ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಎರಡು ಯುದ್ಧ ನೌಕೆಗಳ ಸೇರ್ಪಡೆಯಿಂದ ಭಾರತೀಯ ನೌಕಾ ಪಡೆಯ ಶಸ್ತ್ರಾಗಾರಕ್ಕೆ ಮತ್ತಷ್ಟು ಬಲ ಬಂದಿದೆ. ಇದು ವಿಶ್ವಕ್ಕೆ ಭಾರತದ ಯುದ್ಧ ಸಾಮರ್ಥ್ಯ ಮತ್ತು ಸ್ವಂತ ಬಲದ ಪರಿಚಯ ಮಾಡಿಕೊಳ್ಳಲಿದೆ ಎಂದು ಹೇಳಿದರು.
ಮೇಕ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳನ್ನುದೇಶಿಯವಾಗಿ ನಿರ್ಮಿಸ ಲಾಗಿದೆ. ಇತರೆ ದೇಶಗಳಿಗೂ ಕೂಡ ನಾವು ಈ ರೀತಿಯ ಯುದ್ಧ ನೌಕೆಗಳನ್ನು ತಯಾರಿಸಿಕೊಡಲು ಸಿದ್ಧವಾಗಿದ್ದೇವೆ. ಈ ಮೂಲಕ ಮೇಕ್ ಫಾರ್ ವಲ್ಡ್ಗೆ ಭಾರತ ಅಣಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾವು ಶಾಂತಿಯುತ, ನಿಷ್ಪಕ್ಷಪಾತವಾದ, ಸ್ಥಿರವಾದ ಮತ್ತು ನಿಯಮಗಳ ಆಧಾರದ ಜಲ ಸಂಬಂಧವನ್ನು ಬಯಸುತ್ತೇವೆ. ಅಲ್ಲದೇ ಪಾರಾದರ್ಶಕ, ಸುರಕ್ಷಿತ ಮತ್ತು ನಿರ್ಭೀತ ಇಂಡೋ-ಫೆಸಿಫಿಕ್ ಪ್ರದೇಶವೇ ಭಾರತೀಯ ನೌಕಾ ಪಡೆಯ ಗುರಿಯಾಗಿದೆ ಎಂದು ಸಿಂಗ್ ತಿಳಿಸಿದರು.
ಕರೋನಾ ನಡುವೆಯೂ ಐಎನ್ಎಸ್ ಸೂರತ್ ಮತ್ತು ಐಎಸ್ಎನ್ ಉದಯಗಿರಿ ಯುದ್ಧ ನೌಕೆಗಳ ತಯಾರಿಕೆಯನ್ನು ಮಾಜ್ಗಾಂವ್ ಡಾಕ್ಸ್ ಲಿಮಿಟೆಡ್ (ಎಂಡಿಎಲ್) ಸಂಸ್ಥೆ ಮುಂದುವರಿಸಿತು.