Saturday, 14th December 2024

ಮೌನ ಪ್ರತಿಭಟನೆಗೆ ಮಣಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಾಧವ್

ಚಿಂಚೋಳಿ: ಸತತವಾಗಿ ನಾಲ್ಕು ದಿನಗಳಿಂದ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸಂಬಂಧಿಸಿ, ಶಾಸಕರ ಕಾರ್ಯಾಲಯ ಮುಂದೆ ವಕೀಲ ನಂದಿಕುಮಾರ ಪಾಟೀಲ್ ಅವರ ಮೌನ ಪ್ರತಿಭಟನೆಗೆ ಮಣಿದು ಶಾಸಕ ಡಾ. ಅವಿನಾಶ ಜಾಧವ್ ಅವರು ಪ್ರತಿಭಟನೆ ಸ್ಥಳಕ್ಕೆ ಬಂದು ಮೌನ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು.

ಪೋಲಕಪಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯವಿಲ್ಲದೆ ಗ್ರಾಮ ಮುಳುಗುತ್ತಿದೆ ಎಂದು ಮೂರು ವರ್ಷಗಳಿಂದ ಅಧಿಕಾರಿಗಳಿಗೆ, ಚುನಾಯಿತ ಜನಪ್ರತಿನಿಧಿಗಳಿಗೆ ಶಾಸಕರಿಗೆ, ಸಂಸದರಿಗೆ ಮನವಿಗಳು ಸಲ್ಲಿಸಲಾಗಿತ್ತು. ಒಂದೆರಡು ಬಾರಿ ಸತ್ಯಾಗ್ರಹ, ಪ್ರತಿಭಟನೆಗಳು ಕೂಡ ಮಾಡಿ ಸಮಸ್ಯೆಗಳ ಬಗ್ಗೆ ಗಮನಕ್ಕೆ ತರುವಂತ ಕೆಲಸವೂ ಮಾಡಲಾಯಿತು. ಆದರೂ, ನಮಗೆ ಸ್ಪಂದನೆ ನೀಡದಿದ್ದಾಗ ಮೌನ ಪ್ರತಿಭಟನೆ ಕೈಗೊಳ್ಳಲಾಗಿತ್ತು.

ಶನಿವಾರ ಶಾಸಕರು ಸ್ಥಳಕ್ಕೆ ಭೇಟಿ ನೀಡಿ, ಮೌನ ಪ್ರತಿಭಟನೆಯನ್ನು ಕೈಬಿಡಿ, ನಿಮ್ಮ ಗ್ರಾಮದ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿ, ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಗ್ರಾಮದ ಅಭಿವೃದ್ಧಿ ಕೆಲಸಗಳನ್ನು ಕೈಗೊಳು ತ್ತೇನೆ ಎಂದು ಶಾಸಕ ಡಾ. ಅವಿನಾಶ ಜಾಧವ್ ಅವರು ಹೇಳಿ ಸಂಪೂರ್ಣ ಭರವಸೆ ನೀಡಿದರಿಂದ ನಾನು ಮೌನ ಪ್ರತಿಭಟನೆಯನ್ನು ಮೋಟಕುಗೊಳಿಸಿ, ಹಿಂದಕ್ಕೆ ತೆಗೆದುಕೊಂಡಿದ್ದೇನೆ ಎಂದು ನಂದಿಕುಮಾರ ಪಾಟೀಲ್  ತಿಳಿಸಿದ್ದರು.

ಸ್ಪಂದನೆ ಸಮಸ್ಯೆಯಿಂದ ಗ್ರಾಮದ ಜನರು ತೊದರೆಗಳು ಅನುಭವಿಸುತ್ತಿದರು. ಮಹಿಳೆಯರ ಶೌಚಾಲಯ, ಕುಡಿಯುವ ನೀರು, ಮುಖ್ಯ ರಸ್ತೆ, ಸ್ವಚ್ಛತೆಯಿಂದ