Saturday, 23rd November 2024

ಏಕರೂಪ ನಾಗರಿಕ ಸಂಹಿತೆ ಕೂಡಲೇ ಜಾರಿಯಾಗಲಿ: ರಾಜ್​ ಠಾಕ್ರೆ

ಪುಣೆ: ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಬೇಕು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಕೂಡಲೇ ಜಾರಿಗೊಳಿಸ ಬೇಕೆಂದು ಮಹಾ ರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್​ ಠಾಕ್ರೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿ, ಔರಂಗಾ ಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಬೇಕೆಂದೂ ಆಗ್ರಹಿಸಿದ್ದಾರೆ.

 

ಶಿವಸೇನೆ ಕಾರ್ಯಕರ್ತರು ಮತ್ತು ರಾಣಾ ದಂಪತಿ ನಡುವೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾದರೆ, ‘ಮಾತೋಶ್ರೀ’ ಏನು ಮಸೀದಿಯೇ ಎಂದು ಪ್ರಶ್ನಿಸಿದರು.