ಗಾಂಜಾ ಕೃಷಿಗೆ ಥಾಯ್ಲೆಂಡ್ ಸರ್ಕಾರ ಅನುಮತಿ ನೀಡಿದ್ದು, ವೈದ್ಯಕೀಯ ಬಳಕೆಗಾಗಿ ಸುಮಾರು 10 ಲಕ್ಷ ಗಾಂಜಾ ಸಸ್ಯಗಳನ್ನು ವಿತರಿಸಲು ಆರೋಗ್ಯ ಸಚಿವ ಚಾರ್ನ್ ವಿರಾಕುಲ್ ನಿರ್ಧರಿಸಿದ್ದಾರೆ.
ಸರ್ಕಾರದ ನಿರ್ಧಾರದಿಂದ ಥಾಯ್ಲೆಂಡ್‌ನಲ್ಲಿನ ಅಂಗಡಿಗಳು ಮತ್ತು ಕೆಫೆಗಳಲ್ಲಿ ಗಾಂಜಾ ಮಾರಾಟ ಶುರುವಾಗಿದೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆಯನ್ನು ನಿಷೇಧಿಸಲಾಗಿದೆ.
ಈ ನಿಯಮವನ್ನು ಉಲ್ಲಂಘಿಸಿದರೆ ಮೂರು ತಿಂಗಳ ಜೈಲು ಶಿಕ್ಷೆ, 60 ಸಾವಿರ ದಂಡ ವಿಧಿಸಲಾಗುವುದು ಎಂದು ಸರ್ಕಾರ ಎಚ್ಚ ರಿಸಿದೆ. ಗಾಂಜಾ ಮಾರಾಟ ಕಾನೂನುಬದ್ಧವಾದ್ದರಿಂದ ಪ್ರಕರಣಗಳಲ್ಲಿ ಈ ಹಿಂದೆ ಬಂಧಿಸಲಾದ 4,000 ಜನರನ್ನು ಬಿಡುಗಡೆ ಮಾಡಲು ಸರ್ಕಾರ ಸಿದ್ಧವಾಗಿದೆಯಂತೆ.