Saturday, 23rd November 2024

ಹೊಸ ಪ್ರಕರಣ 3, ಸೋಂಕಿತರ ಸಂಖ್ಯೆ 503

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು: 
ರಾಜ್ಯದಲ್ಲಿ ಹೊಸದಾಗಿ ಭಾನುವಾರ ಕೇವಲ 3 ಕರೋನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 503ಕ್ಕೆ ಏರಿದೆ.
ಈ ಮಧ್ಯೆ ರೋಗಿ-465 ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ನಿವಾಸಿ 45 ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ ಹಾಗೂ ನಿಮೋನಿಯಾ ಹಿನ್ನೆಲೆ ಬೆಂಗಳೂರಿನ ನಿಗದಿತ ಆಸ್ಪತ್ರಗೆ ಏಪ್ರಿಲ್ 24ರಂದು ದಾಖಲಾಗಿದ್ದರು. ಇವರಿಗೆ ಮಧುಮೇಹ ಸಮಸ್ಯೆ ಕೂಡ ಇದ್ದು, ಈ ಹಿಂದೆ ಕ್ಷಯರೋಗ ಇತ್ತು ಎಂದು ವೈದ್ಯಕೀಯ ದಾಖಲೆ ಇದೆ.  ರೋಗಿ-465 ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
 ಆಸ್ಪತ್ರೆಯಿಂದ ಒಟ್ಟು 24 ಮಂದಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 8 , ಮೈಸೂರಿನಲ್ಲಿ 4 , ಬಾಗಲಕೋಟೆಯಲ್ಲಿ 4, ಮಂಡ್ಯದಲ್ಲಿ 4, ಬೆಳಗಾವಿಯಲ್ಲಿ 4, ಬಳ್ಳಾರಿಯಲ್ಲಿ 2 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕರ್ನಾಟಕದಲ್ಲಿ ಪತ್ತೆಯಾಗಿರುವ ಸೋಂಕಿತ ಪ್ರಕರಣದಲ್ಲಿ 9 ಮಂದಿ ಕೇರಳದವರಾಗಿದ್ದಾರೆ. ಇವರನ್ನು ಕರ್ನಾಟದ ವಿಮಾನ ನಿಲ್ದಾಣದ ಮೂಲಕ ಕೇರಳಕ್ಕೆ ಪ್ರಯಾಣಿಸುತ್ತಿರುವಾಗ ಪತ್ತೆ ಮಾಡಿ, ಇಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಕರ್ನಾಟಕದಲ್ಲಿ ಸದ್ಯ 302 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಇವರಲ್ಲಿ ಓರ್ವ ಗರ್ಭಿಣಿ ಸೇರಿ ಒಟ್ಟು 296 ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 6 ಮಂದಿ ಸ್ಥಿತಿ ಗಂಭಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಬೆಂಗಳೂರಿನ ಹಂಪಿನಗರದ ಮೃತ ಮಹಿಳೆ
-465) ಪ್ರಯಾಣದ ಹಿನ್ನಲೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸುವಂತಿದೆ. ನೆಗಡಿ, ಕೆಮ್ಮು, ಶೀತ ಜ್ವರದಿಂದ ಬಳಲುತ್ತಿದ್ದ ಮಹಿಳೆಯ ಪತಿ ಏಪ್ರಿಲ್-2 ರಂದು ಮೃತಪಟ್ಟಿದ್ದ. ಹೀಗಾಗಿ ಕುಟುಂಬವು ಟಿ.ಆರ್ ಮಿಲ್‍ನ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಿತ್ತು. 10 ದಿನದ ಬಳಿಕ ಮಹಿಳೆಗೂ ನೆಗಡಿ, ಕೆಮ್ಮು, ಶೀತ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ರಾಜಾಜಿನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಳು. ಅಷ್ಟೇ ಅಲ್ಲದೆ ಮಹಿಳೆಯು ಹಂಪಿನಗರದಿಂದ ದೀಪಾಂಜಲಿ ನಗರದ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದಳು. ಹಾಗಾಗಿ ಮಹಿಳೆಯ ಅಣ್ಣನ ಕುಟುಂಬದವರಿಗೂ ಕರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಕರೋನಾದಿಂದ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಸೋಂಕಿತರ ಮಾಹಿತಿ:
ರೋಗಿ-501: ಪಾಣೆ ಮಂಗಳೂರು, ದಕ್ಷಿಣ ಕನ್ನಡದ 47 ವರ್ಷದ ಮಹಿಳೆ. ರೋಗಿ-432 ಜೊತೆ ಸಂಪರ್ಕ.
ರೋಗಿ-502: ಕಲಬುರಗಿಯ 65 ವರ್ಷದ ವೃದ್ಧೆ. ರೋಗಿ-422 ಜತೆ ಸಂಪರ್ಕ.
ರೋಗಿ-503: ಕಲಬುರಗಿಯ 7 ವರ್ಷದ ಬಾಲಕ. ರೋಗಿ-425 ಜತೆ ದ್ವಿತೀಯ ಸಂಪರ್ಕ.
ಕ್ರ.ಸಂ. ಜಿಲ್ಲೆ  ಪ್ರಕರಣ ಗುಣಮುಖ ಸಕ್ರಿಯ ಸಾವು

1 ಬೆಂಗಳೂರು133   57 71 05
2 ಮೈಸೂರು 89  38  51  0
3 ಬೆಳಗಾವಿ 54  6 47  1
4 ವಿಜಯಪುರ 39  0 37  2
5 ಕಲಬುರಗಿ 38  7  24  4
6 ಬಾಗಲಕೋಟೆ 24  2  21  1
7 ಚಿಕ್ಕಬಳ್ಳಾಪುರ 18 1 15  2
8 ದಕ್ಷಿಣ ಕನ್ನಡ18 11 15  2
9 ಮಂಡ್ಯ16  01 6  0
10 ಬೀದರ್‌ಬ15 9  6  0
11 ಬಳ್ಳಾರಿ13 3 10  0
12 ಬೆಂಗಳೂರು ಗ್ರಾ.12 8 4  0
13 ಉತ್ತರ ಕನ್ನಡ 11 10 1 0
14 ಧಾರವಾಡ 9 2 7 0
15 ಗದಗ 4 0 3 1
16 ಉಡುಪಿ‌3 3 0 0
17 ತುಮಕೂರು 3 1 1 1
18 ದಾವಣಗೆರೆ 2 2 0 0
19 ಚಿತ್ರದುರ್ಗ 1 1 0 0
20 ಕೊಡಗು 1 1 0 0
ಒಟ್ಟು5003 182  302  18