲ್ಲದಕ್ಕೂ ಮಣ್ಣನ್ನು ಅತಿಶ್ರೇಷ್ಠ ಮತ್ತು ಪವಿತ್ರ ಎಂದು ಬಣ್ಣಿಸುತ್ತೇವೆ ಆದೇ ರೀತಿ ನಾವು ನಮ್ಮ ಸುಮುತ್ತಲಿನ ಪರಿಸವನ್ನು ಸ್ವಚ್ಚತೆಯಿಂದ ಕಾಪಾಡಿಕೊಂಡು ಗಿಡ ಮರಗಳನ್ನು ಮಕ್ಕಳಂತೆ ಪೋಷಿಸಿ ದಾಗ ಮಾತ್ರ ನಮಗೆ ಆಮ್ಲಜನಕದ ಜೊತೆಗೆ ಉಸಿರಾಡುವುದುಕ್ಕೆ ಸಾಧ್ಯವಾಗುತ್ತದೆ ಆದ್ದರಿಂದ ನಾವುಗಳು ವಾಯುಮಾಲಿನ್ಯವನ್ನು ಬದಿಗೊತ್ತಿ ಶುದ್ಧವಾದ ಪರಿಸರವನ್ನು ಬೆಳಸಿಕೊಂಡಾಗ ಮಾತ್ರ ಶುದ್ಧವಾದ ಮನಸ್ಸು ಪರಿವರ್ತನೆ ಗೊಳ್ಳುವುದಕ್ಕೆ ಸಾಧ್ಯವಾಗು ತ್ತದೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ ಗೌಡ, ಸಮಾಜಿಕ ವಲಯ ಅರಣ್ಯಾಧಿಕಾರಿ ತೊಶನ್ ಕುಮಾರ್, ಮಾತನಾಡಿದರು, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ಡಿ. ನಿರ್ಮಲ, ಖಲಿಲ್, ವಕೀಲರುಗಳಾದ ಬಂಡ್ರಿ ಆನಂದ, ಕೆ. ಕೋಟ್ರೇಶ್, ವಾಮದೇವ, ಹನುಮಂತಪ್ಪ ಸಿ, ಶಿವನಾಗ, ರೇವಣಸಿದ್ದಪ್ಪ, ಕೋಟ್ರೇಶ್, ಬಸವರಾಜ್, ಮತ್ತು ಇತರರು ಇದ್ದರು.
ಚಿತ್ರ:- ಪಟ್ಟಣದ ತಾಲೂಕು ಪಂಚಾಯತಿ ಆವರಣದಲ್ಲಿ ವಿಶ್ವ ಭೂಮಿ ದಿನಾಚರಣೆಯ ಪ್ರಯುಕ್ತ ಸಿವಿಲ್ ನ್ಯಾಯಾಧೀಶರಾದ ಫಕ್ಕಿರವ್ವ ಕೆಳಗೇರಿ ಸಸಿಗೆ ನೀರು ಏರೆದು ಉದ್ಘಾಟಿಸಿದರು.