ಮುಂಬೈ: ಷೇರು ಮಾರಾಟದ ಪರಿಣಾಮ ಶುಕ್ರವಾರ ಬಾಂಬೆ ಷೇರುಪೇಟೆಯ ಸೆನ್ಸೆಕ್ಸ್ 849.66 ಅಂಕಗಳಷ್ಟು ಕುಸಿತ ದೊಂದಿಗೆ ಹೂಡಿಕೆದಾರರ ವಹಿವಾಟು ನಷ್ಟದಲ್ಲಿ ಮುಂದುವರಿದಿದೆ.
ಸಂವೇದಿ ಸೂಚ್ಯಂಕ 849.66 ಅಂಕಗಳಷ್ಟು ಕುಸಿತದೊಂದಿಗೆ 54,456.49 ಅಂಕಗಳಲ್ಲಿ, ಎನ್ ಎಸ್ ಇ ನಿಫ್ಟಿ ಕೂಡಾ 209.75 ಅಂಕಗಳಷ್ಟು ಇಳಿಕೆಯೊಂದಿಗೆ 16,268.35 ಅಂಕ ಗಳಲ್ಲಿ ವಹಿವಾಟು ಮುಂದುವರಿದಿದೆ.
ಮಾರಾಟದ ಒತ್ತಡದಲ್ಲಿ ಸೆನ್ಸೆಕ್ಸ್ ಕುಸಿತಗೊಂಡ ಪರಿಣಾಮ ಬೋಸ್ಟನ್ ಗ್ರೂಪ್, ವಿಪ್ರೋ, ಕೋಫ್ರೊಜ್, ಆದಿತ್ಯ ಬಿರ್ಲಾ ಫ್ಯಾಶನ್, ಕೋಟಕ್ ಮಹೀಂದ್ರ ಬ್ಯಾಂಕ್, ಟಾಟಾ ಸ್ಟೀಲ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್, ಅದಾನಿ ಪೋರ್ಟ್ಸ್, ಎಲ್ ಆಯಂಡ್ ಟಿ, ಕೋಲ್ ಇಂಡಿಯಾ, ಒಎನ್ ಜಿಸಿ, ಸಿಪ್ಲಾ ಷೇರುಗಳು ಭಾರೀ ನಷ್ಟ ಕಂಡಿದೆ.
ಗುರುವಾರ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 427.79 ಅಂಕ ಏರಿಕೆ ಯೊಂದಿಗೆ 55,320.28 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 121.85 ಅಂಕ ಏರಿಕೆಯೊಂದಿಗೆ 16,478.10 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು.