ಮುಂಬೈ: ಎಚ್ಡಿಎಫ್ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಶೇ.0.35ರಷ್ಟು ಹೆಚ್ಚಳ ಮಾಡಿರುವುದಾಗಿ ಪ್ರಕಟಿಸಿದೆ.
ಕೆಲವು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ಸಾಲದ ಮೇಲಿನ ಬಡ್ಡಿ ಹೆಚ್ಚಳ ಮಾಡಿದ್ದು, ಒಟ್ಟು ಶೇ.0.60ರಷ್ಟು ಏರಿಕೆ ಯಾದಂತಾಗಿದೆ. ಬಡ್ಡಿ ಹೆಚ್ಚಳವು ಜೂನ್ 7ರಿಂದ ಅನ್ವಯವಾಗುವುದಾಗಿ ಪ್ರಕಟಿಸಿದೆ.
ಗ್ರಾಹಕರಿಗೆ ನೀಡುವ ಒಂದು ವರ್ಷದ ಸಾಲದ ಮೇಲಿನ ಬಡ್ಡಿದರವು ಪರಿಷ್ಕರಣೆಯ ನಂತರ ಶೇ.7.50ರಿಂದ 7.85ಕ್ಕೆ ಏರಿಕೆ ಯಾಗಲಿದೆ. ಹಣದುಬ್ಬರ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೇ 4ರಂದು ರೆಪೊ ದರ ವನ್ನು ಶೇಕಡ 0.40ರಷ್ಟು ಹೆಚ್ಚಿಸಿತ್ತು.
ಚಿಲ್ಲರೆ ಹಣದುಬ್ಬರವು ಏಪ್ರಿಲ್ನಲ್ಲಿ ಶೇ 7.79ಕ್ಕೆ ಏರಿಕೆ ಅಗಿದ್ದು, ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಗಟು ಹಣದುಬ್ಬರ ಸಹ ಏಪ್ರಿಲ್ನಲ್ಲಿ ಶೇ 15.08ಕ್ಕೆ ದಾಖಲೆ ಯ ಏರಿಕೆ ಕಂಡಿದೆ.