ಹರಪನಹಳ್ಳಿ: ಶುಕ್ರವಾರ ಸಂಜೆ ಸುರಿದ ಗುಡುಗು-ಗಾಳಿ ಸಹಿತ ಮಳೆಗೆ ಸಿಡಿಲು ಬಡಿದು ೧೭ ಕುರಿಗಳು ಮೃತಪಟ್ಟಿರುವ ಘಟನೆ ತಾಲೂಕಿನ ತೆಲಗಿ ಗ್ರಾಮದ ಕೆರೆಯ ಹತ್ತಿರ ನಡೆದಿದೆ.
ಗ್ರಾಮದ ಕುರಿಗಾಯಿಗಳಾದ ತಿಪ್ಪೇಶಪ್ಪ ಎಂಬುವವರಿಗೆ ಸೇರಿದ ೩ ಕುರಿಗಳು ಮಂಜು ನಾಥ ಸೇರಿದ ೮ ಕುರಿ ತಳವಾರ ರೇವಣ್ಣಪ್ಪ ಎಂಬುವವರಿಗೆ ಸೇರಿದ ೬ ಸೇರಿ ಒಟ್ಟು ೧೭ ಕುರಿಗಳು ಹಾಗೂ ಕುರಿಯಲ್ಲಿದ್ದ ೧ ನಾಯಿ ಸಿಡಿಲಿಗೆ ಬಲಿಯಾಗಿವೆ.
ಕುರಿ ಮೇಯಿಸಿಕೊಂಡು ಶುಕ್ರವಾರ ಸಂಜೆ ವಾಪಾಸು ಮನೆಗೆ ಕರೆತರುವಾಗ ಕೆರೆಯ ದಂಡೆಯ ಬಳಿ ಕುರಿ ಹಿಂಡಿನ ಮೇಲೆ ಸಿಡಿಲು ಬಡಿದ ಪರಿಣಾಮ ಈ ಘಟನೆ ನಡೆದಿದೆ, ಸ್ಥಳಕ್ಕೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಸಂಬ೦ಧ ಹಲುವಾಗಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ಕುರಿಗಳ ಮಾಲೀಕರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ತೆಲಿಗಿ ಗ್ರಾಮದ ಯುವಮುಖಂಡ ಕೆ.ಯೋಗೀಶ ತಾಲೂಕು ಆಡಳಿತವನ್ನು ಒತ್ತಾಯಿಸಿದ್ದಾರೆ.