ಕ್ಯಾನ್ಸರ್ ರೋಗಿಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ
ಟಾಟಾ ಸಂಸ್ಥೆ ಸಹಯೋಗದಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ಕರ್ಯನರ್ವಹಣೆ
ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ಯೆನೆಪೋಯಾ ವಿಶ್ವವಿದ್ಯಾಲಯ (ಡೀಮ್ಡ್ ಯೂನಿರ್ಸಿಟಿ) ಹಾಗೂ ಟಾಟಾ ಟ್ರಸ್ಟ್ನ ಸಹಯೋಗದಲ್ಲಿ ಇದೇ ಜೂ.೧೧ ರಂದು ಮಂಗಳೂರಿನ ದೇರಳಕಟ್ಟೆಯಲ್ಲಿ ಅತ್ಯಾಧುನಿಕ “ಜುಲೇಖಾ ಯೆನೆಪೋಯಾ ಆಂಕೊಲಾಜಿ ಸಂಸ್ಥೆ”ಯನ್ನು ಉದ್ಘಾಟಿಸ ಲಾಗುತ್ತಿದೆ.
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಂಸ್ಥೆ ಉದ್ಘಾಟಿಸಲಿದ್ದಾರೆ. ಈ ವೇಳೆ ಮುಂಬೈನಾ ಟಾಟಾ ಟ್ರಸ್ಟ್ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎನ್. ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ (ಡೀಮ್ಡ್ ಯೂನರ್ವಿಸಿಟಿ) ಯೆನೆಪೋಯ ವಿವಿ ಉಪಕುಲಪತಿ ಡಾ. ಎಂ. ವಿಜಯಕುಮಾರ್ , ಇಂದು ಭಾರತದಲ್ಲಿ ಅತಿಹೆಚ್ಚು ಜನ ಸಾವಿಗೀಡಾಗುತ್ತಿರುವ ಕಾಯಿಲೆಗಳ ಪೈಕೆ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಹಲವು ರೀತಿಯ ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೂ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ರ್ಥಿಕವಾಗಿ ಕುಗ್ಗಿಸುವಂತೆ ಮಾಡುತ್ತಿದೆ. ಕೆಲವು ಕಡೆ ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ಲಭಿಸದೇ ಇರುವುದು ಸಹ ಸಾವಿಗೆ ಕಾರಣವಾಗುತ್ತಿದೆ. ಕ್ಯಾನ್ಸರ್ಗೆ ಸೂಕ್ತ ಚಿಕಿತ್ಸೆ ನೀಡುತ್ತಾ, ಜನರ ಮೆಚ್ಚುಗೆಗೆ ಪಾತ್ರರಾಗಿ ಬಂದಿರುವ ಟಾಟಾ ಟ್ರಸ್ಟ್, ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿ ಯಲ್ಲಿದೆ.
ಜೊತೆಗೆ ಡೀಮ್ಡ್ ಯೂನಿರ್ಸಿಟಿ ಪಟ್ಟಿಗೆ ಸೇರಿರುವ ಯೆನೆಪೋಯಾ ಶೈಕ್ಷಣಿಕ ಸಂಸ್ಥೆಯು ಸಹ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಡೆಸುವ ಮೂಲಕ ಕಳೆದ ದಶಕದಿಂದ ಕ್ಯಾನ್ಸರ್ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಸುಧಾರಿತ ವೈದ್ಯಕೀಯ ಚಿಕಿತ್ಸೆ ನೀಡುತ್ತಾ ಬಂದಿದೆ. ಇದೀಗ ಪ್ರತಿಷ್ಠಿತ ಟಾಟಾ ಸಂಸ್ಥೆಯ ಸಹಭಾಗಿತ್ವದಲ್ಲಿ ನೂತನವಾಗಿ ಆಂಕೋಲಾಜಿ ಸಂಸ್ಥೆಯನ್ನು ತೆರೆಯು ತ್ತಿರುವುದು ಜುಲೇಖಾ ಯೆನೆಪೋಯಾ ಸಂಸ್ಥೆ ಸಾಧಿಸಿದ ಹೊಸ ಮೈಲುಗಲ್ಲಾಗಿದೆ. ಜುಲೇಖಾ ಯೆನೆಪೋಯಾ ಸಂಸ್ಥೆಯ ಪ್ರಮುಖ ಆಶಯವೆಂದರೆ ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗೂ ಕಡಿಮೆ ಮೆಚ್ಚದಲ್ಲಿ ಕ್ಯಾನ್ಸರ್ ಚಿಕಿತ್ಸೆ ಕೊಡಿಸುವುದಾಗಿ ಎಂದು ಹೇಳಿದರು.
ಮುಂಬೈನ ಟಾಟಾ ಟ್ರಸ್ಟ್ನ ಮುಖ್ಯ ಕರ್ಯನರ್ವಾಹಕ ಅಧಿಕಾರಿ ಎನ್. ಶ್ರೀನಾಥ್ ಮಾತನಾಡಿ, ಟಾಟಾ ಟ್ರಸ್ಟ್ಗಳು ಹಲವು ದಶಕ ಗಳಿಂದ ಕ್ಯಾನ್ಸರ್ ಆರೈಕೆಯಲ್ಲಿ ಪ್ರರ್ತಕ ಕೆಲಸವನ್ನು ಮಾಡುತ್ತಿವೆ. ದೇಶದಾದ್ಯಂತ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಬೆಂಬಲ ಮತ್ತು ಸಾರ್ಥ್ಯವನ್ನು ಬೆಳೆಸುವಲ್ಲಿ ಅವರ ಪ್ರಯತ್ನಗಳು ಅಪಾರವಾಗಿವೆ.
“ಟಾಟಾ ಟ್ರಸ್ಟ್ಸ್ ಭಾರತದಲ್ಲಿ ಕ್ಯಾನ್ಸರ್ ಆರೈಕೆಯಲ್ಲಿ ಮುಂಚೂಣಿಯಲ್ಲಿದೆ. ಈ ನಿಟ್ಟಿನಲ್ಲಿ, ನಾವು ‘ವಿತರಿಸಿದ ಕ್ಯಾನ್ಸರ್ ನಿಯಂತ್ರಣ ಮಾದರಿ’ ಅನ್ನು ಪರಿಕಲ್ಪನೆ ಮಾಡಿದ್ದೇವೆ, ಇದು ಜಾಗೃತಿ, ಆರಂಭಿಕ ರೋಗ ನಿರ್ಣಯ, ಪ್ರವೇಶಿಸುವಿಕೆ ಮತ್ತು ಕೈಗೆಟುಕುವ ಸಾರ್ಥ್ಯವನ್ನು ಒಳಗೊಂಡಿರುವ ನಾಲ್ಕು-ತುದಿಯ ವಿಧಾನವನ್ನು ಆಧರಿಸಿದೆ. ರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ, ನಾವು ದೇಶದಾದ್ಯಂತ ಕ್ಯಾನ್ಸರ್ ಆರೈಕೆ ಮೂಲಸೌರ್ಯವನ್ನು ನವೀಕರಿಸುತ್ತಿದ್ದೇವೆ ಎಂದರು.
ಡಾ. ಟಾಟಾ ಟ್ರಸ್ಟ್ನ ಕ್ಯಾನ್ಸರ್ ಕೇರ್ ಕರ್ಯಕ್ರಮದ ಮುಖ್ಯ ಕರ್ಯನರ್ವಾಹಕ ಸಂಜೀವ್ ಚೋಪ್ರಾ ಮಾತನಾಡಿ, “ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ಮತ್ತು ಕೈಗೆಟುಕುವ ಗುಣಮಟ್ಟದ ಚಿಕಿತ್ಸೆಯನ್ನು ನೀಡುವ ವಿಕಿರಣ ಮತ್ತು ಪರಮಾಣು ಔಷಧ ಕೇಂದ್ರದೊಂದಿಗೆ ಯೆನೆಪೊಯ ವೈದ್ಯಕೀಯ ಆಸ್ಪತ್ರೆಗೆ ಬೆಂಬಲ ನೀಡಿರುವುದು ನಮಗೆ ಸಂತೋಷವಾಗಿದೆ. ಈ ಕ್ಯಾನ್ಸರ್ ಕೇರ್ ಸೆಂಟರ್ನೊಂದಿಗೆ, ಉತ್ತರ ರ್ನಾಟಕ ಮತ್ತು ಹತ್ತಿರದ ಪ್ರದೇಶಗಳ ಜನರು ಕ್ಯಾನ್ಸರ್ ಚಿಕಿತ್ಸೆಗಾಗಿ ಇತರೆ ನಗರಗಳಿಗೆ ಪ್ರಯಾಣಿಸಬೇಕಾಗಿಲ್ಲ. ಈ ಕೇಂದ್ರವು ಈ ಪ್ರದೇಶದಲ್ಲಿನ ಕ್ಯಾನ್ಸರ್ ಆರೈಕೆ ಪರಿಸರ ವ್ಯವಸ್ಥೆಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದರು.
ನೂತನ ಆಂಕೋಲಜಿ ಸಂಸ್ಥೆಯ ವಿಶೇಷತೆ ಏನು?: ಆಂಕೋಲಜಿ ವಿಭಾಗದ ಮುಖ್ಯಸ್ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ನೂತನ ಈ ಸಂಸ್ಥೆಯಲ್ಲಿ ರೇಡಿಯೋಥೆರಪಿ ಮತ್ತು ನ್ಯೂಕ್ಲಿಯರ್ ಮೆಡಿಸನ್ ವಿಭಾಗಗಳನ್ನು ಸರ್ಪಡೆಗೊಳಿಸಿದ್ದು, ಚಿಕಿತ್ಸಾ ಸೌಲಭ್ಯಗಳನ್ನು ಸಂಪರ್ಣವಾಗಿ ನವೀಕರಿಸುತ್ತಿದೆ. ಜೊತೆಗೆ ಸಮಗ್ರ ಕ್ಯಾನ್ಸರ್ ಚಿಕಿತ್ಸೆ ನೀಡಲು ಬೇಕಾದ ಅತ್ಯಾಧುನಿಕ ವೈದ್ಯಕೀಯ ಸವಲತ್ತುಗಳನ್ನು ಪರಿಚಯಿಸಲಾಗುತ್ತಿದೆ. ಇದಕ್ಕಾಗಿ ಟಾಟಾ ಟ್ರಸ್ಟ್ ಅನುದಾನ ನೀಡುವ ಮೂಲಕ ತನ್ನ ಸಹಭಾಗಿತ್ವವನ್ನು ನೀಡಿದೆ.
ಈ ನೂತನ ಕೇಂದ್ರವೂ ಸುಮಾರು ೩೬,೦೦೦ ಚ.ಅಡಿ ವಿಸ್ತರ್ಣದಲ್ಲಿ ನರ್ಮಿಸಲಾಗಿದ್ದು, ಆರು ಬಹುಮಹಡಿ ಕಟ್ಟಡವನ್ನು ಹೊಂದಿದೆ. ಎರಡು ರೇಡಿಯೋ ಥೆರಪಿ ಬಂಕರ್ಗಳು, ಒಂದು ಬ್ರಾಕಿಥೆರಪಿ ಬಂಕರ್ ಹೊಂದಿದೆ. ಟ್ರೂಭೀಮ್ ರೇಡಿಯೋ ಥೆರಪಿ ಯಂತ್ರವನ್ನು ಕ್ಯಾನ್ಸರ್ಗೆ ಬಳಸಲಾಗುತ್ತಿದೆ. ವಿಕಿರಣ ಚಿಕಿತ್ಸೆಗಳಿಗೆ ೬ ಡಿಗ್ರಿ ಸ್ವಾತಂತ್ರ್ಯ (೬ಆoಈ) ಮಂಚವನ್ನು ಹಾಕಲಾಗಿದ್ದು, Pಇಖಿ ಅಖಿ ಸ್ಕ್ಯಾನರ್ ಸೇರಿದಂತೆ ಪ್ರತ್ಯೇಕ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯವನ್ನು ಹೊಂದಿದೆ.
ಇದರ ಜೊತೆಗೆ, ಕಿಮೋಥೆರಪಿಯನ್ನು ನರ್ವಹಿಸಲು ೧೦ ಹಾಸಿಗೆಗಳ ಡೇ ಕೇರ್ ಸೌಲಭ್ಯವನ್ನು ಸ್ಥಾಪಿಸಲಾಗಿದೆ. ಇಡೀ ಯೋಜನೆಯನ್ನು ಅಲಮೇಲು ಚಾರಿಟೇಬಲ್ ಫೌಂಡೇಶನ್ ಮೂಲಕ ಟಾಟಾ ಟ್ರಸ್ಟ್ಗಳು ಕರ್ಯಗತಗೊಳಿಸಿದೆ. ಈ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ಆಂಕೊಲಾಜಿಸ್ಟ್ಗಳ ತಂಡದಿಂದ ಕೈಗೆಟುಕುವ ವೆಚ್ಚದಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ oಟಿಛಿoಛಿeಟಿಣeಡಿ@ಥಿeಟಿeಠಿoಥಿಚಿ.eಜu.iಟಿ/೦೮೨೪ ೨೨೪೬೦೦೦ ಸಂರ್ಕಿಸಬಹುದು.
ಡೀಮ್ಡ್ ಯೂನಿರ್ಸಿಟಿ ಯೆನೆಪೋಯಾ ವಿಶ್ವವಿದ್ಯಾಲಯದ ಕುರಿತು: ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಚಾರಿಟ ಬಲ್ ಟ್ರಸ್ಟ್ನಿಂದ ೨೦೦೮ ರಲ್ಲಿ ಸ್ಥಾಪಿಸಲಾದ ಯೆನೆಪೋಯ (ಡೀಮ್ಡ್ ಯೂನಿರ್ಸಿಟಿ ಎಂದು ಪರಿಗಣಿಸಲಾಗಿದೆ) ಸಂಸ್ಥೆಯು ೩೫ ಎಕರೆಯಲ್ಲಿ ಮಂಗಳೂರಿನ ದೇರಳಕಟ್ಟೆಯಲ್ಲಿ ಕಳೆದ ಎರಡು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ.
ವಿಶ್ವವಿದ್ಯಾನಿಲಯವು ೮೦೦೦ ವಿದ್ಯರ್ಥಿಗಳು ಮತ್ತು ೩೫೦೦ ಸಿಬ್ಬಂದಿ ಸದಸ್ಯರೊಂದಿಗೆ ೧೦ ಘಟಕ ಕಾಲೇಜುಗಳನ್ನು ಹೊಂದಿದೆ. ವಿಶ್ವವಿದ್ಯಾನಿಲಯವು ಎ ಗ್ರೇಡ್ನೊಂದಿಗೆ ಓಂAಅ ನಿಂದ ಮಾನ್ಯತೆ ಪಡೆದಿದೆ. ಯೆನೆಪೋಯ ವೈದ್ಯಕೀಯ ಕಾಲೇಜು ೧೧೦೦ ಹಾಸಿಗೆಗಳ ಆಸ್ಪತ್ರೆಯನ್ನು ಹೊಂದಿದ್ದು, ಜನವರಿ ೨೦೧೬ ರಿಂದ ಕರ್ಯನರ್ವಹಿಸುತ್ತಿರುವ ಕ್ಯಾನ್ಸರ್ ಕೇಂದ್ರವನ್ನು ಹೊಂದಿದೆ.
ಕ್ಯಾನ್ಸರ್ ಕೇಂದ್ರವು ೧೨೦ ಹಾಸಿಗೆಗಳ ವರ್ಡ್ ಆಗಿದೆ. ಇದು ಸಮುದಾಯ ಆಂಕೊಲಾಜಿ, ರ್ಜಿಕಲ್ ಆಂಕೊಲಾಜಿ, ಮೆಡಿಕಲ್ ಆಂಕೊಲಾಜಿ, ಹೆಮಟೊ ಆಂಕೊಲಾಜಿ, ಆಂಕೊ-ಪಾಥಾಲಜಿ ಮತ್ತು ಉಪಶಾಮಕ ಆರೈಕೆಯನ್ನು ನೀಡುತ್ತದೆ. ಕಳೆದ ಆರು ರ್ಷಗಳಿಂದ, ಕ್ಯಾನ್ಸರ್ ಕೇಂದ್ರವು ಕ್ಯಾನ್ಸರ್ ರೋಗಿಗಳ ತಪಾಸಣೆ, ಆರಂಭಿಕ ಪತ್ತೆ ಮತ್ತು ನರ್ವಹಣೆಯಲ್ಲಿ ತೊಡಗಿಸಿಕೊಂಡಿದೆ. ರೋಬೋಟಿಕ್ ಶಸ್ತ್ರಚಿಕಿತ್ಸೆಯಂತಹ ಉನ್ನತ ಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಎಲ್ಲಾ ರ್ಹ ರೋಗಿಗಳಿಗೆ ನೀಡಲಾಗುತ್ತದೆ, ಪ್ರಮುಖವಾಗಿ ಶೇ. ೯೦ರಷ್ಟು ಬಡತನ ರೇಖೆಗಿಂತ ಕೆಳಗಿರುವ ರ್ಗಕ್ಕೆ ಸೇರಿದವರಿಗೆ ಆದ್ಯತೆ ನೀಡಲಾಗುತ್ತಿದೆ. ೨೦೧೮ ರಿಂದ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟ್ ಸೌಲಭ್ಯವನ್ನು ಸಹ ಹೊಂದಿದ್ದು, ಕರಾವಳಿ ರ್ನಾಟಕದಲ್ಲಿ ಇಂತಹ ಸೌಲಭ್ಯವನ್ನು ಸ್ಥಾಪಿಸಿದ ಮೊದಲ ಸಂಸ್ಥೆಯಾಗಿದೆ.
ವಿಶ್ವವಿದ್ಯಾನಿಲಯವು ರೋಟರಿ ಇಂಟರ್ನ್ಯಾಶನಲ್ ಮತ್ತು ರೋಟರಿ ಕ್ಲಬ್ ಆಫ್ ಮಂಗಳೂರಿನ ಬೆಂಬಲದೊಂದಿಗೆ ಕ್ಯಾನ್ಸರ್ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳ ಆರಂಭಿಕ ಪತ್ತೆಗೆ ಕೇಂದ್ರೀಕರಿಸುವ ಮೊಬೈಲ್ ವೆಲ್ನೆಸ್ ಕ್ಲಿನಿಕ್ ಅನ್ನು ಸಹ ನಡೆಸುತ್ತಿದೆ.
ಟಾಟಾ ಟ್ರಸ್ಟ್ ಕುರಿತು: ೧೮೯೨ ರಲ್ಲಿ ಪ್ರಾರಂಭವಾದ ಟಾಟಾ ಟ್ರಸ್ಟ್ ಅತ್ಯಂತ ಹಳೆಯ ಟ್ರಸ್ಟ್ಗಳಲ್ಲಿ ಒಂದು. ಭಾರತದ ಅತ್ಯಂತ ಹಳೆಯ ಲೋಕೋಪಕಾರಿ ಸಂಸ್ಥೆಯಾಗಿ ಸೇವೆ ಸಲ್ಲಿಸುತ್ತಿರುವ ಟಾಟಾ ಟ್ರಸ್ಟ್ ಸಮುದಾಯಗಳ ಜೀವನದಲ್ಲಿ ನಿರಂತರ ವ್ಯತ್ಯಾಸ ವನ್ನು ತರುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಸ್ಥಾಪಕ, ಜಮ್ಸೆಟ್ಜಿ ಟಾಟಾ ಅವರ ಪರ್ವಭಾವಿ ಲೋಕೋಪಕಾರದ ತತ್ವಗಳು ಮತ್ತು ದೃಷ್ಟಿಕೋನದಿಂದ ಮರ್ಗರ್ಶಿಸಲ್ಪಟ್ಟಿದೆ, ಆರೋಗ್ಯ, ಪೋಷಣೆ, ಶಿಕ್ಷಣ, ನೀರು, ನರ್ಮಲ್ಯ ಮತ್ತು ಜೀವನೋಪಾಯ, ಡಿಜಿಟಲ್ ರೂಪಾಂತರ, ವಲಸೆ ಮತ್ತು ನಗರ ಆವಾಸಸ್ಥಾನಗಳ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ವೇಗರ್ಧನೆ ಮಾಡುವುದು ಟ್ರಸ್ಟ್ಗಳ ಉದ್ದೇಶವಾಗಿದೆ. ಸಾಮಾಜಿಕ ನ್ಯಾಯ ಮತ್ತು ಸರ್ಪಡೆ, ಪರಿಸರ ಮತ್ತು ಶಕ್ತಿ, ಕೌಶಲ್ಯ ಅಭಿವೃದ್ಧಿ, ಕ್ರೀಡೆ, ಮತ್ತು ಕಲೆ ಮತ್ತು ಸಂಸ್ಕೃತಿ ನೇರ ಅನುಷ್ಠಾನ, ಪಾಲುದಾರಿಕೆ ಮತ್ತು ಅನುದಾನ ತಯಾರಿಕೆಯ ಮೂಲಕ ಈಗಾಗಲೇ ಸಾಧನೆ ಮಾಡಿರುವ ಟ್ರಸ್ಟ್, ವಿಶ್ವದಲ್ಲೇ ತನ್ನ ನಾವಿನ್ಯತೆಗಳಿಂದ ಗುರುತಿಸಲ್ಪಟ್ಟಿದೆ.
ಹೆಚ್ಚಿನ ಮಾಹಿತಿಗಾಗಿ hಣಣಠಿ://ಣಚಿಣಚಿಣಡಿusಣs.oಡಿg/ ಗೆ ಭೇಟಿ ನೀಡಿ