ಬೆಂಗಳೂರು: ನಿರ್ದೇಶಕ ಅರವಿಂದ್ ಕೌಶಿಕ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಪೊಲೀಸರು ನಿರ್ದೇಶಕನನ್ನು ಬಂಧಿಸಿದ್ದಾರೆ.
ನಮ್ ಏರಿಯಾದಲ್ಲಿ ಒಂದಿನ, ಹುಲಿರಾಯ ಸಿನಿಮಾಗಳ ಮೂಲಕ ಖ್ಯಾತಿಯ ಅರವಿಂದ್ ಕೌಶಿಕ್, ಕಮಲಿ ಸೀರಿಯಲ್ ನಿರ್ದೇಶನದ ಮೂಲಕ ಮನೆ ಮಾತಾ ಗಿದ್ದಾರೆ. ಕಮಲಿ ಧಾರಾವಾಹಿ ನಿರ್ಮಾಪಕ ರೋಹಿತ್ ಎಂಬವರು 73 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರು. ಆದರೆ ಧಾರಾವಾಹಿ ತೆರೆಕಂಡ ಬಳಿಕ ಅರವಿಂದ್, ನಿರ್ಮಾಪಕರಿಗೆ ಕೊಟ್ಟ ಹಣ ಹಾಗೂ ಲಾಭಾಂಶವನ್ನೂ ನೀಡದೇ ವಂಚಿಸಿದ್ದಾರೆ ಎನ್ನಲಾಗಿದೆ.