ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
camohanbn@gmail.com
ಅರುಂಧತಿ ರಾಯ ಈಕೆಯ ಆಪ್ತ ಶಿಷ್ಯೆ. ದಾಂತೇವಾಡದಲ್ಲಿ ನಕ್ಸಲರು ಭಾರತೀಯ ಸೈನಿಕರನ್ನು ಕೊಂದ ನಂತರ ಜೆಎನ್‌ಯು ನಲ್ಲಿ ಸಂಭ್ರಮಾಚರಣೆ ಮಾಡಿದವರ ಪರವಾಗಿ ನಿಂತವಳು ಈಕೆ. ನಕ್ಸಲರನ್ನು ಸಮರ್ಥಿಸಿಕೊಂಡ ಈಕೆ ಅವರನ್ನು ಗನ್ ಹಿಡಿದ ‘ಗಾಂಧಿ’ಗಳು ಎಂದು ಕರೆದಳು.
ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರ ಬುದ್ಧಿಜೀವಿಗಳಿಗೆ ನಿದ್ದೆ ನೀಡುತ್ತಿಲ್ಲ. ಅತ್ತ ಕಾಂಗ್ರೆಸ್ ತನ್ನ ಕಾಲದಲ್ಲಿ ಪ್ರಕಟಿಸಿದ್ದಂತಹ ರಾಷ್ಟ್ರವಿರೋಧಿ ಪಠ್ಯಗಳನ್ನು ತೆಗೆದರೆ ಎಲ್ಲಿ ತಮ್ಮ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ ಮತ ಬ್ಯಾಂಕಿಗೆ ಗುನ್ನ ಬೀಳುತ್ತದೆಂಬ ಭಯದಿಂದ ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಿದೆ. ನೆಹರು ಕಾಲದಲ್ಲಿ ಭವ್ಯ ಭಾರತದ ಇತಿಹಾಸ ವನ್ನು ಪಠ್ಯದಲ್ಲಿ ಅಳವಡಿಸಲು ಕಮ್ಯುನಿಸ್ಟರಿಗೆ ಗುತ್ತಿಗೆ ನೀಡಲಾಗಿತ್ತು.
ಅಂಬೇಡ್ಕರರು ಭಾರತ ಸ್ವಾತಂತ್ರ್ಯವಾದ ನಂತರ ಏನಾಗುತ್ತದೆಂದು ಊಹಿಸಿದ್ದರೋ ಅದೇ ರೀತಿ ನಡೆದಿತ್ತು. ಅತ್ತ ಕ್ರಿಶ್ಚಿಯನ್ ಮಿಷನರಿಗಳ ಸುಳ್ಳು ಸಂಶೋಧನೆಗಳು, ಸುಳ್ಳು ಆರ್ಯವಾದದಿಂದ ಹುಟ್ಟಿದಂತಹ ದ್ರಾವಿಡ ಸಿದ್ಧಾಂತ, ಬ್ರಾಹ್ಮಣ ವಿರೋಧಿ ಚಳವಳಿ ಗಳಿಂದ ಹುಟ್ಟಿಕೊಂಡಂಥ ದಲಿತ ಪಕ್ಷಗಳು, ಇಸ್ಲಾಮಿನ ಕಟ್ಟರ್ ಸಿದ್ಧಾಂತದ ಮೇಲೆ ಮತ್ತು ಕಮ್ಯುನಿಸ್ಟ್ ಸಿದ್ಧಾಂತದ ಮೇಲೆ ಹುಟ್ಟಿಕೊಂಡಂಥ ಪಕ್ಷಗಳು ತಮ್ಮ ಟೊಳ್ಳು ವಾದಗಳನ್ನು ಮಂಡಿಸಲು ಬಳಸಿಕೊಂಡಂತಹ ಮಾಧ್ಯಮವೆಂದರೆ ಪಠ್ಯಪುಸ್ತಕ.
ಪಾಶ್ಚಿಮಾತ್ಯ ದೇಶಗಳಲ್ಲಿ ನಾಯಿಗಳಂತೆ ಜಗಳವಾಡುವ ಕ್ರಿಶ್ಚಿಯನ್ ಹಾಗೂ ಮುಸಲ್ಮಾನರು ಭಾರತದಲ್ಲಿ ಒಂದಾಗಿದ್ದಾರೆ. ಕಾರಣ ಹಿಂದೂ ಧರ್ಮದ ಮೇಲೆ ಕ್ರಿಶ್ಚಿಯನ್ ಮಿಷನರಿಗಳು ತಮ್ಮ ‘ಸಾಫ್ಟ್ ವೇರ್’ ಮೂಲಕ ಆಕ್ರಮಣ ಮಾಡುತ್ತಾರೆ. ಇಸ್ಲಾಮಿಕ್ ಸಂಘಟನೆಗಳು ತಮ್ಮ ಪೂರ್ವಜರಾದಂಥ ಬಾಬರ್, ಔರಂಗಜೇಬ್, ಟಿಪ್ಪುವಿ ನಂತೆ ‘ಹಾರ್ಡ್ ವೇರ್’ ಮೂಲಕ ಆಕ್ರಮಣ ಮಾಡುತ್ತಾರೆ. ಇವರ ಆಕ್ರಮಣಗಳನ್ನು ಮರೆಮಾಚಿ ಸಮಜಾಯಿಷಿ ಕೊಡಲು ಕಮ್ಯುನಿಸ್ಟ್ ಗಂಜಿ ಗಿರಾಕಿಗಳು ಪಠ್ಯಗಳಲ್ಲಿ ತಮಗಿಷ್ಟ ಬಂದಂತೆ ಬರೆಯುತ್ತಾರೆ.
ಸ್ವಾತಂತ್ರ ಕಾಲದಿಂದಲೂ ಭಾರತೀಯ ಶಿಕ್ಷಣ ವ್ಯವಸ್ಥೆ ಕಮ್ಯುನಿಸ್ಟರ ಕೈಯಲ್ಲಿತ್ತು. ಸ್ವತಃ ನೆಹರು ಈ ಸಿದ್ಧಾಂತದ ಆರಾಧಕ ರಾಗಿದ್ದರಿಂದ ವಿಶ್ವವಿದ್ಯಾಲಯಗಳೆಲ್ಲವೂ ಇವರಿಂದಲೇ ತುಂಬಿ ತುಳುಕುತ್ತಿದ್ದವು. ‘ರುಮೇಲ ಥಾಪರ್’ ಜೆಎನ್‌ಯುನ ಆರಂಭದ
ದಿನಗಳಲ್ಲಿಯೇ ಬಂದು ಸೇರಿಕೊಂಡ ಕಮ್ಯುನಿಸ್ಟ್ ಪ್ರಾಧ್ಯಾಪಕಿ. ಇಸ್ಲಾಮಿಕ್ ದಾಳಿಗಳನ್ನು ಮರೆಮಾಚಿ, ಅವರ ಡಮ್ಮಿ ವಾಸ್ತು ಶಿಲ್ಪದ ಬಗ್ಗೆ ಪುಟಗಟ್ಟಲೆ ಮಕ್ಕಳ ಪಠ್ಯ ಬರೆದ ಮಹಾನ್ ಲೇಖಕಿ. ಈಕೆಯ ಇತಿಹಾಸ ಕೃತಿಗಳೆಲ್ಲವೂ ಮಾರ್ಕ್ಸ್ ಸಿದ್ಧಾಂತ ದಂತೆ ಭಾರತೀಯ ಇತಿಹಾಸದ ಪರಂಪರೆಯ ಅಸಡ್ಡೆಗಷ್ಟೇ ಮೀಸಲು.
ಈಕೆ ಬರೆದ ಇತಿಹಾಸವನ್ನೇ ನಂಬಿಕೊಂಡಂತಹವರು ಪತ್ರಕರ್ತರಾದರು, ಲೇಖಕ, ಸಾಹಿತಿ, ವಕೀಲ, ರಾಜಕೀಯ ಮತ್ತು ವಿದ್ಯಾರ್ಥಿ ನಾಯಕರಾದರು. ‘ಅರುಂಧತಿ ರಾಯ’ ಈಕೆಯ ಆಪ್ತ ಶಿಷ್ಯೆ. ದಾಂತೇವಾಡದಲ್ಲಿ ನಕ್ಸಲರು ಭಾರತೀಯ ಸೈನಿಕರನ್ನು ಕೊಂದ ನಂತರ ಜೆಎನ್‌ಯುನಲ್ಲಿ ಸಂಭ್ರಮಾಚರಣೆ ಮಾಡಿದವರ ಪರವಾಗಿ ನಿಂತವಳು ಈಕೆ. ನಕ್ಸಲರನ್ನು ಸಮರ್ಥಿಸಿಕೊಂಡ
ಈಕೆ ಅವರನ್ನು ಗನ್ ಹಿಡಿದ ‘ಗಾಂಧಿ’ಗಳು ಎಂದು ಕರೆದಳು.
ದೇಶವನ್ನು ತುಂಡು ತುಂಡು ಮಾಡುತ್ತೇವೆಂದು ಹೇಳಿದವರ ಪರವಾಗಿ ನಿಂತವಳು ಈಕೆ. ಈಕೆಯನ್ನು ಅನುಸರಿಸುತ್ತಿದ್ದಂತಹ ಕರ್ನಾಟಕದ ಗೌರಿ ಲಂಕೇಶ್ ಬರೆದ ಪುಸ್ತಕಗಳನ್ನು ಓದಬೇಕೆ? ರುಮೇಲ ಥಾಪರ್ ಸಂತತಿಯ ಬುದ್ಧಿಜೀವಿಗಳು ಕರ್ನಾಟಕ ದಲ್ಲಿಯೂ ಇದ್ದಾರೆ. ಮೈಸೂರಿನ ಮಹೇಶ್ ಚಂದ್ರರಿಗೆ ಭಗವದ್ಗೀತೆಯಲ್ಲಿನ ನೈತಿಕ ವಿಜ್ಞಾನ ಬೇಕಿಲ್ಲ. ಬದಲಾಗಿ ವಿದೇಶಿ ನಿರ್ವಹಣಾ ಪ್ರಾಧ್ಯಾಪಕ ಪೀಟರ್ ಡ್ರಕರ್‌ನ ನಿರ್ವಹಣಾ ಜ್ಞಾನ ಬೇಕಂತೆ.
ಭಗವದ್ಗೀತೆಯಲ್ಲಿನ ಮೌಲ್ಯವನ್ನು ಪಠ್ಯದಲ್ಲಿ ಸೇರಿಸಿದರೆ ಕೇಸರೀಕರಣವೆಂದು ಬೊಬ್ಬೆ ಇಡುತ್ತಾರೆ. ಕಮ್ಯುನಿಸ್ಟರು ‘ಮೌಖಿಕ ಭಯೋತ್ಪಾದನೆ’ಯ ಜನಕರು ‘ಪುರೋಹಿತಶಾಹಿ’ ‘ಬುದ್ಧಿ ಜೀವಿ’ ‘ವಿಚಾರವಾದಿ’ ‘ಆಜಾದಿ’ ಪದಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳನ್ನು ಎತ್ತಿ ಕಟ್ಟುವಲ್ಲಿ ನಿಸ್ಸೀಮರು. ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿಯೂ ಇದೇ ಮಾದರಿಯ ಪದಬಳಕೆಯ ಮೂಲಕ ಒಂದಷ್ಟು ಸಂಘಟನೆಗಳನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ.
ಬರಗೂರು ರಾಮಚಂದ್ರಪ್ಪ ತಮ್ಮ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲಿ 16 ಜನ ಬ್ರಾಹ್ಮಣರನ್ನು ಉಲ್ಲೇಖಿಸಿದಾಗ ನೆನಪಾಗದ ಬ್ರಾಹ್ಮಣ್ಯದ ಹೇರಿಕೆ ರೋಹಿತ್ ಚಕ್ರತೀರ್ಥನ ಪರಿಷ್ಕರಣೆಯ ಸಂದರ್ಭದಲ್ಲಿ ನೆನಪಾಗಿದೆ. ತಮ್ಮ ಪಠ್ಯದಲ್ಲಿ ಸುಮಾರು 550 ವರ್ಷಗಳ ಕಾಲ ಮೈಸೂರನ್ನು ಆಳಿದ ಒಡೆಯರ ಇತಿಹಾಸವನ್ನು ಅಲ್ಪಮಾತ್ರ ತಿಳಿಸಿ, ಕೇವಲ 17 ವರ್ಷ ಆಳಿದ ಹೇಡಿ, ಕ್ರೂರಿ,
ಮತಾಂಧ ಟಿಪ್ಪುವಿನ ಇತಿಹಾಸವನ್ನು ಪುಟಗಟ್ಟಲೆ ಪಠ್ಯದಲ್ಲಿ ಸೇರಿಸುತ್ತಾರೆ.
ಟಿಪ್ಪು ಶೃಂಗೇರಿ ಮಠಕ್ಕೆ ನೀಡಿದ ದಾನವನ್ನು ಮಾತ್ರ ಮಕ್ಕಳ ಪಠ್ಯದಲ್ಲಿ ಹೇಳಿದ್ದವರಿಗೆ, ಆತ ದಾನ ನೀಡಿದ ಕೈಗಳಲ್ಲಿ ಮೇಲು ಕೋಟೆ ಬ್ರಾಹ್ಮಣರ ರಕ್ತವಿತ್ತೆಂದು ಹೇಳಿಲ್ಲ. ಟಿಪ್ಪು ಸುಲ್ತಾನ್‌ನನ್ನು ಸಮಾಜ ಸುಧಾರಕನೆಂದು ಪಠ್ಯದಲ್ಲಿ ಹೇಳಿದ್ದವರಿಗೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ರ ಸಮಾಜ ಸುಧಾರಣೆ ಯಾಕೆ ಪಠ್ಯದಲ್ಲಿ ಕಾಣಿಸಲಿಲ್ಲ? ಮೈಸೂರಿನ ಕಾಂಗ್ರೆಸ್ ನಾಯಕರು ಒಡೆಯರ ಇತಿಹಾಸ ಮರೆಮಾಚಿದ ಪಠ್ಯ ರಚನಕಾರರ ಪರವಾಗಿ ನಿಲ್ಲುತ್ತಿರುವುದು ಕರ್ನಾಟಕದ ಜನತೆಗೆ ಬಗೆದ ದ್ರೋಹ. ಅತ್ತ ಕುವೆಂಪುರ ವಿಚಾರದಲ್ಲಿ ಕಾಂಗ್ರೆಸ್ ತನ್ನದೇ ಅವಧಿಯಲ್ಲಿ ಪರಿಷ್ಕೃತವಾದಂಥ ಪಠ್ಯದ ಪುಟವೊಂದನ್ನಿಟ್ಟುಕೊಂಡು ರೋಹಿತ್ ಚಕ್ರತೀರ್ಥರ ಮೇಲೆ ಮುಗಿ ಬೀಳುತ್ತಿದೆ.
ಕುವೆಂಪು ಅವರ ಜ್ಞಾನಪೀಠ ಕೃತಿ ಶ್ರೀರಾಮಾಯಣ ದರ್ಶನಂ ಪಠ್ಯವನ್ನು ಬರಗೂರು ರಾಮಚಂದ್ರಪ್ಪ ನೇತೃತ್ವದ ಪರಿಷ್ಕರಣ ಸಮಿತಿ ಪಠ್ಯದಿಂದ ಕೈಬಿಟ್ಟು ಕನ್ನಡಿಗರಿಗೆ ಬಹುದೊಡ್ಡ ಅವಮಾನ ಮಾಡಿತ್ತು. ಸದಾ ಹಿಂದಿ ಭಾಷಿಕರ ಹಿಂದೆ ಬೀಳುವ ಹಲವು ಕನ್ನಡಪರ ಸಂಘಟನೆಗಳು ಮೈಸೂರು ಅರಸರು ಹಾಗೂ ಕುವೆಂಪುವಿಗೆ ಕಾಂಗ್ರೆಸ್ ಮಾಡಿದ ಅವಮಾನದ ವಿರುದ್ಧ ಮಾತನಾಡ ಲಿಲ್ಲ. ಬಿಜೆಪಿ ಪಠ್ಯದ ಮೂಲಕ ತನ್ನ ಸಿದ್ಧಾಂತವನ್ನು ಮಕ್ಕಳ ತಲೆಯಲ್ಲಿ ತುಂಬುತ್ತಿದೆಯೆಂದು ಹೇಳುವ ಕಾಂಗ್ರೆಸ್
ನಾಯಕರು, ತಮ್ಮ ಕಾಲದಲ್ಲಿ ನೆಹರುವನ್ನು ವೈಭವೀಕರಿಸುವ ಮೂಲಕ ತಮ್ಮ ಮತ ಬ್ಯಾಂಕನ್ನು ಗಟ್ಟಿ ಮಾಡಿಕೊಂಡಿದ್ದರು.
ನೆಹರುವಿಗೂ ಮಕ್ಕಳ ದಿನಾಚರಣೆಗೂ ಸಂಬಂಧವೇ ಇಲ್ಲ. ಇಡೀ ವಿಶ್ವ ನವೆಂಬರ್ 20ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಿದರೆ ಭಾರತ ಮಾತ್ರ 6 ದಿನ ಮುಂಚೆ, ನೆಹರು ಹುಟ್ಟಿದ ದಿನದಂದು ಆಚರಿಸುತ್ತದೆ. ಮಕ್ಕಳ ವಿಷಯದಲ್ಲಿಯೂ ರಾಜಕೀಯ ಮಾಡುವ ಉಪಾಯ ನೀಡಿದ್ದು ಮತ್ತದೇ ಕಮ್ಯುನಿಸ್ಟರು. 2017ರಲ್ಲಿ ನಡೆದ ಬರಗೂರು ರಾಮಚಂದ್ರಪ್ಪರ ಪಠ್ಯ
ಪರಿಷ್ಕರಣೆಯಲ್ಲಿ ಮಹಾತ್ಮಾ ಗಾಂಧಿ, ಸ್ವಾಮಿ ವಿವೇಕಾನಂದ, ಅಂಬೇಡ್ಕರರ ಪಠ್ಯವನ್ನು ಕೈಬಿಡಲಾಗಿತ್ತು. ಮಾತು ಮಾತಿಗೂ ದಲಿತರ ಪರವೆಂದು ಬೊಬ್ಬೆ ಹೊಡೆಯುವ ಕಾಂಗ್ರೆಸ್ ನಾಯಕರು ಅಂಬೇಡ್ಕರರಿಗೆ ಮಾಡಿದ ಬಹುದೊಡ್ಡ ಅವಮಾನ ಇದಾ ಗಿತ್ತು. ಅಂಬೇಡ್ಕರರ ಪಠ್ಯವನ್ನು ಕೈಬಿಟ್ಟಾಗ ಬೀದಿಗಿಳಿಯದ ದಲಿತ ಸೇನೆಯ ಕಾರ್ಯಕರ್ತರು ಈಗ ಬೀದಿಗಿಳಿಯುತ್ತೇವೆಂದು ಹೇಳುವುದು ಹಾಸ್ಯಾಸ್ಪದ.
ಕ್ರಿಶ್ಚಿಯನ್ ಮಿಷನರಿಗಳ ತಾಳಕ್ಕೆ ಕುಣಿಯುವ ಕಾಂಗ್ರೆಸ್ ಮದರ್ ಥೆರೇಸಾರನ್ನು ವೈಭವೀಕರಿಸಿತ್ತು. ಭಾರತದಲ್ಲಿ ಆಕೆ ಮಾಡಿದ ಸೇವೆಯನ್ನು ಯಾರೂ ಮಾಡಿಲ್ಲವೆಂದು ಪಠ್ಯದಲ್ಲಿ ಹೇಳಲಾಗಿತ್ತು. ಸೇವೆಯ ಹೆಸರಿನಲ್ಲಿ ಆಕೆಯ ಮಿಷನರಿ ನಡೆಸಿದ ಮತಾಂತ ರದ ಬಗ್ಗೆ ಪಠ್ಯದಲ್ಲಿ ಹೇಳಲೇ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಕಪಿಮುಷ್ಠಿಯಲ್ಲಿ ಸಿಕ್ಕಿ ಭಾರತ ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಲ್ಲಿತ್ತು.
ಸ್ವಾತಂತ್ರ್ಯಾ ನಂತರ ಈಸ್ಟ್ ಇಂಡಿಯಾ ಕಂಪನಿಯ ಮತ್ತೊಂದು ಮಗ್ಗುಲಾಗಿ ಕಾಂಗ್ರೆಸ್ ವರ್ತಿಸುತ್ತಿದೆ. ಐರ್ಲೆಂಡ್ ದೇಶದಿಂದ ಭಾರತಕ್ಕೆ ಬಂದು ವಿವೇಕಾನಂದರ ಆದರ್ಶಗಳನ್ನು ಒಪ್ಪಿ ಸಮಾಜ ಸೇವೆಯಲ್ಲಿ ತೊಡಗಿದ ಸೋದರಿ ನಿವೇದಿತಾಳ ಬಗ್ಗೆ ಪಠ್ಯ ದಲ್ಲಿ ಎಲ್ಲಿಯೂ ಹೇಳಲಿಲ್ಲ. ರವೀಂದ್ರನಾಥ್ ಟಾಗೋರ್, ಜಗದೀಶ್ ಚಂದ್ರ ಬೋಸ್‌ರಂತಹ ಮಹಾನುಭಾವರೇ ಆಕೆಯ ಸಲಹೆ ಯನ್ನು ಪಡೆಯುತ್ತಿದ್ದರು. ಅಂತಹ ಮಹಾನ್ ನಾಯಕಿಯ ಇತಿಹಾಸವನ್ನು ಮಕ್ಕಳಿಗೆ ತಿಳಿ ಹೇಳುವ ಪ್ರಯತ್ನವನ್ನೇ ಮಾಡದ ಕಾಂಗ್ರೆಸ್ ಇಂದು ಪಠ್ಯ ಪುಸ್ತಕ ಪರಿಷ್ಕರಣೆಯನ್ನು ಕೇಸರೀಕರಣವೆಂದು ಹೇಳುತ್ತಿದೆ.
ಗಾಂಧಿ ತತ್ವವನ್ನು ಪಾಲಿಸುತ್ತಿದ್ದಂತಹ ಕಾಂಗ್ರೆಸ್ಸಿಗರಿಗೆ ಇದ್ದಕ್ಕಿದ್ದ ಹಾಗೆ ಭಗತ್ ಸಿಂಗ್ ಮೇಲೆ ಕರುಣೆ ಉಕ್ಕಿ ಬರುತ್ತಿದೆ. ಯುಪಿಎ ಅವಧಿಯಲ್ಲಿ 2004-12ರ ನಡುವೆ ರಾಷ್ಟ್ರೀಯ ಪುಸ್ತಕ ದತ್ತಿಯ ಅಧ್ಯಕ್ಷನಾಗಿದ್ದ ಬಿಪಿನ್ ಚಂದ್ರ ಬರೆದಿರುವ ಪುಸ್ತಕ ’INDIA’s Struggle for Independence’ ನಲ್ಲಿ ಭಗತ್ ಸಿಂಗ್ ರನ್ನು ‘ಕ್ರಾಂತಿಕಾರಿ ಭಯೋತ್ಪಾದಕ’ನೆಂದು ಕರೆಯಲಾಗಿದೆ. ಸದಾ ಸುಳ್ಳಿ ನಿಂದಲೇ ರಾಜಕೀಯ ಮಾಡುವ ಕಾಂಗ್ರೆಸ್ ಭಗತ್ ಸಿಂಗ್ ಪಠ್ಯದ ವಿಚಾರದಲ್ಲಿ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವ ಮೂಲಕ ತನ್ನ ಮುಖವಾಡವನ್ನು ತಾನೇ ಕಳಚಿಕೊಂಡಿದೆ.
ಪ್ರಸ್ತುತ ನಡೆಯುತ್ತಿರುವ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಭಗತ್ ಸಿಂಗ್‌ರ ಪಠ್ಯದಲ್ಲಿ, ಸುಖದೇವ್ ಹಾಗೂ ರಾಜ್‌ಗುರುರವರ ವಿಚಾರವನ್ನೂ ಸೇರಿಸಿ ವಿಷಯಗಳನ್ನು ಹೆಚ್ಚಿಸಲಾಗಿದೆ. ಪಠ್ಯಪುಸ್ತಕ ರಚನೆಯಲ್ಲಿ ತೊಡಗಿದ್ದಂತಹ ಕಮ್ಯುನಿಸ್ಟ್ ಪಾಪಿಗಳು ಮಾಡಿರುವ ಅವಾಂತರಗಳು ಒಂದೊಂದಲ್ಲ. ಬರವಣಿಗೆಯನ್ನು ಕಲಿಯುವವರೆಗೂ ಜನರು ನಾಗರಿಕರಾಗಿರಲಿಲ್ಲವೆಂದು ಹೇಳಿ ದ್ದರು. ವೇದಗಳು ಬರೆಯಲ್ಪಟ್ಟಿಲ್ಲ ಅವು ಕೇವಲ ಕೇಳಿ ಕಲಿತವೆಂಬ ಮಾತನ್ನು ಮುಂದಿಟ್ಟುಕೊಂಡು ಅವುಗಳನ್ನು ‘ಅನಾಗರಿಕ ಕಾವ್ಯ’ ಗಳೆಂದು ನಂಬಿಸುವಲ್ಲಿ ಯಶಸ್ವಿಯಾಗಿಬಿಡುತ್ತಾರೆ.
ವೇದಕಾಲದಲ್ಲಿ ಗೋಮಾಂಸ ತಿನ್ನುತ್ತಿದ್ದರೆಂದು ಸುಳ್ಳು ಹೇಳಿ, ಬ್ರಾಹ್ಮಣರು ಗೋಮಾಂಸ ಭಕ್ಷಕರೆಂಬ ಸುಳ್ಳನ್ನು ಹಬ್ಬಿಸಿ
ದ್ದರು. ತಾವು ಹಬ್ಬಿಸಿದ ಹಸಿ ಸುಳ್ಳುಗಳಿಗೆ ಅವರಿಗೆ ಪುರಾವೆ ನೀಡಿರೆಂದರೆ ಇದುವರೆಗೂ ನೀಡಲಾಗಿಲ್ಲ. ಕಮ್ಯುನಿಸ್ಟರು ಮೊದಲು ಸುಳ್ಳುಗಳನ್ನು ಹೇಳಿ, ಅದನ್ನು ವಿಸ್ತಾರವಾಗಿ ಬರೆದು,ಪ್ರಭಾವ ಬೀರಿ ಪ್ರಶಸ್ತಿ ಪಡೆದು, ನಂತರ ಪ್ರಶಸ್ತಿ ಪುರಸ್ಕೃತ ಲೇಖಕನೆಂಬ ಹಣೆಪಟ್ಟಿ ಪಡೆಯುತ್ತಾರೆ. ಅವರು ಬರೆದ ಕೃತಿಗಳನ್ನು ಪ್ರಶಸ್ತಿ ಪುರಸ್ಕೃತ ಕೃತಿ ಎಂದು ಹೇಳಿ ತಮ್ಮ ಸುಳ್ಳುಗಳನ್ನು ಪಠ್ಯಗಳಲ್ಲಿ
ಹೇರಲು ಶುರು ಮಾಡುತ್ತಾರೆ.
ಸ್ವತಂತ್ರ ಬಂದಾಕ್ಷಣ ಇವರನ್ನು ಮೂಲೆಗುಂಪು ಮಾಡಬೇಕಿತ್ತು. ಆದರೆ ಕಾಂಗ್ರೆಸ್ಸಿನ ನೆಹರು ದೇಶ ವಿಭಜಕ ಮನಸ್ಥಿತಿಗಳನ್ನು ಬೆಳೆಸುವ ಸಲುವಾಗಿ ಇಂತಹವರ ಕೈಗೆ ಪಠ್ಯವನ್ನು ನೀಡಿದರು. ಈಗ ಅವರದ್ದೇ ಪಕ್ಷದವರು ಕಮ್ಯುನಿಸ್ಟ್ ಪಠ್ಯಕ್ಕೆ ಬೆಂಬಲಿಸುವ
ಮೂಲಕ ನೆಹರುವಿನ ಬಾಲಬಡುಕರಾಗಿದ್ದಾರೆ. ಇದೆಲ್ಲವನ್ನೂ ಲೆಕ್ಕಿಸದೆ ಡೋಂ ಬುದ್ಧಿಜೀವಿಗಳ ಪಠ್ಯದಿಂದ ಮುಕ್ತಿ ನೀಡು ತ್ತಿರುವ ರಾಜ್ಯ ಸರಕಾರದ ಕಾರ್ಯ ನಿಜಕ್ಕೂ ಶ್ಲಾಘನೀಯ.