Saturday, 23rd November 2024

ಮುಸ್ಲಿಮರು ಇದನ್ನು ಅರ್ಥೈಸಿಕೊಳ್ಳಬೇಕಿದೆ !

ದಾಸ್ ಕ್ಯಾಪಿಟಲ್

ಟಿ.ದೇವಿದಾಸ್

dascapital1205@gmail.com

ಆಚರಣೆಗಳಲ್ಲಂತೂ ತೀರಾ ಎಂಬಷ್ಟು! ಹಾಗಾಗಿ ಆ ಮತ ಇನ್ನೂ ವಿಕಾಸವನ್ನೇ ಕಾಣಲಿಲ್ಲ ಎಂಬ ಮಾತಿದೆ. ಹಿಂದೂ ಗಳು ಉದಾರ ಭಾವದಿಂದ ಬದುಕಲು ಸಾಧ್ಯವಾಗುವುದು ಅದರಲ್ಲಿರುವ ಉದಾತ್ತ ಸ್ಥಾಯೀಗುಣವಾದ ಔದಾರ್ಯ ವೆಂಬ ಮೌಲ್ಯದಿಂದ!

ಉಡುಪಿಯ ಸರಕಾರಿ ಮಹಿಳಾ ಕಾಲೇಜೊಂದರ ಆರು ಹಿಜಾಬ್‌ದಾರಿ ಹುಡುಗಿಯರ ವರ್ಗಾವಣೆ ಪತ್ರ (Transfer Certificate) ದಲ್ಲಿ ಏನು ಬರೆಯಬೇಕು, ಬರೆಯತ್ತಾರೆ, ಬರೆಯಬಹುದು ಎಂದು ಮೊನ್ನೆ ಮಿತ್ರರೊಬ್ಬರು ಕೇಳಿದಾಗ ನನಗೂ ಕುತೂಹಲ ಮೂಡಿತು. ಇಡೀ ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ಸಂಘರ್ಷಗಳಿಗೆ ಮೂಲ ಕೇಂದ್ರ ವಾಗಿ ಕಾಣುವುದು ಉಡುಪಿ ಸರಕಾರಿ ಮಹಿಳಾ ಕಾಲೇಜಿನ ಆರು ಮುಸ್ಲಿಂ ಹುಡುಗಿಯರ ಧಾಷ್ಟ್ಯದ ವರ್ತನೆ. ಹಿಜಾಬನ್ನು ತರಗತಿಯೊಳಗೂ ಧರಿಸುವುದಕ್ಕೆ ಅವಕಾಶ ನೀಡ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ ದುರಂತವೇ ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲ ಗೋಜಿಗೆ ಕಾರಣ ವೆಂದು ನೋವಿನಿಂದ ಹೇಳಬೇಕಾಗಿದೆ.

ನಾವೆಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ನಂಬಿಕೆಯನ್ನು ಇಟ್ಟು ಒಟ್ಟಂದದಲ್ಲಿ ಸೌಹಾ ರ್ದತೆಯನ್ನು ಸಾಮರಸ್ಯವನ್ನು ನಿತ್ಯದ ಬದುಕಿನಲ್ಲಿ ಅನುಭವಿಸುತ್ತಾ ಬದುಕು ಸಾಗಿಸು ತ್ತಿದ್ದೆವು. ಈ ಸಂಬಂಧಕ್ಕೆ ಎಳ್ಳುನೀರು ಬಿಡುವ ಕೆಟ್ಟ ಬೆಳವಣಿಗೆಯೊಂದು ಆ
ಆರು ಹುಡುಗಿಯರಿಂದ ಆದದ್ದು ಈಗ ಹಲಾಲ್, ಆಜಾನ್, ಜಾತ್ರೆಗಳಲ್ಲಿ ಮುಸ್ಲಿಂರಿಗೆ ಅಂಗಡಿಗಳನ್ನು ತೆರೆಯಲು ನಿಷೇಧ, ಇನ್ನೂ ಹಲವು ವಿಚಾರಗಳು ಮೇಲೆ ಬಿದ್ದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಈ ಮಧ್ಯೆ ಸಂಘರ್ಷದ ಕಾವು ಹೆಚ್ಚುವಂತೆ ಒಬ್ಬ ಹಿಂದೂವಿನ ಕೊಲೆಯೂ ಆಗಿಹೋದದ್ದು ಸರ್ವಸಮಾನತೆಯ ನಾಡಾದ ಕನ್ನಡ ನೆಲದ ದುರಂತವೇ ಸರಿ.

ಈ ಹಿನ್ನೆಲೆಯಲ್ಲಿ ಹುಟ್ಟಿದ ಪ್ರಶ್ನೆಯೆಂದರೆ, ಆ ಆರು ಮುಸ್ಲಿಂ ಹುಡುಗಿಯರ ವರ್ಗಾವಣೆ ಪತ್ರ, conduct certificate ದಲ್ಲಿ ಏನು ಬರೆಯುತ್ತಾರೆ? ಏನು ಬರೆಯಬಹುದು? ಏನು ಬರೆಯಬೇಕು? ಅರೆ, ಹೌದಲ್ಲ ಅಂತ ಯಾರಿಗೂ ಅನಿಸದೇ ಇರದು. ಸಾಮಾನ್ಯ ವಾಗಿ ವರ್ಗಾವಣೆ ಪತ್ರ (Transfer Certificate) ದಲ್ಲಿ Satisfactory, Good, better, best ಅಂತಲೇ ಬರೆಯುವುದು ವಾಡಿಕೆ. ಇದರಲ್ಲೂ Satisfactory ಅಂತ ಸಾಮಾನ್ಯವಾಗಿ ಬರೆಯುವುದು, ಬರೆಯುತ್ತಾರೆಂಬುದು ಎಲ್ಲರಿಗೂ ಗೊತ್ತು. ಹಾಗೆ ಈ ಆರು ಮುಸ್ಲಿಂ ಹುಡುಗಿಯರಿಗೂ ಬರೆದುಕೊಟ್ಟರೆ ಅದಕ್ಕೇನು ಮೌಲ್ಯ ಇದ್ದೀತು? ಯಾಕೆಂದರೆ, ಶಾಲೆಗಳನ್ನು ಮುಚ್ಚಿಸಿದ, ರಾಜ್ಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಡಕು ತಂದಿಟ್ಟ, ಶಿಕ್ಷಣ ಇಲಾಖೆಗೇ ಸವಾಲೆಸೆದ, ಬಹುಸಂಖ್ಯಾತ ಹಿಂದೂ ವಿದ್ಯಾರ್ಥಿಗಳು ಮತ್ತು ಇತರ ಸಮುದಾಯದ ವಿದ್ಯಾರ್ಥಿಗಳ ಮಾನಸಿಕತೆಯನ್ನು ಹದಗೆಡಿಸಿದ, ಘನ ನ್ಯಾಯಾಲಯದ ಅಮೂಲ್ಯ ಸಮಯ ವನ್ನು ಹಾಳುಗೆಡವಿದ (ಇಷ್ಟು ಸಣ್ಣ ವಿಚಾರವನ್ನು ನ್ಯಾಯಾಲಯ ಎತ್ತಿಕೊಳ್ಳುವ ದುಃಸ್ಥಿತಿ ಬಂದದ್ದು ಇತಿಹಾಸದ ಕಪ್ಪು ಚುಕ್ಕೆಯಾಗಿ ಕಂಡದ್ದು), ಅನೇಕ ಸಜ್ಜನ ಮುಸ್ಲಿಮರಿಗೂ ಇರಿಸು ಮುರಿಸನ್ನು ಉಂಟು ಮಾಡಿದ, ನಿಜಾರ್ಥದಲ್ಲಿ ಯಾವ ಮತ-ಧರ್ಮದ ಹಂಗೂ ಇಲ್ಲದೆ ಸೌಹಾರ್ದತೆ ಮತ್ತು ಸಮಗ್ರತೆಯ ಭಾವದಿಂದ ಬದುಕುವ ಮತಾನುಯಾಯಿಗಳಿಗೂ ಹೇಸಿಗೆಯನ್ನು ಹುಟ್ಟಿಸಿದ, ಅಸಹ್ಯ ಭಾವವನ್ನು ಉದ್ದೀಪಿಸಿದ, ಪರಮ ಮಾತ್ಸರ್ಯದ ದ್ವೇಷವನ್ನು ಎಲ್ಲ ಬಗೆಯ ಪೂರ್ವಗ್ರಹಗಳೊಂದಿಗೆ ಒಂದೇ ಸಮನೆ ಬಿತ್ತಿ, ಘನ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ, ಜಗತ್ದ್ವಾಪಿ ಭಾರತದ ಮಾನವನ್ನು ಸಣ್ಣ ವಿಚಾರಕ್ಕೆ ಬಲಿಗೊಟ್ಟ ಆರು ಮುಸ್ಲಿಂ ಹುಡುಗಿಯರ ವರ್ಗಾವಣೆ ಪತ್ರ ಹೇಗಿರಬೇಕು, ಹೇಗಿರ ಬಹುದು, ಅಥವಾ ಹೇಗಿರುತ್ತದೆಂಬ ಕುತೂಹಲ ಯಾರಲ್ಲಿ ಹುಟ್ಟಲಾರದು, ಹೇಳಿ!

ಹೋಗಲಿ ಬಿಡಿ. ಅದು ಹೇಗಾದರೂ ಇರಲಿ. ಭಾರತದ ಅದೆಷ್ಟೋ ಹಳ್ಳಿಗಳಲ್ಲಿ ತಾವು ಮುಸ್ಲಿಮರು ಎಂಬುದನ್ನೂ ಮರೆತಂತೆ ಬದುಕುವ ಮುಸ್ಲಿಮರಿzರೆ. ಅಂದರೆ ಅವರಿಗೆ ಬದುಕು ಮುಖ್ಯವೇ ಹೊರತು ಮತವಲ್ಲ. ಗುಜರಿಯನ್ನು ಕೆಜಿಯಲ್ಲಿ ಅಳೆದು ತೂಗುವ ಪಾಪದ ಬಡ ಮುಸ್ಲಿಮರು ಏನು ಮಾಡಬೇಕು ಇಂಥ ಉದ್ವಿಗ್ನ ಪರಿಸ್ಥಿತಿ ಸಂಭವಿಸಿದಾಗ! ಅವರು ತಮ್ಮ ಸಮುದಾ ಯಕ್ಕೆ ಸೇರಿದವರಲ್ಲ ಎಂಬ ಅರಿವಲ್ಲೂ ಅವರೊಂದಿಗೆ ಶತ-ಶತಮಾನಗಳೊಂದಿಗೆ ಸೌಹಾರ್ದ ಭಾವದಲ್ಲಿ ಒಂದಾಗಿ ಬದುಕುವ ಅದೆಷ್ಟೋ ಹಿಂದುಗಳಿದ್ದಾರೆ.

ಈ ಮನುಷ್ಯ ಶ್ರೇಷ್ಠ ಭಾವದಿಂದ ಬದುಕುವ ಅದೆಷ್ಟೋ ಮನುಷ್ಯ ಸಂಕುಲದ ಸ್ವಾಸ್ಥ್ಯದ ಪ್ರಜ್ಞೆ ನಿತ್ಯದ ಬದುಕಲ್ಲಿ ಹಾಸು ಹೊಕ್ಕಾಗಿರುತ್ತದೆ. ಇಂಥವರು ಬದುಕಿನ ಪಡಿಪಾಟಲಿಗೆ ಹೈರಾಣಾಗುತ್ತ, ತಾವು ನಂಬಿದ ಜೀವನಮೌಲ್ಯಗಳಿಗೆ ಬದ್ಧರಾಗಿಯೇ ಜೀವನವನ್ನು ಸಾಗಿಸುವ ಪರಮ ಔದಾರ್ಯವುಳ್ಳವರು. ಇಂಥವರಿಗೆ ರಾಜಕೀಯದ ಯಾವ ಗಂಧವೂ ಇರುವುದಿಲ್ಲ. ಅದರ ಅಗತ್ಯವೂ ಅವರಿಗಿರುವುದಿಲ್ಲ.

ದೇಶಪ್ರೇಮದ ಚಿಂತೆ ಇಂಥವರಲ್ಲಿ ಸ್ಥಾಯೀ ಯಾಗೇ ಇರುತ್ತದೆ. ಇಂಥವರ ಸ್ಥಾಯೀಭಾವವನ್ನು ದೊಡ್ಡದಾದ ಕಲ್ಲನ್ನು ಆಳೆತ್ತರ ದಿಂದ ಹಾಕಿ ಕಲಕಿದ ಆರು ಮುಸ್ಲಿಂ ಹಿಜಾಬ್ಧಾರಿಗಳ ಇಟ್ಞbಠಿ ಇಛ್ಟಿಠಿಜ್ಛಿಜ್ಚಿZಠಿಛಿ ಹೇಗೆ ಬರೆಯಬೇಕು? ಬರೆಯ ಬಹುದು? ಬರೆದಾರು? ಪರಿಣಾಮವೇನೆಂದರೆ, ಈಗ ಯಾವ್ಯಾವ ಮಾರ್ಗದಲ್ಲಿ ಮತ ಸಂಘರ್ಷವನ್ನು ಮುಂದುವರೆಸಲು ಸಾಧ್ಯವೋ ಅಲ್ಲ ಹಿಂದೂ ಮುಸ್ಲಿಂ ಸಂಘಟನೆಗಳು, ಆಯಾ ಮತಾನುಯಾಯಿಗಳು ಒಂದೋ ನೇರಾನೇರ, ಇಲ್ಲ ಮೌನ ವಾಗಿಯೇ ಮುಂದು ವರೆಸುತ್ತಿದ್ದಾರೆ.

ಪರಸ್ಪರ ನಿಷೇಧದ ಹಠವನ್ನು ಬೆಳಸುವ ಮನೋಭಾವಕ್ಕೆ ಕಿಡಿ ಹೊತ್ತಿಸಿದ ಆ ಆರು ಮುಸ್ಲಿಂ ಹಿಜಾಬ್ಧಾರಿಗಳ ಕಲಿಕಾ ಮನೋ ಧರ್ಮದ ಬಗ್ಗೆ ಯಾವ ಪ್ರಮಾಣದ ಗ್ರೇಡನ್ನು ನೀಡಬೇಕು? ನೀಡುತ್ತಾರೆ? ಇದೆಲ್ಲ ಬೇಕಿತ್ತಾ? ಚೆನ್ನಾಗಿಯೇ ಇದ್ದ ನಮ್ಮ ಒಗ್ಗಟ್ಟಲ್ಲಿ ಒಡಕು ಮೂಡಿಸುವ ಪ್ರಯತ್ನವಲ್ಲವೇ ಇದು? ಹಿಂದೂ ಧರ್ಮವೆಂದರೆ ಅವ್ಯವಸ್ಥಿತ ಸಂಘಟನೆ. ಅದರದ್ದು ಅತ್ಯಂತ ವಿಕೇಂದ್ರೀಕೃತ ಶಕ್ತಿ. ಕೇಂದ್ರೀಕೃತ ಶಕ್ತಿ ಅದೆಷ್ಟೇ ಬಲಾಢ್ಯವಿದ್ದರೂ ನಿರ್ಣಾಯಕ ಹಂತದಲ್ಲಿ ಇನ್ನೊಂದು ಶಕ್ತಿ ಅದನ್ನು ನಾಶ ಪಡಿಸಬಲ್ಲುದು. ಆದರೆ ವಿಕೇಂದ್ರೀಕೃತ ಶಕ್ತಿ ಇದೆಯಲ್ಲ ಅದೆಷ್ಟೇ ದುರ್ಬಲವಿದ್ದರೂ ಅದನ್ನು ಸಂಪೂರ್ಣವಾಗಿ ನಾಶ ಪಡಿಸಲು ಯಾರಿಂದಲೂ ಸಾಧ್ಯವಿಲ್ಲ.

ಆದ್ದರಿಂದ ಈ ವಿಕೇಂದ್ರೀಕೃತ ಶಕ್ತಿಯನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿರುವ ಹಿಂದೂ ಧರ್ಮ ಎಂಥೆಂಥ ಆಕ್ರಮಣಗಳನ್ನೂ ಸಹಿಸಿಕೊಂಡಿದೆ. ಆಕ್ರಮಣಗಳ ನಡುವೆಯೂ ಸೆಟೆದು ನಿಂತು ತನ್ನ ಬಲವನ್ನು ವೃದ್ದಿಸಿಕೊಂಡಿದೆ. ಅಂಥ ಪರಮಾದ್ಭುತ ಶಕ್ತಿಯನ್ನು ಹೊಂದಿರುವ ಹಿಂದೂ ಧರ್ಮ ಇತ್ತೀಚಿನ ಬೆಳವಣಿಗೆಯಲ್ಲಿ ಕೇಂದ್ರೀಕೃತಗೊಳ್ಳುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಯಲ್ಲ ಎಂಬುದನ್ನು ಹಿಂದೂಗಳು ಮೊದಲು ಅರ್ಥೈಸಿಕೊಳ್ಳಬೇಕು.

ತಾತ್ವಿಕವಾಗಿ ಹಿಂದೂ ಧರ್ಮ ಯಾವತ್ತೂ ಏಕವ್ಯಕ್ತಿ, ಏಕ ಸಿದ್ಧಾಂತ, ಏಕ ದೇವೋಪಾಸನೆಯನ್ನು ಪ್ರತಿಪಾದಿಸಲಿಲ್ಲ. ಅಷ್ಟೇ ಅಲ್ಲ ಅದಕ್ಕೆ ಶರಣಾಗತವಾಗಲಿಲ್ಲ. ಈಗ ಅದನ್ನು ಏಕವ್ಯಕ್ತಿಗೊಳಿಸುವ ಪ್ರಯತ್ನವೇ ಬಹುದೊಡ್ಡದಾದ ಸಮೃದ್ಧ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶಮಾಡುವ ಅಪಾಯವನ್ನು ಸೃಷ್ಟಿಸಿಕೊಂಡಂತಾಗುತ್ತಿದೆ. ಈ ಏಕೀಕೃತಗೊಳಿಸುವ ಕ್ರಿಯೆ ಹಿಂದೂ ಧರ್ಮವನ್ನು ಇಸ್ಲಾಮೀಕರಣಗೊಳಿಸುವ ಕ್ರಿಯೆಯಾಗುತ್ತದೆ. ಯಾವಾಗ ಹಿಂದೂ ಧರ್ಮ ಏಕೀಕೃತ ಗೊಳ್ಳುತ್ತದೋ ಆಗ ಸುಲಭವಾಗಿ ಆಕ್ರಮಣ ಮಾಡಲು ಅವಕಾಶ ಕೊಟ್ಟಂತಾಗುತ್ತದೆ.

ಮೊದಲಿಂದಲೂ ಈ ದೇಶ ಬಹುಜನಾಂಗೀಯ ಸಂಸ್ಕೃತಿ ಯನ್ನು ಜತನದಿಂದ ಉಳಿಸಿಕೊಂಡಿದೆ. ಈ ನೆಲವನ್ನು ಪ್ರವೇಶ ಮಾಡಿದ ಯಾವ ಜನಾಂಗವೂ ಇಲ್ಲಿಯ ಜನಾಂಗವನ್ನು ನಾಶಪಡಿಸಲಿಲ್ಲ. ಹಾಗಂತ ಸೋತವರ ಮೇಲೆ ನಾನಾ ರೀತಿಯ ದಬ್ಬಾಳಿಕೆ, ಶೋಷಣೆ, ದೌರ್ಜನ್ಯ ನಡೆಸಿದ್ದಾರೆ. ಆದರೆ ಯಾರೂ ಇಡಿಯ ಜನಾಂಗವನ್ನೇ ನಿರ್ಮೂಲನ ಮಾಡಲು ಪ್ರಯತ್ನಿಸ ಲಿಲ್ಲ. ಅಂಥ ದುಸ್ಸಾಹಸಕ್ಕೆ ಕೈ ಹಾಕಿಲಿಲ್ಲ. ಹಾಗೆ ಬಂದವರು ಈ ನೆಲದ ಸಂಸ್ಕೃತಿ ಪರಂಪರೆಯೊಂದಿಗೆ ಒಂದಾದರು. ಬೆರೆತರು. ತಮ್ಮ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡೇ ಇಡಿಯ ಜೀವ ಸಂಕುಲದ ಉಸಿರಿಗೆ ಎರವಾದರು.

ಮುಸ್ಲಿಂ ರಾಜರು ಲೂಟಿ ಮಾಡಿದ್ದಿದೆ. ನಾಶ ಮಾಡಿದ್ದಿದೆ. ಗುಲಾಮರನ್ನಾಗಿಸಿದ್ದಿದೆ. ಕೊಲೆ ಸುಲಿಗೆಯನ್ನು ಯಥೇಚ್ಛವಾಗಿ ಮಾಡಿದ್ದಿದೆ. ಇವೆಲ್ಲವೂ ಚರಿತ್ರೆಯಾಗಿ ನಾವು ಓದಿದ್ದೇವೆ. ಅಂಥ ಮುಸ್ಲಿಂ ರಾಜರುಗಳ ವಾರಸುದಾರರಾಗಿ ಸರಿಹೊತ್ತಿನ ಮುಸ್ಲಿಮರು ಅರ್ಥೈಸಬಾರದು. ಸರಿಹೊತ್ತಿನ ಮುಸ್ಲಿಮರು ಅಂಥ ರಾಜರುಗಳ ವಾರಸುದಾರರಲ್ಲ ಎಂಬುದನ್ನು ಹಿಂದೂಗಳು
ಅರ್ಥೈಸಬಾರದು.

ಶ್ರೀರಾಮ, ಶ್ರೀಕೃಷ್ಣರನ್ನು ಪೂಜಿಸುವುದು ದೇವರೆಂಬ ನಂಬಿಕೆಯಿಂದ. ಒಂದು ದೈವೀಶಕ್ತಿ ಯಾವತ್ತೂ ಜೀವವಿರೋಧಿ ಯಾಗಿರಲು ಸಾಧ್ಯವಿಲ್ಲ. ಇಂದು ಹಿಂದೂ ಧರ್ಮದ ಬಹುದೊಡ್ಡ ತಾಕತ್ತು. ಈ ತಾಕತ್ತು ಬಂದಿರುವುದು ಅಂಥ ದೈವೀಶಕ್ತಿ ಯನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಿದ ಗೆಲುವಿನಿಂದ! ದೇವರುಗಳಿಗೆ ಮನುಷ್ಯ ಶರಣಾಗುವುದು, ಮನುಷ್ಯರಿಗೆ ದೇವರುಗಳು ಶರಣಾಗುವುದು ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ! ಮುಸ್ಲಿಂರಲ್ಲಿ ಈ ಬಗೆಯ ಸ್ವಾತಂತ್ರ್ಯವಿಲ್ಲ. ಅವರದ್ದೇ ನಿದ್ದರೂ ವೈಚಾರಿಕವಾದ ಕಾಠಿಣ್ಯತೆ!

ಆಚರಣೆಗಳಲ್ಲಂತೂ ತೀರಾ ಎಂಬಷ್ಟು! ಹಾಗಾಗಿ ಆ ಮತ ಇನ್ನೂ ವಿಕಾಸವನ್ನೇ ಕಾಣಲಿಲ್ಲ ಎಂಬ ಮಾತಿದೆ. ಹಿಂದೂಗಳು ಉದಾರಭಾವದಿಂದ ಬದುಕಲು ಸಾಧ್ಯವಾಗುವುದು ಅದರಲ್ಲಿರುವ ಉದಾತ್ತ ಸ್ಥಾಯೀಗುಣವಾದ ಔದಾರ್ಯವೆಂಬ ಮೌಲ್ಯ ದಿಂದ! ಹಿಂದೂ ಸ್ವಭಾವತಃ ಉದಾರವೇ ಆಗಿರುವುದರಿಂದ ಔದಾರ್ಯವನ್ನು ಆರೋಪಿಸಿಕೊಳ್ಳುವ ಅಗತ್ಯವಿಲ್ಲ, ಆವಾಹಿಸಿ ಕೊಳ್ಳುವ ಅನಿವಾರ್ಯತೆಯಿಲ್ಲ. ಹೇಗೆ ಹುಸಿ ಹಿಂದುತ್ವವನ್ನು ಕಾಂಗ್ರೆಸ್ ಚುನಾವಣೆ ಹೊತ್ತಿಗೆ ತನ್ನಲ್ಲಿ ಆರೋಪಿಸಿ ಕೊಂಡು, ಆವಾಹಿಸಿಕೊಂಡು ಅಭಿವ್ಯಕ್ತಿಸುತ್ತದೋ ಅಂಥ ದರ್ದು ಹಿಂದೂವಿಗೆ ಇಲ್ಲವೇ ಇಲ್ಲ. ಮುಸ್ಲಿಮರು ಇದನ್ನು ಅರ್ಥೈಸಿ ಕೊಳ್ಳಬೇಕಿದೆ. ಅರ್ಥೈಸಿಕೊಂಡು ನಿಮ್ಮ ಅಸ್ಮಿತೆಯನ್ನು ಹೊಸ ವಿನ್ಯಾಸದಲ್ಲಿ ಅಭಿವ್ಯಕ್ತಿಸಿಕೊಳ್ಳಬೇಕಿದೆ!