ಸಿರವಾರ: ಈಜಲು ಹೋಗಿದ್ದ ವ್ಯಕ್ತಿ ನಾಪತ್ತೆಯಾಗಿರುವ ಘಟನೆ ಇಂದು ಮಧ್ಯಾಹ್ನ ತಾಲೂಕಿನ ಅತ್ತನೂರು ಗ್ರಾಮ ಪಂಚಾ ಯತಿ ವ್ಯಾಪ್ತಿಯ ತೊಗಲಗುಡ್ಡ ಕ್ಯಾಂಪ್ ಬಳಿ ಇರುವ ತಾಯಪ್ಪ ಎಂಬುವವರ ಕೆರೆಯಲ್ಲಿ ನಡೆದಿದೆ.
ಅತ್ತನೂರು ಗ್ರಾಮದ ಕೆ.ಲಿಂಗಣ್ಣ (35) ಎಂಬಾತ ಬೇಸಿಗೆ ಇರುವುದರಿಂದ ಈಜಲು ಕೆರೆಗೆ ಇಳಿದಿದ್ದಾನೆ. ಈಜು ಬರದೆ ಮುಳುಗಿ ದ್ದಾನೆ. ಅಗ್ನಿಶಾಮಕ ದಳದ ಸಿಬ್ಬಂದಿಗಳು ವ್ಯಕ್ತಿಗಾಗಿ ಶೋಧ ಕಾರ್ಯ ಮುಂದು ವರೆದಿದೆ.