ಹರಪನಹಳ್ಳಿ: ತಾಲೂಕಿನ ರಾಜಕೀಯ ಚಿಂತಕರ ಜೊತೆ ಚರ್ಚಿಸಿಕೊಂಡು ನಾನು ಹರಪನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬ ಪ್ರಬಲ ಆಕಾಂಕ್ಷಿಸಿ ಎಂದು ತೀರ್ಮಾನಿಸಿದ್ದೇನೆ. ನನಗೆ ಪಕ್ಷ ಅವಕಾಶ ನೀಡಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ದುಡಿಯು ತ್ತೇನೆ ಎಂದು ಹಡಗಲಿ ತಾಲೂಕು ಇಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದರವರು ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಸುಮಾರು ೨೫ ವರ್ಷಗಳಿಂದ ಹೂವಿನ ಹಡಗಲಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ್ದೇನೆ. ರಾಜಕೀಯ ಜತೆಗೆ ಸಾಮಾಜಿಕ, ಶೈಕ್ಷಣಿಕ ವಾಗಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೆನೆ ಎಂದರು.
ನಾನೂ ಮೂಲತಃ ವಕೀಲನಾಗಿ, ವಕೀಲ ಸಂಘದ ಅಧ್ಯಕ್ಷನಾಗಿ, ಬಳ್ಳಾರಿ ವಿವಿ ಸಂಘದ ಸಹ ಕಾರ್ಯದರ್ಶಿಯಾಗಿ, ಹರಪನಹಳ್ಳಿ ಎಡಿಬಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಗಿ, ಹಡಗಲಿ ತಾಲೂಕಿನಲ್ಲಿ ಎರಡು ಬಾರಿ ತಾಲೂಕು ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಬಿಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದೇನೆ. ಹರಪನಹಳ್ಳಿ ನನಗೆ ಹೊಸತೇನು ಅಲ್ಲ ಎಂದು ಹೇಳಿದರು.
ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು, ಯಾರಾದರೂ ಆಕಾಂಕ್ಷಿಗಳಾಗಬಹುದು, ನಾನು ಯಾರ ನಾಯಕತ್ವದಲ್ಲಿ, ಯಾರ ಮಾತು ಕೇಳಿ ಈ ಕ್ಷೇತ್ರಕ್ಕೆ ಆಕಾಂಕ್ಷಿಯಾಗಿ ಬಂದಿಲ್ಲ, ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ದ್ದೇನೆ. ಆಗಾಗಿ ನನಗೆ ಪಕ್ಷದ ಹೈಕಾಮಾಂಡ ಗುರುತಿಸಿ ನನಗೆ ಅವಕಾಶ ಕಲ್ಪಿಸಿಕೊಟ್ಟರೆ ಪಕ್ಷಕ್ಕಾಗಿ ದುಡಿಯುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣ ಇರುವುದಿಲ್ಲ, ನಾನು ಕಾಂಗ್ರೆಸ್ ಪಕ್ಷದ ಬಣದಲ್ಲಿದ್ದೇನೆ. ಈ ಕ್ಷೇತ್ರದಲ್ಲಿ ೧೦ ಜನ ಆಕಾಂಕ್ಷಿ ಗಳು ಇದ್ದರು ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಯಾರಿಗೆ ಟಿಕೇಟ್ ನೀಡಿದರು ಪಕ್ಷಕ್ಕೆ ಬದ್ದವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯ ಭರತೇಶ ಜೋಗಿನ್, ಪಟ್ನಾಮದ ಪರಶುರಾಮ, ರಾಗಿರೊಟ್ಟಿ ಜಾಕೀರ, ಚಪ್ಪರದಮನೆ ಮಹ್ಮದ್, ಜ್ಯೋತಿ, ಈಶಪ್ಪ, ದಾದಾಪೀರ, ಸೇರಿದಂತೆ ಇತರರು ಇದ್ದರು.