Friday, 13th December 2024

ಮೋದಿ ಸರ್ಕಾರ ದೇಶದ ಜನರಿಗೆ ಸ್ವರ್ಗದ ಬದಲು ನರಕ ತೋರಿಸುತ್ತಿದೆ: ಸಲೀಂ ಅಹಮದ್

ಹರಪನಹಳ್ಳಿ: ಭಾರತಿಯ ಜನತಾ ಪಾರ್ಟಿ ಸರ್ಕಾರ ೪೦% ಕಮಿಷನ್ ಸರ್ಕಾರ ಲೂಟಿಕೋರರ ಸರ್ಕಾರದಲ್ಲಿ ಭ್ರಷ್ಟಚಾರ ಮುಳುಗಿದೆ ಬದ್ದತೆಯಿಲ್ಲದ ಬಿಜೆಪಿ ಸರ್ಕಾರ ದೇಶದ ಜನರಿಗೆ ಸ್ವಾರ್ಗ ತೋರಿಸುತ್ತೇವೆ ಎಂದು ಹೇಳಿದ್ದರು ಆದರೆ ಕೇಂದ್ರದಲ್ಲಿ ಆಡಳಿತ ನಡೆಸುತ್ತೀರುವ ನರೇಂದ್ರ ಮೋದಿ ಸರ್ಕಾರ ಸುಮಾರು ೮ ವರ್ಷಗಳಿಂದ ದೇಶದ ಜನರಿಗೆ, ಮತ್ತು ಯುವಕರಿಗೆ ನರಕ ತೋರಿಸುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿದೆ. ಇಂತಹ ನೀತಿಗೆಟ್ಟ ಬಿಜೆಪಿ ಸರ್ಕಾರವನ್ನು ರಾಜ್ಯದ ಜನತೆ ತೋಲಗಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಆಹಮದ್ ಹೇಳಿದರು.

ಪಟ್ಟಣದ ತರಳಬಾಳು ಕಲ್ಯಾಣ ಮಂಟಪದಲ್ಲಿ ಬುಧವಾರ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎಂ.ವಿ. ಅಂಜಿನಪ್ಪ ರವರ ಮಗನ ಮಧುವೆಯ ಕಾರ್ಯದಲ್ಲಿ ಭಾಗವಹಿಸಿ ನಂತರ ಸುದ್ದಿ ಗಾರರೊಂದಿಗೆ ಮಾತ ನಾಡಿದ ಅವರು ಬದ್ದತೆಯಿಲ್ಲದ ಸರ್ಕಾರವನ್ನು ತೋಲಗಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿ ಕೊಳ್ಳುತ್ತಿದ್ದೇವೆ ಎಂದು ಉಲ್ಲೇಖಿಸಿದರು.

ರಾಜ್ಯ ಸರ್ಕಾರದ ಉನ್ನತ ಶಿಕ್ಷಣದ ಸಚಿವ ಅಶ್ವಥ್ ನಾರಾಯಣ್ ರವರ ಸಹೋದರನ ಮೇಲೆ ಪಿಎಸ್‌ಐ ಹಗರಣ ದಲ್ಲಿ ತೊಡಗಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಕೂಡಲೇ ಅಶ್ವಥ್ ನಾರಾಯಣ್ ರವರು ನೈತಿಕ ಹೋಣೆ ಹೊತ್ತು ರಾಜಾನಾಮೇ ನೀಡಬೇಕು ಮತ್ತು ಪ್ರಮಾಣಿಕವಾಗಿ ಪರೀಕ್ಷೆ ಬರೆದು ಉತ್ತೀರ್ಣರಾಗಿರುವ ವಿಧ್ಯಾರ್ಥಿ ಗಳನ್ನು ಗುರುತಿಸಿ ಅವರಿಗೆ ಪರಿಹಾರ ವದಸಿಬೇಕು ಪ್ರಕರಣದಲ್ಲಿ ಭಾಗಿಯಾಗಿರುವ ವಿಧ್ಯಾರ್ಥಿಗಳನ್ನು ಹಾಗೂ ರಾಜಕೀಯ ನಾಯಕರನ್ನು ಕೂಡಲೇ ಬಂಧಿಸ ಬೇಕು ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಹರಪನಹಳ್ಳಿ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಸಣ್ಣ ಪುಟ್ಟ ಭಿನ್ನ ಅಭಿಪ್ರಾಯಗಳಿವೆ ಆದರೆ ಆ ಸಣ್ಣ ಪುಟ್ಟ ಭಿನ್ನ ಅಭಿಪ್ರಾಯಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸುತ್ತೇವೆ ಎಂದು ಮಾಧ್ಯದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಮುಂದಿನ ದಿನಗಳಲ್ಲಿ ಹರಪನಹಳ್ಳಿ ವಿಧಾನ ಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ ನಮ್ಮಲ್ಲಿ ಯಾವುದೇ ಭಿನ್ನ ಅಭಿಪ್ರಾಯವಿಲ್ಲ ರಾಜ್ಯದಲ್ಲಿ ಸುಮಾರು ೭೬ ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಬೆಂಬರ್ ಸಿಫ್ ಮಾಡಿಸಿಕೊಂಡಿದ್ದಾರೆ. ಪಕ್ಷ ಸಂಘಟನೆಯಲ್ಲಿ ಯಾವುದೇ ಭಿನ್ನ ಅಭಿಪ್ರಾಯವಿಲ್ಲ ಈಗಾಗಲೇ ಹರಪಹನಳ್ಳಿ ತಾಲೂಕಿನಲ್ಲಿ ಸರ್ವೆ ಮಾಡಿಸಿದ್ದೇವೆ ನಾವು ಪಕ್ಷ ಸಂಘಟನೆಯಲ್ಲಿ ಮುಂಚುಣಿಯಲ್ಲಿದೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ೧೫೦ ಕ್ಕೂ ಹೆಚ್ಚು ವಿಧಾನ ಸಭೆ ಕ್ಷೇತ್ರದ ಸ್ಥಾನ ಜಯಭೇರಿ ಬಾರಿಸಲಿದೆ ಎಂದು ಖಚಿತ ಪಡಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡರಾದ ಡಿ. ಬಸವರಾಜ್, ಎಂ.ವಿ.ಅAಜಿನಪ್ಪ, ಅಬ್ದುಲ್ ರಹಮಾನ್, ಟಿ.ವೆಂಕಟೇಶ್, ಲಾಟಿ ದಾದಾಪೀರ್, ಗೊಂಗಡಿ ನಾಗರಾಜ್ ಗಣೇಶ್, ಸಾಮಾಜಿ ಜಾಲತಾಣದ ರಾಜ್ಯ ಸಂಚಾಲಕ ಎಲ್. ಮಂಜ್ಯಾನಾಯ್ಕ, ಮತ್ತು ಇತರರು ಇದ್ದರು.