Saturday, 23rd November 2024

ಮಹಾದೇವರೇ, ಈ ಮಾತನ್ನು ನಿರೀಕ್ಷಿಸಿರಲಿಲ್ಲ !

ದಾಸ್ ಕ್ಯಾಪಿಟಲ್

dascapital1205@gmail.com

ಎಡಪಂಥದ ಹಾದಿಯೇ ತೀರಾ ಇಕ್ಕಟ್ಟಾದುದು. ಕ್ರಮಿಸುವಾಗ ಜಾಗರೂಕರಾಗಿರಬೇಕು. ಆದರೆ ಬಲಪಂಥದ ಹಾದಿಯ ವಿಸ್ತಾರ ಬಹು ಅಗಲವಾದುದು. ವ್ಯಾಪ್ತಿ ವಿಸ್ತಾರವಾದುದು. ಅದು ವಿಶಾಲವಾದ ಹೈವೆ ಇದ್ದ ಹಾಗೆ.

ಒಬ್ಬ ವ್ಯಕ್ತಿಯೇ ಇರಲಿ, ಒಂದು ಘಟಕವೇ ಇರಲಿ, ವ್ಯವಸ್ಥೆಯೇ ಇರಲಿ, ಪ್ರಯೋಗಶೀಲತೆ ಇಲ್ಲದಿದ್ದರೆ ಜಡ್ಡುಗಟ್ಟಿ ಹೋಗುವುದು ನೂರಕ್ಕೆ ನೂರು ಸತ್ಯ ಎಂಬುದು ದೇವನೂರು ಮಹಾದೇವರಂಥವರಿಗೆ ಗೊತ್ತಿಲ್ಲದೇನಲ್ಲ. ಹಾಗಂತ ಪ್ರಯೋಗಶೀಲತೆ ಚಟವಾಗ ಬಾರದು. ಹಠವೂ ಆಗಬಾರದು. ಪ್ರಯೋಗವೊಂದೇ ಮುಖ್ಯ ಧ್ಯೇಯವಾದರೆ, ಮಾಡಲೇ ಬೇಕೆಂಬ ಧಾರ್ಷ್ಟ್ಯ ಧೋರಣೆ ಯಾದರೆ ವ್ಯಕ್ತಿ, ಘಟಕ, ವ್ಯವಸ್ಥೆ ಕ್ರಮೇಣ ವಿರೂಪವಾಗುತ್ತ ಹೋಗುತ್ತದೆ.

ಸ್ವಂತಿಕೆ ನಾಶವಾಗುತ್ತದೆ. ಅಂದರೆ ಮಾಡಲೇ ಬೇಕಾದ ಸಂದರ್ಭದಲ್ಲಿ ಪ್ರಯೋಗಶೀಲತೆ ಮಾಡಿದರೆ ಅದು ಯಶಸ್ಸೂ ಆಗುತ್ತದೆ. ಹೊಸತನ್ನು ಸಾಧಿಸಬೇಕು, ಹಳೆಯದಕ್ಕೆ ಚಾಲನಾ ಶಕ್ತಿ ನೀಡಬೇಕು ಎಂಬ ಈ ಎರಡೂ ಉದ್ದೇಶಗಳಿಂದ ಪ್ರಯೋಗಶೀಲತೆ ನಡೆಯುತ್ತದೆ. ನಡೆಯಬೇಕು.

ಈ ಪ್ರಯೋಗಶೀಲತೆಯ ಹಿನ್ನೆಲೆಯಲ್ಲಿ ಬರಗೂರು ರಾಮಚಂದ್ರಪ್ಪನವರ ಸರ್ವಾಧ್ಯ ಕ್ಷತೆಯಲ್ಲಿ ನಡೆದ ಪಠ್ಯ ಪುಸ್ತಕ ರಚನೆಯನ್ನು ಈಗಿನ ಬಿಜೆಪಿ ಸರಕಾರ ಮರು ಪರಿಷ್ಕರಣೆ ಯಲ್ಲಿ ತೊಡಗಿ ಪರಿಷ್ಕರಣೆ ಮುಗಿಸಿದೆ. ಈಗಾಗಲೇ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಪರಿಷ್ಕೃತ ಪಠ್ಯವಾಗಿ ಚರ್ಚೆ, ವಾದ, ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದೆ.

u ಟ್ಠ್ಟoಛಿ ಇದು ಸರ್ವೇ ಸಾಮಾನ್ಯವಾದ ವಿಚಾರ. ಇಂಥ ತಾರಕ ಪ್ರಸಂಗಗಳು ಹೇಗೆ ಹುಟ್ಟುತ್ತವೆ? ಯಾಕೆ ಹುಟ್ಟುತ್ತವೆ? ಎಲ್ಲಿಂದ ಹುಟ್ಟುತ್ತವೆ? ಯಾರಿಂದ ಹುಟ್ಟುತ್ತವೆ? ಅದರ ಬೆಳವಣಿಗೆಗಳು ಹೇಗೆ ಸಾಗುತ್ತವೆ ಮತ್ತು ಕೊನೆಯಲ್ಲಿ ಹೀಗೆಯೇ ಅಂತ್ಯ ಆಗುತ್ತ ದೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಯಾವುದೇ ವಿಷಯದಲ್ಲಿರಲಿ, ಕಾಂಗ್ರೆಸ್ ಮಾಡಿದ್ದನ್ನು ಬಿಜೆಪಿ ಬದಲಾಯಿಸುತ್ತದೆ. ಕಾರಣ, ಕಾಂಗ್ರೆಸ್ಸಿನ ಧೋರಣೆಯನ್ನು ಬಿಜೆಪಿ ಒಪ್ಪದೇ ಇರುವುದು.

ಅದೇ ರೀತಿ ಬಿಜೆಪಿ ಧೋರಣೆಯನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಈ ಬದಲಾಯಿಸುವ ಮತ್ತು ವಿರೋಧಿಸುವ ಮೇಲಾಟದಲ್ಲಿ ಒಂದಿಷ್ಟು ಸತ್ಯ(?)ದ ಮುಖಗಳು ಅನಾವರಣ ಆಗಿ, ಆ ಸತ್ಯದ ಪರ ಮತ್ತು ವಿರೋಧ ದನಿಗಳು ಹೆಚ್ಚುತ್ತಾ ಹೋಗುತ್ತದೆ. ಈ
ವಿರೋಧ ಮತ್ತು ಬದಲಾವಣೆಯ ಹಿಂದೆ ಒಂದು ಬಗೆಯ ರಾಜಕೀಯ ಇತಿಹಾಸದ ಸಮರವೂ ದ್ವೇಷದ ಸ್ವರೂಪ ದಲ್ಲಿದೆ ಎಂಬುದು ಗೊತ್ತಿಲ್ಲದ ವಿಚಾರವೇನಲ್ಲ. ಈ ಸ್ವರೂಪ ದಲ್ಲಿ ಕನ್ನಡದ ಕೆಲವು ಸಾಹಿತಿಗಳು ಮೊದಲಿಂದಲೂ ಭಾಗಿಯಾಗಿದ್ದಾರೆ. ಯುಆರ್ ಅನಂತಮೂರ್ತಿ ಎಡಪಂಥೀಯ ನಿಲುವಿನ ಕಾಂಗ್ರೆಸ್‌ನ್ನು ಓಲೈಸಿದ್ದನ್ನು ಅವರ ಬದುಕಿನ ಒಟ್ಟೂ ನಡೆಯನ್ನು ಅವಲೋಕಿಸಿದರೆ ಅರಿವಾಗುತ್ತದೆ.

ಇವರದ್ದೊಂದು ದೊಡ್ಡ ಪಟಾಲಂಬೇ ಇದೆಯೆಂಬ ಮಾತು ಸಾಹಿತ್ಯದ ವಲಯದಲ್ಲಿ ಮೊದಲಿಂದಲೂ ಇದೆ. ಅವರನ್ನು
ಹಿಂಬಾಲಿಸಿದರೆ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನ, ಪದವಿ ಮತ್ತು ಅವಕಾಶಗಳು ಸಿಗುತ್ತಿತ್ತೆಂಬುದು ರಹಸ್ಯವಾಗಿಲ್ಲ. ಸಮಗ್ರ ಎಡಪಂಥೀಯ ನಿಲುವನ್ನು ಕಾಂಗ್ರೆಸ್ ಹೊಂದಿದ್ದರೆ, ಬಲಪಂಥೀಯ ನಿಲುವನ್ನು ಬಿಜೆಪಿ ಹೊಂದಿದೆ. ಹಾಗಂತ ಬಲಪಂಥೀಯ ನಿಲುವು ಕೇವಲ ಬಿಜೆಪಿಯದ್ದು ಮಾತ್ರ ಎಂಬುದನ್ನು ಮರೆಯಬಾರದು. ಆದ್ದರಿಂದ ಅವರ ನಿಲುವನ್ನು ಇವರು, ಇವರ ನಿಲು ವನ್ನು ಅವರು ವಿರೋಧಿಸುವ ಪರಿಪಾಠ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯೋತ್ತರ ಭಾರತದಲ್ಲೂ ನಡೆಯುತ್ತಾ ಬಂದಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಈ ದೇಶವ್ಯಾಪಿ ನಡೆದ ವಿದ್ಯಮಾನಗಳಿಗೆ ಎಡಪಂಥೀಯ ಸ್ಪರ್ಶವನ್ನು ನೆಹರು ಅವರೇ ಅಧೈ
ರ್ಯವಾಗಿ ನಿಂತು ನಡೆಸಿದರು. ಮುಂದೆ ಅವರ ಮಗಳು, ಮೊಮ್ಮಗ, ಸೊಸೆ, ಮರಿಮೊಮ್ಮಗ ಹಿರಿಯಕ್ಕನ ಚಾಳಿ ಮನೆಮಂದಿಗೆ ಎಂಬಂತೆ ಅದೇ ಹಾದಿಯಲ್ಲಿ ಕ್ರಮಿಸಿದರು. ಎಡಪಂಥದ ಹಾದಿಯೇ ತೀರಾ ಇಕ್ಕಟ್ಟಾದುದು. ಕ್ರಮಿಸುವಾಗ ಜಾಗರೂಕರಾಗಿರ ಬೇಕು. ಆದರೆ ಬಲಪಂಥದ ಹಾದಿಯ ವಿಸ್ತಾರ ಬಹು ಅಗಲವಾದುದು. ವ್ಯಾಪ್ತಿ ವಿಸ್ತಾರವಾದುದು. ಅದರದ್ದು ಏನಿದ್ದರೂ ವಿಶಾಲವಾದ ಹೈವೆ ಇದ್ದ ಹಾಗೆ. ಶಾರ್ಟ್ ಕಟ್ ಇಲ್ಲವೇ ಇಲ್ಲ.

ಎಲ್ಲವೂ ಬಟ್ಟ ಬಯಲಿನಂತೆ! ಆದ್ದರಿಂದ ಹೇಗೆ ನುಗ್ಗಿದರೂ ಭಯವೆಂಬುದು ಅಷ್ಟು ಸುಲಭವಾಗಿ ಆವರಿಸಲಾರದು. ಆದರೆ, ಎಡಪಂಥಕ್ಕೆ ಈ ಸಾಧ್ಯತೆಯಿಲ್ಲ. ಎಡಪಂಥೀಯ ನಿಲುವನ್ನೇ ತಾವು ಹೊಂದಿದವರು ಎಂಬುದನ್ನು ಮತ್ತೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದರಲ್ಲೂ ತಾವು ಮೊದಲಿಂದಲೂ ಅದೇ ಮಾರ್ಗದ ಮುಂಚೂಣಿಯಲ್ಲಿದ್ದವರು. ಖಂಡಿತವಾಗಿಯೂ ನನಗೆ ತಮ್ಮ ಅನೇಕ ನಿಲುವಿನಲ್ಲಿ ಭಿನ್ನಾಭಿಪ್ರಾಯಗಳಿವೆ. ಸೈದ್ಧಾಂತಿಕ ವಿರೋಧಗಳಿವೆ. ಈ ಹಿಂದೆಯೂ ನಾನು ಇದೇ ಪತ್ರಿಕೆಯಲ್ಲಿ ತಮ್ಮ ನಿಲುವನ್ನು ವಿರೋಧಿಸಿ ಬರೆದಿದ್ದೂ ಇದೆ.

ಆದರೂ ತಮ್ಮನ್ನು ನಾನು ಗೌರವಿಸುತ್ತೇನೆ. ಒಂದು; ಹಿರಿಯರು ಎಂಬ ಭಾವದಿಂದ. ಎರಡು; ಪ್ರಜಾಸತ್ತಾತ್ಮಕ ಧೋರಣೆಯಲ್ಲಿ ನನಗೂ ನನ್ನಂಥವರಿಗೂ ತಮಗೂ ತಾತ್ವಿಕವಾದ ನೆಲೆಯಲ್ಲಿ ವೈಚಾರಿಕ ಭಿನ್ನಾಭಿಪ್ರಾಯಗಳು ಇರುವುದರಿಂದ ಮತ್ತು ಅದನ್ನು ತಾವು ಸ್ವೀಕರಿಸುತ್ತೀರಿ ಎಂಬ ಅಭಿಮಾನದಿಂದ! ಹೌದು, ಇಂಥ ಭಿನಾಭಿಪ್ರಾಯಗಳೇ ನಮ್ಮ ಅರಿವನ್ನು ಹೆಚ್ಚಿಸುತ್ತ ವೆಂದು ನಾನು ನಂಬಿದ್ದರಿಂದ! ತಮ್ಮ ದೇಸೀ ಚಿಂತನೆಯಲ್ಲಿ ಜಾಗತೀಕರಣವನ್ನು ಬೇರೆಯದೇ ಆದ ಆಕೃತಿಯ ಚಿಂತನೆಯಲ್ಲಿ ತಾವು ಕಟ್ಟಿಕೊಡುವ ರೀತಿಯನ್ನು ನಾನು ಬಹುವಾಗಿ ಮೆಚ್ಚಿಕೊಂಡವನು. ಪ್ರಾಯಶಃ ತಮ್ಮ ತಲೆಮಾರಿನ ಹಾಗೂ ನಮ್ಮ ತಲೆಮಾರಿನ ಯಾರೂ ತಮ್ಮ ಚಿಂತನೆಯನ್ನು ಅಲ್ಲಗಳೆಯಲಾರರು.

ನಿಜವಾಗಿ ಎದೆಗೆ ಬಿದ್ದ ಅಕ್ಷರಗಳವು. ಇದನ್ನೇ ನಾನು ಬಹುವಾಗಿ ಮೆಚ್ಚಿದ್ದು. ಕೃಷಿಯ ಬದುಕನ್ನು ಕಟ್ಟಿಕೊಂಡು ಹಳ್ಳಿಯ ಬೆಳೆದು ಬಂದ ಕನ್ನಡದ ಒಬ್ಬ ದೇಸೀ ಚಿಂತನೆಯ ಲೇಖಕನಾಗಿ ಅದೆಷ್ಟೋ ಜನರ ದನಿಯಾಗಿ ಜಾಗತೀಕರಣವನ್ನು ವ್ಯಾಖ್ಯಾನಿ ಸಿದ್ದೀರಿ. ಮನುಷ್ಯ ಮತ್ತು ಜೀವಸಂಕುಲದ ಉಸಿರಿನ ಹದವನ್ನೇ ಉಸಿರಾಗಿ ಹಿಡಿದಿಟ್ಟಿರುವ ತಮ್ಮ ಮಾತುಗಳು ಸಾರ್ವ ಕಾಲಿಕವಾಗಿ ಆಪ್ಯಾಯಮಾನವಾಗಿದೆ. ಮರುಮಾತೇ ಇಲ್ಲ. ಈ ದೊಡ್ದ ಚಿಂತನೆಯ ಮಾತುಗಳಿಗಾಗಿ ಮರು ಪರಿಷ್ಕೃರಣೆ ಯಲ್ಲೂ ಅದನ್ನು ಬಿಡಲಿಲ್ಲ ಎಂದು ನಾನು ನಂಬಿದ್ದೇನೆ.

ಜಾತಿಯನ್ನು ನೋಡಲಿಲ್ಲ. ಕೇವಲ ಆ ಪಾಠದಲ್ಲಿರುವ ಮೌಲ್ಯಗಳು ನಮ್ಮ ಮಕ್ಕಳಿಗೆ ಸಿಗಲಿ ಎಂಬ ಉದ್ದೇಶ ಮತ್ತು ಆಶಯ ವೊಂದೇ ಇಲ್ಲಿ ಕೆಲಸ ಮಾಡಿದೆ. ಅದನ್ನು ತೆಗೆದು ಹಾಕಲು ತಾವು ಹೇಳಿದಿರಿ ಎಂದರೆ ಅಚ್ಚರಿಯಾಗದೇ ಉಳಿದೀತೆ? ತಾವು ಕನ್ನಡ ಭಾಷೆ ಮತ್ತು ಕನ್ನಡ ಸಾಹಿತ್ಯವನ್ನು ಆಳವಾಗಿ ಪ್ರೀತಿಸುವವರಾಗಿ ಪಠ್ಯಕ್ಕೆ ನನ್ನ ಪಾಠವನ್ನು ಸೇರಿಸುವುದು ಬೇಡ ಎಂದದ್ದು ಮಾತ್ರ ನಿಮ್ಮ ಒಟ್ಟೂ ಚಿಂತನೆಯ ಸ್ವರೂಪವೇ ಹುಸಿಯೆನಿಸಿ ಬಿಟ್ಟೆತೇನೋ!

ತಮ್ಮಿಂದ ಇಂಥ ಮಾತಿನ ನಿರೀಕ್ಷೆಯನ್ನು ಸರ್ವಥಾ ಮಾಡಿರಲಿಲ್ಲ. ತಾವು ಹಾಗೆ ಹೇಳಲು ಸಾಧ್ಯವೂ ಇಲ್ಲದ ಹಾಗೆ ಆ ಬರಹ ವನ್ನು ಓದಿದವರಿಗೆ ತಮ್ಮ ಚಿಂತನೆಗಳೇನು ಎಂಬುದು ಅರ್ಥವಾಗುತ್ತದೆ. ನಿಜ, ಅಂಥ ಚಿಂತನೆಯ ಅಗತ್ಯ ಇಂದಿನ ಮಿತಿ
ಮೀರಿದ ಅಧುನಿಕತೆಯ ಹುಚ್ಚನ್ನು ತಣ್ಣಗಾಗಿಸಲು ಬೇಕೇ ಬೇಕು. ದಯವಿಟ್ಟು ತಾವು ಆಡಿದ ಮಾತನ್ನು ಹಿಂತೆಗೆದುಕೊಳ್ಳುತ್ತೀರಿ ಎಂದು ನಂಬಿ ಇಷ್ಟು ಮಾತುಗಳನ್ನು ಹೇಳಿದ್ದೇನೆ. ಪಂಥಗಳನ್ನು ಬೇಡ. ತಮ್ಮ ಬರಹದಲ್ಲಿರುವ ಮೌಲ್ಯಗಳು ನಮ್ಮ ಮಕ್ಕಳಿಗೆ ಸಿಗಲಿ ಎಂಬ ಸದಾಗ್ರಹವಷ್ಟೆ.

ಇದು ವೈಯಕ್ತಿಕವಾಗಿ ತಮ್ಮಲ್ಲಿ ಆಡಿಕೊಳ್ಳಬೇಕಾದ ಮಾತು. ಅದೂ ಕೇವಲ ಎದೆಗೆ ಬಿದ್ದ ಅಕ್ಷರ ಗದ್ಯದ ಉಳಿವಿಗಾಗಿ. ಇನ್ನು ಪಠ್ಯ ಪರಿಷ್ಕರಣೆಯ ವಿರುದ್ಧ ತಾವೂ ಸೇರಿ ಹಲವರು ಆರಂಭಿಸಿದ ಪ್ರತಿಭಟನೆಗೆ ನನ್ನ ಸಹಮತವಿಲ್ಲ. ಬರಗೂರರ ಸರ್ವಾ ಧ್ಯಕ್ಷತೆಯಲ್ಲಿ ರಚನೆಯಾದ ಪಠ್ಯ ಪರಿಷ್ಕರಣೆಯ ಸಂದರ್ಭದಲ್ಲೂ ಹಿಂದಿನದನ್ನು ಬಿಡುವ ಪ್ರಕ್ರಿಯೆ ಇದ್ದೇ ಇದೆ. ಈ ಬಿಡುವ ಪ್ರಕ್ರಿಯೆ ಯಾವತ್ತೂ ಪರಿಷ್ಕರಣೆಯ ಸಂದರ್ಭದಲ್ಲಿ ಸಹಜವಾಗಿರುತ್ತದೆ. ಕಾರಣ ಪ್ರಯೋಗಶೀಲತೆ. ಅದರಲ್ಲೂ ಪಕ್ಷ ಬದಲಾದ ತಕ್ಷಣ ಪಠ್ಯ ಬದಲಾಗುವುದೇ ದೊಡ್ಡ ದೇಶದ ದುರಂತ!

ಹಾಗೆ ನೋಡಿದರೆ ಬರಗೂರರ ಸಂದರ್ಭದಲ್ಲೂ ಪರಿಷ್ಕರಣೆಯ ಅಗತ್ಯವೇನಿತ್ತು ಎಂಬುದಕ್ಕೆ ಸೂಕ್ತ ಉತ್ತರ ಸಿಗಲಾರದು. ಸಿಕ್ಕಿದರೂ ಪಂಥೀಯ ಭಿನ್ನತೆಯ ಪ್ರಶ್ನೆಯಂತೂ ಇದ್ದೇ ಇರುತ್ತದೆ. ಒಂದು ಪ್ರಯೋಗಶೀಲತೆಗಾಗಿ ಆಗುವ ಬದಲಾವಣೆಗಳನ್ನು ವಿರೋಧಿಸುವುದಕ್ಕೆ ಯಾವ ಅರ್ಥವಿದೆ ಹೇಳಿ? ಬರಗೂರರು ಮಾಡಿದ ಪಠ್ಯ ವಿಚಾರಗಳಿಗೆ ಸಂಬಂಧಿಸಿ ಸೈದ್ಧಾಂತಿಕ ಮತ್ತು ವೈಚಾರಿಕ ವಿರೋಧ ಇತ್ತೇ ಇತ್ತು. ಈಗಲೂ ತಾವು ವೈಚಾರಿಕವಾದ ನೆಲೆಯಲ್ಲಿ ವಿರೋಧಿಸುವುದಕ್ಕೆ ಅರ್ಥವಿದೆ. ಸೈದ್ಧಾಂತಿಕ ನಿಲುವನ್ನು ಅಭಿವ್ಯಕ್ತಿಸುವ, ಪ್ರಶ್ನಿಸುವ, ವಿರೋಧಿಸುವ ಸ್ವಾತಂತ್ರ್ಯವಂತೂ ಇದ್ದೇ ಇದೆ.

ಆದರೆ ಹಿಂದೂ, ಹಿಂದುತ್ವ, ಕೇಸರೀಕರಣ ಎಂಬುದಾಗಿಯೂ, ಹೆಡಗೇವಾರರ ಭಾಷಣ ಸೇರಿಸಿದ್ದಕ್ಕೂ, ಎಲ.ಬಸವರಾಜು, ಲಂಕೇಶ, ಸಾರಾ ಅಬೂಬಕ್ಕರ್ ಮುಂತಾದವರ ಬರಹವನ್ನು ಕೈಬಿಟ್ಟದ್ದರಿಂದ ನನ್ನ ಬರಹವನ್ನೂ ಬಿಡಬೇಕು, ಅಥವಾ ಸೇರಿಸುವುದಕ್ಕೆ ನನ್ನ ಒಪ್ಪಿಗೆಯಿಲ್ಲ ಎಂದು ತಾವು ಹೇಳುವುದರಲ್ಲಿ ಯಾವ ಔಚಿತ್ಯವೂ ಕಾಣುವುದಿಲ್ಲ. ಅಂತೂ ಕೊನೆಯಲ್ಲಿ ಎಲ್ಲರೂ ಒಂದಾಗಿ ಉತ್ತಮವಾದುದನ್ನು ಕೊಡಬೇಕಾದ ಸಮಷ್ಟಿ ಒಳಿತಿನ ಚಿಂತನೆಯ ನಿಲುವಿಗೆ ಬದ್ಧರಾಗಿ ಒಂದುಗೂಡಲು ಸಾಧ್ಯವಾಗುವುದು ನಮ್ಮೊಳಗಿನ ಔದಾರ್ಯ ಮನೋಭಾವದಿಂದ.

ಮಕ್ಕಳ ಭವಿಷ್ಯದ ಹಿತವನ್ನು ಚೆನ್ನಾಗಿಸಬೇಕೆಂಬ ಒತ್ತಾಸೆಯಿಂದ. ತಾವು ತಮ್ಮಂಥ ಎಲ್ಲ ಬಗೆಯ ಸೈದ್ಧಾಂತಿಕ ನಿಲುವಿನ
ಹಿರಿಯರು, ಭಿನ್ನತೆಯನ್ನು ಬಿಟ್ಟು ಶಾಲಾರಂಭದ ಮಕ್ಕಳ ಓದಿಗೆ ತೊಡಕಾದ ಈ ವಿಚಾರ ಸಮರಕ್ಕೊಂದು ಅಂತ್ಯ ಹಾಡುತ್ತೀರಿ ಎಂದು ನಿರೀಕ್ಷೆ ಮಾಡುತ್ತೇನೆ. ಅದಿಲ್ಲದಿದ್ದರೆ ಸರಕಾರ ತನ್ನ ನಿಲುವಿಗೆ ಬದ್ಧವಾಗುತ್ತದೆ.