ಮೂರು ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ತೆರೆಗೆ ಮರಳಿ ಬಂದಿದ್ದಾರೆ. ಈ ಬಾರಿ ಚಾರ್ಲಿಯನ್ನು ಜತೆಗೆ ಕರೆತಂದಿದ್ದಾರೆ. ಭಾವನಾ ತ್ಮಕ ಸೆಳೆತದ ಮನಮು ಟ್ಟುವ, ಮನಮಿಡಿಯುವ ಅದ್ಭುತ ಕಥೆಯನ್ನು ಹೊತ್ತು ಬಂದಿದ್ದಾರೆ.
ಚಾರ್ಲಿ 777 ಅದಾಗಲೇ ಮನೆ ಮಾತಾಗಿದ್ದು, ಎಲ್ಲರ ಮನದಲ್ಲೂ ಚಾರ್ಲಿಯ ಹೆಸರು ಅಚ್ಚೊತ್ತಿದೆ. ಚಾರ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಬಿಡುಗಡೆಗೂ ಮುನ್ನವೇ ಸದ್ದು ಮಾಡಿದೆ. ದೇಶಾದ್ಯಂತ ಇಪ್ಪತ್ತೊಂದು ನಗರಗಳಲ್ಲಿ ಈಗಾಗಲೇ ಪ್ರಿಮಿಯರ ಶೋ ನಡೆದಿದೆ. ಒಂದು ಚಿತ್ರ ಬಿಡುಗಡೆಗೂ ಮೊದಲೇ ಇಷ್ಟೊಂದು ನಗರಗಳಲ್ಲಿ ಪ್ರಿಮಿಯರ್ ಆಗಿರುವುದು ಇದೇ ಮೊದಲು. ಆ ಮೂಲಕ ಚಾರ್ಲಿ ಹೊಸ ದಾಖಲೆ ಬರೆದಿದೆ. ಚಾರ್ಲಿ777 ಬಗ್ಗೆ ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ , ವಿ.ಸಿನಿಮಾಸ್ ನೊಂದಿಗೆ ಮಾತನಾಡಿದ್ದಾರೆ.
ವಿ.ಸಿನಿಮಾಸ್ : ಚಾರ್ಲಿ 777 ನಾಯಕನ ನಿಜ ಜೀವನದ ಕಥೆಯೇ?
ರಕ್ಷಿತ್ ಶೆಟ್ಟಿ : ಈ ಚಿತ್ರದ ಕಥೆಗೂ, ನನ್ನ ಜೀವನಕ್ಕೂ ಒಂದಷ್ಟು ಸಾಮ್ಯತೆ ಇದೆ. ನಾನು ಕೂಡ ಒಬ್ಬೊಂಟಿಯಾಗಿರುತ್ತಿದ್ದೆ. ಪುಸ್ತಕ ಓದುವ, ಹೊಸ ಕಥೆಗಳನ್ನು ಬರೆಯುವ ಕಾಯಕವನ್ನಷ್ಟೇ ಮಾಡುತ್ತಿದ್ದೆ. ಹಾಗಾಗಿ ಈ ಕಥೆ ನನಗೆ ಬಲು ಮೆಚ್ಚುಗೆ ಯಾಯಿತು. ಈ ಚಿತ್ರದಲ್ಲಿ ನಾನು ಧರ್ಮ ಎನ್ನುವ ಪಾತ್ರದಲ್ಲಿ ನಟಿಸಿದ್ದೇನೆ. ಧರ್ಮ ಇಂಜಿನಿಯರಿಂಗ್ ಮುಗಿಸಿದ ಯುವಕ,
ಮನೆಯಲ್ಲಿಯೇ ಒಬ್ಬೊಂಟಿಯಾಗಿರುತ್ತಾನೆ. ಇಡ್ಲಿ, ಸಿಗರೇಟು, ಬಿಯರ್ ಇಷ್ಟೇ ಇವನ ಒಡನಾಡಿಗಳು. ಅಕ್ಕಪಕ್ಕದವರ ಪರಿಚಯವೂ ಇಲ್ಲದ ಮೂಡಿ ಮನುಷ್ಯ. ಜೀವನದಲ್ಲಿ ಗೊತ್ತು ಗುರಿಯಿಲ್ಲದ ವ್ಯಕ್ತಿ. ಆತನ ಜೀವನದಲ್ಲಿ ಶ್ವಾನವೊಂದು ಎಂಟ್ರಿಕೊಟ್ಟಾಗ ಅವನ ಬದುಕು ಹೇಗೆ ಬದಲಾಗುತ್ತದೆ ಎಂಬುದೇ ಚಿತ್ರದ ಕಥೆ. ನಾನು ಕೂಡ ಸಾಕಷ್ಟು ಶ್ವಾನಗಳ ಸಿನಿಮಾ ನೋಡಿದ್ದೇನೆ. ಆದರೆ ಇಲ್ಲಿ ಒಂದು ಶ್ವಾನ ಒಬ್ಬ ವ್ಯಕ್ತಿಯ ಜೀವನದ ದಿಕ್ಕನ್ನೇ ಹೇಗೆ ಬದಲಾಯಿಸುತ್ತದೆ ಎಂಬುದನ್ನು ಮನಮುಟ್ಟುವಂತೆ ಚಿತ್ರದಲ್ಲಿ ಹೇಳಲಾಗಿದೆ. ಅದೇ ಈ ಚಿತ್ರದ ವಿಶೇಷ.
ವಿ.ಸಿ : ಕಿರಣ್ ರಾಜ್ ಸಿನಿಮಾಗಳಲ್ಲಿ ನಟಿಸಬೇಕು ಎಂದು ಮೊದಲೇ ನಿರ್ಧರಿಸಿದ್ರಾ?
ರಕ್ಷಿತ್ : ಕಿರಣ್ ರಾಜ್ ನನ್ನ ಜತೆ ಎರಡು ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು. ಅವರು ಕೆಲಸದಲ್ಲಿ ಮಗ್ನರಾಗುತ್ತಿದ್ದ ರೀತಿ. ಅವರ ಡೆಡಿಕೇಷನ್ ನನಗೆ ಮೆಚ್ಚುಗೆಯಾಗಿತ್ತು. ಹಾಗಾಗಿ ಕಿರಣ್ ಒಳ್ಳೆಯ ನಿರ್ದೇಶಕರಾಗುತ್ತಾರೆ, ಅವರ ನಿರ್ದೇಶನದಲ್ಲಿ ಒಳ್ಳೆಯ ಸಿನಿಮಾ ಮೂಡಿ ಬರುತ್ತದೆ ಎಂಬ ನಿರೀಕ್ಷೆಯಿತ್ತು. ಅಂತೆಯೇ ಅವರು ಚಾರ್ಲಿಯ ಕಥೆ ರಚಿಸಿ ಹೇಳಿದಾಗ, ನನಗೆ ತುಂಬಾ ಮೆಚ್ಚುಗೆಯಾಯಿತು. ಹಾಗಾಗಿಯೇ ಚಿತ್ರತದಲ್ಲಿ ನಟಿಸಲು ಸಂತದಿಂದಲೇ ಒಪ್ಪಿದೆ. ಕಿರಣ್ ನಿರೀಕ್ಷೆಗೂ ಮೀರಿದ ಚಿತ್ರವನ್ನು ಅದ್ಭುತವಾಗಿ ನಿರ್ದೇಶಿಸಿದ್ದಾರೆ.
ವಿ.ಸಿ : ಈ ಚಿತ್ರದ ಪ್ರಮೋಷನ್ ಸ್ಪೆಷಲ್ ಆಗಿದೆಯೆಲ್ಲಾ?
ರಕ್ಷಿತ್ : ಚಿತ್ರದ ಪ್ರಚಾರ ಜೋರಾಗಿದೆ. ಚಿತ್ರದ ರಿಲೀಸ್‌ಗೂ ಮೊದಲೇ ದೊಡ್ಡ ದೊಡ್ಡ ನಗರಗಳಲ್ಲಿ ಪ್ರಿಮಿಯರ್ ಶೋ ನಡೆಸಿದ್ದೇವೆ. ಪ್ರೇಕ್ಷಕರು ಚಿತ್ರ ನೋಡಿ, ಒಂದಷ್ಟು ಪಬ್ಲಿಸಿಟಿ ಆಗಲಿ ಎಂಬುದು ನಮ್ಮ ಇಚ್ಚೆಯಾಗಿತ್ತು. ಅಂತೆಯೇ ಸಿನಿಪ್ರಿಯರು ಸಿನಿಮಾವನ್ನು ಮನಸಾರೆ ಮೆಚ್ಚಿದ್ದಾರೆ. ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಾರ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಡಬ್ ಮಾಡಿದ್ದಾರೆ ಎನ್ನಿಸುವುದೇ ಇಲ್ಲ. ಅಲ್ಲಿನ ಭಾಷೆಗೆ ತಕ್ಕಂತೆ ಮೂಡಿಬಂದಿದೆ. ಇದು ಯುನಿವರ್ಸಲ್ ಎಮೋಷನಲ್ ಕಥೆಯ ಸಿನಿಮಾ.
ವಿ.ಸಿ : ಸಿನಿಮಾ ನೋಡಿದ ಕಲಾವಿದರ ಪ್ರತಿಕ್ರಿಯೆ ಹೇಗಿತ್ತು?
ರಕ್ಷಿತ್ : ಸಿನಿಪ್ರಿಯರ ಜತೆಗೆ ಸಿನಿಮಾ ಕಲಾವಿದರೂ ಕೂಡ ಸಿನಿಮಾ ವೀಕ್ಷಿಸಿದ್ದಾರೆ. ರಮ್ಯಾ, ರಾಣಾ ದಗ್ಗುಬಾಟಿ, ಅಜನೀಶ್ ಹೀಗೆ
ಸಾಕಷ್ಟು ಮಂದಿ ಚಿತ್ರ ಮೆಚ್ಚಿದ್ದಾರೆ. ನಿರ್ದೇಶಕರ ಜತೆಗೆ ಇಡೀ ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದ್ದಾರೆ. ಇದು ನಮ್ಮ ತಂಡಕ್ಕೆ
ಮತ್ತಷ್ಟು ಉತ್ಸಾಹ ತುಂಬಿದೆ.
***
ಚಾರ್ಲಿ777 ನನ್ನ ಸಿನಿಮಾ ಜೀನವದನಲ್ಲಿ ಎಂದು ಮರೆಯದ, ಮರೆಯಲಾಗದ ಚಿತ್ರ. ಈ ಚಿತ್ರದ ಕಥೆ ಕೇಳಿ ಮನಸಾರೆ ಮೆಚ್ಚಿದೆ, ನಟಿಸಲು ಸಂತಸದಿಂದೇ ಒಪ್ಪಿದೆ. ಆದರೆ ಚಿತ್ರದಲ್ಲಿ ನಟಿಸಿದ್ದು ಕಷ್ಟಕರವಾಗಿತ್ತು. ನನ್ನ ಪಾತ್ರವೂ ಚಾಲೆಂಜಿಂಗ್ ಕೂಡ ಆಗಿತ್ತು. ಈ ಚಿತ್ರದಲ್ಲಿ ಚಾರ್ಲಿಯನ್ನು ಬಿಟ್ಟರೆ ರಕ್ಷಿತ್‌ನನ್ನು ಕಾಡುವುದು ನಾನೇ. ನಾವು ಯಾವ ಸಮಯದಲ್ಲಿ ಹೇಳಿ ದರೂ ಸನ್ನಿವೇಶಕ್ಕೆ ಸಿದ್ಧವಾಗುತ್ತೇವೆ. ಆದರೆ ಪ್ರಾಣಿಗಳು ಹಾಗಲ್ಲ, ಅವುಗಳ ಮನಸ್ಥಿತಿಯನ್ನು ಅರಿತು ಶೂಟ್ ಮಾಡಬೇಕಾಗುತ್ತದೆ. ನಾನು ಒಂದು ದೃಶ್ಯಕ್ಕೆ ಸಾಕಷ್ಟು ಟೇಕ್ ತೆಗೆದುಕೊಂಡಿದ್ದೇನೆ. ಕೆಲವೊಂದು ಸೀನ್‌ಗಳನ್ನು ಮೆಚ್ಚಿ ನಿರ್ದೇಶಕರು ಸೂಪರ್ ಎನ್ನುತ್ತಿದ್ದು. ಬಳಿಕ ಮತ್ತೊಂದು ಟೇಕ್ ತೆಗೆದುಕೊಳ್ಳಲು ಹೇಳುತ್ತಿದ್ದರು. ಯಾಕೆಂದರೆ ನಾನು ಅಭಿನಯಿಸಿದ ದೃಶ್ಯದಲ್ಲಿ ಚಾರ್ಲಿ ಒಮ್ಮೊಮ್ಮೆ ಹಾಗೆ ಕುಳಿತ್ತಿರುತ್ತಿದ್ದಳು. ಹಾಗಾಗಿ ಚಾರ್ಲಿ ಶೂಟ್‌ಗೆ ಸಿದ್ಧವಾಗುವವರೆಗೂ ಕಾಯಲೇಬೇಕಿತ್ತು. ಈ ಸಿನಿಮಾದಲ್ಲಿ ನಟಿಸಿದ ಮೇಲೆ ಶ್ವಾನಗಳ ಬಗ್ಗೆ ಅಪಾರ ಪ್ರೀತಿ ಬೆಳೆಯಿತು. ನಾನು ಮಾತ್ರವಲ್ಲ ಸಿನಿಮಾ ನೋಡಿದ ಮೇಲೆ ಪ್ರತಿಯೊಬ್ಬರೂ ಶ್ವಾನ ಪ್ರಿಯ ರಾಗುವುದರಲ್ಲಿ ಅನುಮಾನವೇ ಇಲ್ಲ. ಚಾರ್ಲಿ ಎಲ್ಲಾ ಕಾಲಕ್ಕೂ ಹೊಂದುವ ಅದ್ಭುತ ಕಥನವಾಗಿದೆ.
*
ಚಿತ್ರೀಕರಣದ ವೇಳೆ ಚಾರ್ಲಿಯ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಿದ್ದೆವು. ನನಗೆ ಹಾಗೂ ಸಂಗೀತಾ ಶೃಂಗೇರಿಗೆ ಕ್ಯಾರವಾನ್ ಇರಲಿಲ್ಲ. ಆದರೆ ಚಾರ್ಲಿಗಾಗಿ ಸ್ಪೆಷಲ್ ಕ್ಯಾರವಾನ್ ವ್ಯವಸ್ಥೆ ಮಾಡಲಾಗಿತ್ತು. ವಿಶೇಷ ಸ್ಮಿಮ್ಮಿಂಗ್ ಪೂಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಹವಾಗುಣಕ್ಕೆ ತಕ್ಕಂತೆ ಚಾರ್ಲಿಯ ಮೇಲೆ ನಿಗಾವಹಿಸುತ್ತಿದ್ದೆವು.
*
ಮೈಸೂರಿನಿಂದ ಆರಂಭವಾಗುವ ಜರ್ನಿ ಕಾಶ್ಮೀರದವರೆಗೂ ಸಾಗುತ್ತದೆ. ಚಾರ್ಲಿ ಮತ್ತು ನನ್ನ ನಡುವಿನ ಬಾಂಧವ್ಯದ ಪಯಣದಲ್ಲಿ ಪ್ರೇಕ್ಷಕರು ಸೇರಿಕೊಳ್ಳುತ್ತಾರೆ. ತಮಗೆ ಅರಿವಿಲ್ಲದಂತೆ ನಮ್ಮ ಜತೆ ಟ್ರಾವೆಲ್ ಮಾಡುತ್ತಾರೆ. ಸಿನಿಮಾ ನೋಡಿದ ಪ್ರತಿಯೊಬ್ಬ ರಿಗೂ ಹೊಸ ಪ್ರಪಂಚಕ್ಕೆ ಹೋದ ಅನುಭವವಾಗುತ್ತದೆ.
*
ಈ ಚಿತ್ರಕ್ಕಾಗಿ ನಾವು ನಾಲ್ಕು ಶ್ವಾನಗಳನ್ನು ಪಡೆದುಕೊಂಡೆವು. ಅವುಗಳಿಗೆ ತರಬೇತಿ ನೀಡಿದೆವು. ಎಲ್ಲಾ ಶ್ವಾನಗಳಿಗೂ ಚಾರ್ಲಿ ಎಂತಲೇ ಹೆಸರಿಟ್ಟೆವು. ಅದರಲ್ಲಿ ಎರಡು ಶ್ವಾನಗಳನ್ನು ಚಿತ್ರೀಕರಣಕ್ಕೆ ಬಳಿಸಿಕೊಂಡೆವು. ನಾವು ಚಿತ್ರೀಕರಣಕ್ಕೆ ಸದಾ ಸಿದ್ಧ,
ಆದರೆ ಶ್ವಾನಗಳ ಮೂಡ್ ನೋಡಿಕೊಂಡು ಶೂಟಿಂಗ್ ಮಾಡಬೇಕಿತ್ತು. ಹಾಗಾಗಿ ಅವುಗಳ ಮನಸನ್ನು ಅರಿತು ಚಿತ್ರೀಕರಣ ನಡೆಸಿದೆವು.