ರಾಯಚೂರು: ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಕುಟುಂಬಕ್ಕೆ 1ಲಕ್ಷ ಪರಿಹಾರ ಮತ್ತು ಉದ್ಯೋಗ ನೀಡಬೇಕು ಎಂದು ಮಾಜಿ ಶಾಸಕ ಎ.ಪಾಪಾರೆಡ್ಡಿ ಒತ್ತಾಯಿಸಿದರು.
ಅವರಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನಗರದಲ್ಲಿ ಇತ್ತೀಚೇಗೆ ಕಲುಷಿತ ಕುಡಿಯುವ ನೀರು ಸೇವಿಸಿ ಇಬ್ಬರು ಸಾವನ್ನಪ್ಪಿದ್ದು ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾ ರೆಂದ ಅವರು ರಾಂಪೂರು ಜಲಾಶಯದಲ್ಲಿ ಒಂಡು ಸಂಗ್ರಹವಾಗಿದ್ದು ಸುಮಾರು 15 ವರ್ಷದಿಂದ ಒಂಡು ತೆರವುಗೊಳಿಸಿಲ್ಲ ಅದನ್ನು ಈಗ ತೆರವು ಮಾಡಿನಗರ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸಲಗುತ್ತದೆ ಎಂದರು. ಅಧಿಕಾರಿಗಳ ತಪ್ಪಿನಿಂದ ಇಂತಹ ಅವಘಡಗಳು ಜರುಗಿವೆ ಎಂದ ಅವರು ಶಾಸಕರು ಮತ್ತು ಅಧ್ಯಕ್ಷರು ಹೇಗೆ ಹೊಣೆಗಾರ ರಾಗುತ್ತಾರೆ ಎಂದು ಪ್ರಶ್ನಿಸಿದರು.? ನಗರ ಸಭೆ ಅಧ್ಯಕ್ಷರ ಅಧಿಕಾರದಲ್ಲಿ ಯಾರು ಹಸ್ತಕ್ಷೇಪ ಮಾಡಬಾರದು ನಾನು ಶಾಸಕನಾಗಿದ್ದ ವೇಳೆ ನಗರಸಭೆ ಅಧ್ಯಕ್ಷರ ಅಧಿಕಾರ ದಲ್ಲಿ ಮೂಗು ತೂರಿಸಿಲ್ಲ ಅವರ ಅಧಿಕಾರ ಅವರೆ ಚಲಾಯಿಸಬೇಕೆಂದ ಅವರು ಎಸ್ .ಎಂ.ಕೃಷ್ಣ ಅಧಿಕಾರ ಅವಧಿಯಲ್ಲಿ ನಗರದಲ್ಲಿ ಕುಡಿಯುವ ನೀರು ಯೋಜನೆ ನಗರದಲ್ಲಿ ಜಾರಿಗೆ ಬಂದಿತು ನಾನು ಕುಡಿಯುವ ನೀರು ಒದಗಿಸಲು ಶಾಸಕನಾಗಿದ್ದ ವೇಳೆ ಶ್ರಮ ವಹಿಸಿದ್ದೇನೆಂದರು.
ನಗರದಲ್ಲಿ ನಿರಂತರ ಕುಡಿಯುವ ನೀರು ಯೋಜನೆ ನೆನೆಗುದಿಗೆ ಬಿದ್ದಿದ್ದು ನಗರಾಭಿವೃದ್ದಿ ಇಲಾಖೆ ಟೆಂಡರ್ ಪಡೆದ ಗುತ್ತಿಗೆ ದಾರರ ಮೇಲೆ ಕ್ರಮಕೈಗೊಳ್ಳಬೇಕೆಂದರು. ನಗರಸಭೆಯಲ್ಲಿರುವ ಅಧಿಕಾರಿಗಳು ಚುನಾಯಿತ ಆಡಳಿತ ಮಂಡಳಿಯ ಸೂಚನೆ ಪಾಲಿಸಬೇಕೆಂದರು. ಜಿಲ್ಲೆಗೆ ಭೇಟಿ ನೀಡುವ ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪರವರಿಗೆ ಈ ಎಲ್ಲ ಘಟನಾವಳಿಗಳನ್ನು ಗಮನಕ್ಕೆ ತರಲಾಗುತ್ತದೆ ಹಾಗೂ ಸರ್ಕಾರದಿಂದ ಮೃತ ಕುಟುಂಬಸ್ಥರಿಗೆ 10 ಲಕ್ಷ ರೂ.ಪರಿಹಾರ ನೀಡಬೇಕು ಮತ್ತು ಆಸ್ಪತ್ರೆಗೆ ದಾಖಲಾದವರಿಗೆ ಸರ್ಕಾರವೆ ವೈದ್ಯಕೀಯ ವೆಚ್ಚ ಭರಿಸಬೇಕೆಂದರು. ಪಕ್ಷಾತೀತವಾಗಿ ನಗರದ ಅಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವೆಂದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ ಆಂಜಿನೇಯ, ಬಿ.ಗೋವಿಂದ, ಈ .ಶಶಿರಾಜ ಇತರಿದ್ದರು.