ವೀಕೆಂಡ್ ವಿತ್ ಮೋಹನ್
camohanbn@gmail.com
ನೈಜ ಇತಿಹಾಸವನ್ನು ಮಕ್ಕಳಿಗೆ ಪಠ್ಯದಲ್ಲಿ ಪ್ರಸ್ತುತ ಪಡಿಸದಿದ್ದರೆ ಇಡೀ ಜಗತ್ತೇ ನಮ್ಮನ್ನು ನೋಡುವ ಪರಿ ಬದಲಾಗುತ್ತದೆ. ಇತಿಹಾಸದ ನೈಜ ಘಟನೆಗಳನ್ನು ಪ್ರಸ್ತುತಪಡಿಸದಿದ್ದರೆ ಮುಂದಿನ ಪೀಳಿಗೆಯ ಯೋಚನಾ ಲಹರಿ ಬದಲಾಗುತ್ತದೆ. ಕಳೆದ 75 ವರ್ಷಗಳಿಂದ
ಭಾರತೀಯ ಇತಿಹಾಸವನ್ನು ಮಕ್ಕಳಿಗೆ ಹೇಳಿದ್ದರ ಬಗ್ಗೆ ಬಹಳಷ್ಟು ಆಕ್ಷೇಪಗಳಿದ್ದವು, ತಿರುಚಿದ ಇತಿಹಾಸವನ್ನು ಮಕ್ಕಳ ಪಠ್ಯಗಳಲ್ಲಿ ತುಂಬಿದ ಕಮ್ಯುನಿಸ್ಟರು ದಶಕಗಳ ಕಾಲ ಭಾರತದ ಅಭಿವೃದ್ಧಿಯನ್ನೇ ಕುಂಠಿತಗೊಳಿಸಿದ್ದರು.
ಪಾಶ್ಚಿಮಾತ್ಯರ ಸಾಧನೆಗಳನ್ನು ದೊಡ್ಡದಾಗಿ ಬಿಂಬಿಸಿ, ಭಾರತೀಯರಲ್ಲಿ ಬಿಳಿ ಚರ್ಮ ದವರನ್ನು ಕಂಡರೆ ಎಲ್ಲಿಲ್ಲದ ಗೌರವ ನೀಡುವ ಮನಃಸ್ಥಿತಿಯನ್ನು ಬೆಳೆಸ ಲಾಯಿತು. ಇಂದಿಗೂ ಸಹ ಬಿಳಿ ಚರ್ಮದವರೆಂದರೆ ಅತೀ ಬುದ್ಧಿವಂತರೆಂಬ ಭಾವನೆ ಬಹುತೇಕ ಭಾರತೀಯರಲ್ಲಿದೆ. ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿದರೆಂದು ಪಠ್ಯದಲ್ಲಿ ಹೇಳಿದ್ದ ಬುದ್ಧಿ ಜೀವಿಗಳು, ಮೊಘಲರು ಭಾರತಕ್ಕೆ ಬಂದರು’ ಎಂದರು. ನೇರವಾಗಿ ಯುದ್ಧ ಗೆಲ್ಲಲಾಗದ ಮೊಘಲರು ಅತ್ಯಂತ ಕ್ರೂರಿಗಳಾಗಿದ್ದರೆಂಬ ನೈಜ ಇತಿಹಾಸವನ್ನು ಹೇಳಲಿಲ್ಲ.
ತಮ್ಮ ಮತಾಂಧತೆಯ ಮನಃಸ್ಥಿತಿಯಿಂದ ಬಲವಂತವಾಗಿ ಇಸ್ಲಾಂ ಧರ್ಮ ಹೇರಿದ್ದರ ಬಗ್ಗೆ ಹೇಳಲಿಲ್ಲ. ಬ್ರಿಟಿಷರ ಆಳ್ವಿಕೆ ಸಮರ್ಥಿಸಿ ಕೊಳ್ಳಲು ಆರ್ಯರೆಂಬ ಸುಳ್ಳು ಸಿದ್ಧಾಂತ ವನ್ನು ಹೇರಿ, ಇತಿಹಾಸವನ್ನು ಬರೆಯುವಾಗ ‘ಆಕ್ರಮಣ’ವೆಂಬ ಪದಬಳಕೆ ಮಾಡಿದ್ದರು. ಶಾಲೆ ಯಲ್ಲಿ ಓದುವ ಮಕ್ಕಳ ಮನಃಸ್ಥಿತಿಯಲ್ಲಿ ಮೊಘಲರು ಭಾರತಕ್ಕೆ ಬಂದರೆಂಬ ವಾಕ್ಯ ಓದುವಾಗ ಅವರ ಬಗ್ಗೆ ಮೃದು ಧೋರಣೆ ಬರುವುದು ಸಹಜ. ಅತ್ತ ಆರ್ಯರು ಆಕ್ರಮಣ ಮಾಡಿದರೆಂದು ಹೇಳುವಾಗ ಕೋಪ ಬರುವುದು ಸಹಜ. ಇವರು ಬರೆದಿರುವ ಸುಳ್ಳು ಸಿದ್ಧಾಂತವನ್ನು ನಂಬಿಕೊಂಡು ತಮಿಳುನಾಡಿ ನಗುತ್ತಿರುವ ರಾಜಕೀಯವನ್ನು ದಿನನಿತ್ಯ ನೋಡುತ್ತಲೇ ಬಂದಿದ್ದೇವೆ.
ನಾವೆಲ್ಲ ಶಾಲಾ, ಕಾಲೇಜಿನಲ್ಲಿ ಓದಿದ್ದ ಇತಿಹಾಸದ ಪ್ರಕಾರ ಕಾಶ್ಮೀರವೆಂದರೆ ಅಬ್ದುನ ರಾಜಕೀಯ, ರಾಜ ಹರಿಸಿಂಗನ ಅಲ್ಪ ಇತಿಹಾಸ, ಪಾಕಿಸ್ತಾನದೊಡಗಿನ ಸಂಘರ್ಷ. ಆದರೆ 625 ರಿಂದ 855 ರ ನಡುವೆ ಕಾಶ್ಮೀರವನ್ನಾಳಿದ ಕಾರ್ಕೊಟ ಸಾಮ್ರಾಜ್ಯದ ಬಗ್ಗೆ ಶಾಲಾ ಪಠ್ಯ ಗಳಲ್ಲಿ ದೀರ್ಘವಾದ ಉಲ್ಲೇಖವಿರಲಿಲ್ಲ. ಆರರಿಂದ ಒಂಬತ್ತನೆಯ ಶತಮಾನದಲ್ಲಿ ಕಾಶ್ಮೀರದ ಒಬ್ಬ ರಾಜ ಮಧ್ಯಪ್ರಾಚ್ಯದ ಕಾಸ್ಪಿಯನ್ ಸಮುದ್ರದವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದ್ದರ ಬಗ್ಗೆ ಶಾಲೆಗಳಲ್ಲಿ ಓದಲಿಲ್ಲ. ದಕ್ಷಿಣದಲ್ಲಿ ಕರ್ನಾಟಕದ ರಾಷ್ಟ್ರಕೂಟರ ಜತೆ ಆತ ಸಂಪಾದಿಸಿದ್ದಂತಹ ಸ್ನೇಹದ ಬಗ್ಗೆ ಶಾಲಾ ಪಠ್ಯದ ಇತಿಹಾಸದಲ್ಲಿ ತಿಳಿಸಿರಲಿಲ್ಲ.
ಇಡೀ ವಿಶ್ವವೇ ಬೆರಗಾಗುವಂತಹ ಸಾಮ್ರಾಜ್ಯವನ್ನು ಕಟ್ಟಿದ ಮತ್ತು ಅಸಾಧ್ಯವಾದುದನ್ನು ಸಾಧಿಸಿದ ಭಾರತದ ರಾಜವಂಶರುಗಳಲ್ಲಿ ಕಾರ್ಕೋಟ ರಾಜವಂಶಸ್ಥರು ಒಬ್ಬರು. ಈ ರಾಜವಂಶದ ಪ್ರಮುಖ ರಾಜನಾಗಿದ್ದ ‘ಲಲಿತಾದಿತ್ಯ ಮುಕ್ತಾಪೀಡ’ನ ಆಸ್ಥಾನ ಕವಿಯಾಗಿದ್ದ ‘ಕಲ್ಹಣ’ನ ಗ್ರಂಥವಾದ ‘ರಾಜತರಂಗಿಣಿ’ಯಲ್ಲಿ ಬಹುತೇಕ ವಿವರಗಳಿವೆ. ಲಲಿತಾದಿತ್ಯನ ಸಾಮ್ರಾಜ್ಯದಲ್ಲಿ ಸರ್ವಧರ್ಮ ಸಮನ್ವಯವಿತ್ತು.
ದೇಶದಲ್ಲಿಯೇ ಭವ್ಯವಾದಂತಹ ‘ಮಾರ್ಥಾಂಡ ಸೂರ್ಯ ದೇವಾಲಯ’ವನ್ನು ಈತ ಕಟ್ಟಿಸಿದ್ದ. ಸುಮಾರು 230 ವರ್ಷಗಳ ಕಾಲ ಕಾರ್ಕೊಟ ಸಾಮ್ರಾಜ್ಯವು ಕಲೆಗೆ ಬಹಳಷ್ಟು ಕೊಡುಗೆಗಳನ್ನು ನೀಡಿತ್ತು. ಇಂತಹ ಸಾಮ್ರಾಜ್ಯದ ಇತಿಹಾಸವನ್ನು ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ಪಠ್ಯದ ಮೂಲಕ ತಿಳಿಸಿದ್ದರೆ, ಕಾಶ್ಮೀರದಲ್ಲಿನ ಯುವಕರು ಸೈನಿಕರ ಮೇಲೆ ಕಲ್ಲು ತೂರುವ ಕೆಲಸ ಮಾಡುತ್ತಿರಲಿಲ್ಲ. ಕಾರ್ಕೊಟ ಸಾಮ್ರಾಜ್ಯದ ಕೊಡುಗೆಗಳನ್ನು ಮುಚ್ಚಿಟ್ಟು ಮೊಘಲರ ಕೊಡುಗೆಗಳನ್ನು ವಿಸ್ತಾರವಾಗಿ ಇತಿಹಾಸದ ಪಠ್ಯಗಳಲ್ಲಿ ಸೇರಿಸ ಲಾಯಿತು.
ಬರಗೂರು ರಾಮಚಂದ್ರಪ್ಪ ಪರಿಷ್ಕರಿಸಿದ ಪಠ್ಯದಲ್ಲಿ ಈ ಸಾಮ್ರಾಜ್ಯದ ಉಲ್ಲೇಖವಿರಲಿಲ್ಲ. ರೋಹಿತ್ ಚಕ್ರತೀರ್ಥರ ಪರಿಷ್ಕರಣೆಯಲ್ಲಿ ಈ ಸಾಮ್ರಾಜ್ಯದ ಬಗ್ಗೆ ವಿಸ್ತಾರವಾಗಿ ಹೇಳಿದರೆ ಕಾಂಗ್ರೆಸಿನವರಿಗೆ ಪಠ್ಯದ ಕೇಸರೀಕರಣವಾಗುತ್ತದೆ. ‘ಘಜ್ನಿ’ ಹಾಗೂ ‘ಗೋರಿ’ಯ ವಿಷಯ ವನ್ನು ಮಕ್ಕಳಿಗೆ ತಿಳಿಸಿದರೆ ಮಾತ್ರ ಜಾತ್ಯತೀತವಾಗುತ್ತದೆಯೆಂಬ ಭ್ರಮೆ ಇವರದ್ದು. ಕ್ರೂರಿಗಳಾಗಿದ್ದ ಮೊಘಲರನ್ನು ನಾಯಕರಂತೆ ಬಿಂಬಿಸಿದ್ದ ಬರಗೂರು ರಾಮಚಂದ್ರಪ್ಪ ಸಮಿತಿ, ಅವರ ಕ್ರೂರ ಕೃತ್ಯಗಳನ್ನು ಪಠ್ಯದಲ್ಲಿ ಸ್ಪಷ್ಟವಾಗಿ ಹೇಳುವಲ್ಲಿ ವಿಫಲವಾಗಿತ್ತು.
ಔರಂಗಜೇಬನನ್ನು ದೊಡ್ಡ ರಾಜನಂತೆ ಬಿಂಬಿಸಿದ್ದ ಬರಗೂರು ರಾಮಚಂದ್ರಪ್ಪ ಸಮಿತಿ, ಆತನು ಶಿವಾಜಿಯ ಮಗ ಸಂಬಾಜಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದ ಇತಿಹಾಸವನ್ನು ಹೇಳಿರಲಿಲ್ಲ. ಸಿಖ್ಖರ ಒಂಬತ್ತನೆಯ ಗುರು ತೇಜ್ ಬಹಾದ್ದೂರ್‌ರನ್ನು ಬಂಽಸಿ ಕೊಂದಿದ್ದನ್ನು ಹೇಳಲಿಲ್ಲ. ಬರಗೂರರಿಗಿಂತ ಹಿಂದೆ ಮುಡಂಬಡಿತ್ತಾಯರ ಪರಿಷ್ಕರಣೆಯ ಸಂದರ್ಭದಲ್ಲಿ ಈ ಘಟನೆಗಳ ಬಗ್ಗೆ ಸ್ಪಷ್ಟವಾಗಿ ಪಠ್ಯದಲ್ಲಿ ಹೇಳಿದ್ದರೂ ಬರಗೂರು ಸಮಿತಿ, ತಮ್ಮ ಪರಿಷ್ಕರಣೆಯ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ತೆಗೆದು ಹಾಕಿತ್ತು.
ಕಾಂಗ್ರೆಸ್‌ನ ನಾಯಕರಿಗೆ ಮುಸಲ್ಮಾನ್ ದಾಳಿಕೋರರ ಕರಾಳ ಇತಿಹಾಸವನ್ನು ಮುಚ್ಚಿಟ್ಟರಷ್ಟೇ ಜಾತ್ಯತೀತತೆ ಎದ್ದು ಕಾಣುತ್ತದೆ. ವಿಜ್ಞಾನಕ್ಕೆ ಮೊಘಲರು ಹಲವು ಕೊಡುಗೆಗಳನ್ನು ನೀಡಿದ್ದರೆಂದು ಬರಗೂರು ಒಂದೆಡೆ ಹೇಳುತ್ತಾರೆ. 21ನೆಯ ಶತಮಾನದಲ್ಲಿಯೂ ಇಸ್ಲಾಂ ಹಾಗೂ ವಿಜ್ಞಾನದ ನಡುವಣ ಸಂಬಂಧದ ಬಗ್ಗೆ ನಾನೇನು ಪ್ರತ್ಯೇಕವಾಗಿ ಇಲ್ಲಿ ಹೇಳಬೇಕಿಲ್ಲ. ಎಡಚರರು ಬಹಳ ಚತುರತೆ ಯಿಂದ ತಮಗಿಷ್ಟ ಬಂದಂತಹ ಆಯ್ದ ಇತಿಹಾಸದ ಭಾಗಗಳನ್ನು ಮಾತ್ರ ಪಠ್ಯದಲ್ಲಿ ಸೇರಿಸುತ್ತಾರೆ.
ಮೊಘಲರನ್ನು ಅಪ್ರತಿಮ ವೀರರೆಂದು ಬಿಂಬಿಸಿದ್ದ ಎಡಚರು, ಮೊಘಲರನ್ನು ಸುಮಾರು 600 ವರ್ಷಗಳ ಕಾಲ ಕಾಡಿದ್ದಂತಹ ‘ಅಹೋಮ್ ಸಾಮ್ರಾಜ್ಯ’ದ ಇತಿಹಾಸವನ್ನು ಮಕ್ಕಳ ಪಠ್ಯದಲ್ಲಿ ತರಲಿಲ್ಲ. ಅಹೋಮ್ ರಾಜಮನೆತನದವರ ಮೂಲ ಈಗಿನ ಥಾಯ್ಲೆಂಡ್ ಹಾಗೂ ಮ್ಯಾನ್ಮಾರ್ ಭಾಗಗಳು. ಅಲ್ಲಿಂದ ಅವರು ಭಾರತದ ಅಸ್ಸಾಂಗೆ ಬಂದು ನೆಲೆಸಿದರು. ಅಹೋಮ್ ಎಂಬ ಹೆಸರಿನಿಂದಲೇ ‘ಅಸ್ಸಾಂ’ ಎಂಬ ಹೆಸರು ಬಂದಿದೆ.
ಅಫ್ಘಾನಿಸ್ತಾನದಿಂದ ಬಂದ ಮೊಘಲರು ಭಾರತೀಯ ಸಂಸ್ಕೃತಿ ನಾಶಪಡಿಸಿ, ಇಸ್ಲಾಮಿಕ್ ಸಂಸ್ಕೃತಿಯನ್ನು ಹೇರಿದ್ದರು. ಆದರೆ ಎಡಚರರು ಪಠ್ಯಗಳಲ್ಲಿ ಮೊಘಲರ ಸಂಸ್ಕೃತಿಯನ್ನು ಬಹಳ ಸುಽರ್ಘವಾಗಿ ಉಲ್ಲೇಖಿಸಿದ್ದರು. 1228ರಲ್ಲಿ ಅಹೋಮ್ ರಾಜ್ಯ ಸ್ಥಾಪನೆ ಯಾಯಿತು, ‘ಸುಖಪಾ’ ಈ ವಂಶದ ಮೊದಲ ದೊರೆ. 1300ರ ಸುಮಾರಿಗೆ ದೆಹಲಿಯ ಸುಲ್ತಾನರು ಇವರ ಮೇಲೆ ಆಕ್ರಮಣ
ಮಾಡಿ ದರು. ಆದರೆ ಅಹೋಮ್ ರಾಜ್ಯದ ಸೈನಿಕರು ದೆಹಲಿಯ ಸುಲ್ತಾನರನ್ನು ಓಡಿಸಿದ್ದರು. 15 ನೆಯ ಶತಮಾನದ ವೇಳೆಗೆ ‘ಲೋಧಿ’ಯ ಸೇನೆ ಅಹೋಮರ ವಿರುದ್ಧ ಯುದ್ಧಕ್ಕೆ ಬಂದು ಸೋತು ಸುಣ್ಣವಾಗಿ ಹಿಂದಿರುಗಿತ್ತು.
ಪಠ್ಯಗಳಲ್ಲಿ ಮೊಘಲರ ಪರಾಕ್ರಮ ಎತ್ತಿ ತೋರಿಸುತ್ತಿದ್ದ ಎಡಚರರು, ಅವರು ಸೋತ ಬಗ್ಗೆ ಹೇಳಲಿಲ್ಲ. ಟಿಪ್ಪುವಿನ ವಿಚಾರದಲ್ಲಿ ಆತನಿಗೆ ಸುಲ್ತಾನನೆಂಬ ಬಿರುದನ್ನು ಎಡಚರರೆ ತಮ್ಮ ಪಠ್ಯದ ಮೂಲಕ ನೀಡುತ್ತಾರೆ. ಯುದ್ಧ ಮಾಡಲಾಗದೆ ಹೆದರಿ ಕುಳಿತಿದ್ದಂತಹ ಆತನ ಹೇಡಿತನವನ್ನು ಕಂಡಂತಹ ಹೈದರ್ ಅಲಿ ಅವನಿಗೆ ಛಡಿಯೇಟನ್ನು ನೀಡಿದ್ದ. ಆತನು ಶೃಂಗೇರಿ ದೇವಸ್ಥಾನಕ್ಕೆ ನೀಡಿದ್ದ ಕಾಣಿಕೆಗಳ ಬಗ್ಗೆ
ಮಾತ್ರ ಪಠ್ಯದಲ್ಲಿ ಹೇಳಿದ್ದರು. ಆದರೆ ಆತನು ಕಾಣಿಕೆ ನೀಡಿದ್ದ ಕೈಗಳಿಗೆ ಮೇಲುಕೋಟೆ ಬ್ರಾಹ್ಮಣರ ರಕ್ತ ಅಂಟಿತ್ತೆಂಬ ಇತಿಹಾಸವನ್ನು ಪಠ್ಯದಲ್ಲಿ ಹೇಳಲಿಲ್ಲ. ರಾಷ್ಟ್ರವಿರೋಧಿ ಪಠ್ಯಗಳನ್ನೇ ಇತಿಹಾಸದ ಪಠ್ಯಗಳಲ್ಲಿ ಸೇರುಸುತ್ತಿದ್ದ ಎಡಚರರಿಗೆ, ಚಕ್ರತೀರ್ಥ ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆ ಸೇರಿಸುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ.
ಮಾಧ್ಯಮಗಳ ಮೇಲೆ ಎಡಚರರು ಹಿಡಿತ ಕಳೆದುಕೊಂಡ ನಂತರ, ಪಠ್ಯಗಳ ಮೇಲೆ ಹಿಡಿತ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪತ್ರ
ಬರೆಯುವ ಚಳವಳಿ ಶುರು ಮಾಡಿದರು. ತಮ್ಮ ಪಠ್ಯ ವಾಪಸ್ ಪಡೆಯುವ ಚಳವಳಿ ಶುರು ಮಾಡಿದರು. ಡಾ.ಹೆಡಗೇವಾರ್ ಕುರಿತ ಪಠ್ಯವನ್ನು ಸೇರಿಸಿದ ನಂತರ ’ಕೋಮುವಾದ’ದ ಪಠ್ಯಪುಸ್ತಕವೆಂದರು. ಸಿದ್ದರಾಮಯ್ಯ ಅಂಡ್ ಟೀಮ್ ಪುಸ್ತಕದ ‘ಕೇಸರೀಕರಣ’ ವೆಂದರು. ಡಾ.ಹೆಡಗೇವಾರ್ ಕುರಿತ ಪಠ್ಯ ಹೇಗೆ ಕೇಸರೀಕರಣವಾಗುತ್ತದೆಯೆಂದು ಕೇಳಿದರೆ ಉತ್ತರವಿಲ್ಲ ? ಎಡಚರರು ಡಾ.ಹೆಡಗೇ
ವಾರ್ ಬಗ್ಗೆ, ಅವರು ಬ್ರಿಟಿಷರ ಪರವಾಗಿದ್ದರಂತೆ ಎಂಬ ಹಳೆಯ ಸುಳ್ಳನ್ನೇ ಹೇಳುತ್ತಾರೆ.
ಸಾಕ್ಷಿ ನೀಡಿ ಎಂದು ಕೇಳಿದರೆ ಇವರ ಬಳಿ ಉತ್ತರವಿಲ್ಲ. ಮತ್ತದೇ ಗಾಳಿಯಲ್ಲಿ ಗುಂಡು. ಪಠ್ಯದ ವಿಚಾರದಲ್ಲಿ ಸಿದ್ದರಾಮಯ್ಯ ತಮ್ಮ ಸ್ಪರ್ಧಿ ಡಿ.ಕೆ. ಶಿವಕುಮಾರ್ ಗಿಂತಲೂ ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಕಾರಣವಿದೆ. ಸಿದ್ದರಾಮಯ್ಯನವರ ಸುತ್ತಲೂ ಭಜನೆ ಮಾಡಿ ಕೊಂಡಿರುವ ಬಹುತೇಕ ಎಡಚರರು ಮೈಸೂರಿನವರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ, ಪ್ರತಿಷ್ಠಾನ, ಪಠ್ಯಕ್ಕೆ ಸಂಬಂಧಿಸಿದ ಆಯಕಟ್ಟಿನ ಸ್ಥಳಗಳಲ್ಲಿನ ಕುರ್ಚಿಗಳ ಮೇಲೆ ತಮ್ಮ ಕರವಸ್ತ್ರಗಳನ್ನು ಹಾಕಿ ಭದ್ರವಾಗಿ ಕುಳಿತಿದ್ದರು. ಈಗ ತಮ್ಮ ಕುರ್ಚಿಗೆ ಬೆಂಕಿ ಬಿದ್ದಿರುವುದರಿಂದ ಸಿದ್ದರಾಮಯ್ಯನವರ ಮುಂದೆ ನಿಂತು ಇಲ್ಲಸಲ್ಲದ ಸುಳ್ಳುಗಳನ್ನು ಹಬ್ಬಿಸುವಲ್ಲಿ ನಿರತರಾಗಿದ್ದಾರೆ.
ಕಾಂಗ್ರೆಸ್ ಪಕ್ಷ ರಾಜಕೀಯವಾಗಿ ಎಡಚರರನ್ನು ನಂಬಿಕೊಂಡೇ ದೇಶದಾದ್ಯಂತ ತನ್ನ ನೆಲೆಯನ್ನು ಕಳೆದುಕೊಂಡಿದ್ದು. ಅಂತಹದ್ದೇ ಸನ್ನಿವೇಶ ಈಗ ಕರ್ನಾಟಕ ರಾಜ್ಯದಲ್ಲಿದೆ. ಬರಗೂರು ಸಮಿತಿ ತನ್ನ ಪಠ್ಯದಲ್ಲಿ ಕೇವಲ ಇಸ್ಲಾಂ ಹಾಗೂ ಕ್ರಿಶ್ಚಿಯನ್ ರಿಲೀಜನ್ ಬಗೆ ಮಾತ್ರ ಹೆಚ್ಚು ಉಲ್ಲೇಖ ಮಾಡಿತ್ತು. ಯಹೂದಿ ಧರ್ಮದ ಇತಿಹಾಸದ ಬಗ್ಗೆ ಉಲ್ಲೇಖವಿರಲಿಲ್ಲ. ಯಹೂದ್ಯರ ಮೇಲೆ ನಡೆದ ಆಕ್ರಮಣಗಳ
ಇತಿಹಾಸವನ್ನು ಪಠ್ಯದಲ್ಲಿ ಸೇರಿಸಿರಲಿಲ್ಲ. ಇಸ್ರೇಲ ದೇಶ ತನ್ನ ಧರ್ಮವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಡಿದ ಇತಿಹಾಸವನ್ನು ಪಠ್ಯದಲ್ಲಿ ಹೇಳಲಿಲ್ಲ.
ಇರಾನ್ ದೇಶದಲ್ಲಿ ಹುಟ್ಟಿಕೊಂಡಂತಹ ಪಾರ್ಸಿ ಧರ್ಮದ ಬಗ್ಗೆ ಪಠ್ಯದಲ್ಲಿ ಉಲ್ಲೇಖವಿರಲಿಲ್ಲ. ಇಡೀ ಜಗತ್ತೇ ಯಹೂದಿಗಳನ್ನು ಕಡೆಗಣಿಸಿ ದಾಗ, ಭಾರತ ಆಶ್ರಯ ನೀಡಿತ್ತು. ಭಾರತಕ್ಕೆ ಬಂದಂತಹ ಪಾರ್ಸಿ ಧರ್ಮದ ದೊಡ್ಡ ದೊಡ್ಡ ಮನೆತನದ ಪೀಳಿಗೆಯ ವ್ಯವಹಾರಸ್ಥರು ಇಂದು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದಾರೆ. ಎಡಚರು ಜಾತ್ಯತೀತತೆಯ ಹೆಸರಿನಲ್ಲಿ ಹಿಂದೂ ಧರ್ಮ ವಿರೋಽ, ರಾಷ್ಟ್ರವಿರೋಧಿ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ತಮ್ಮ ಪಠ್ಯಗಳಲ್ಲಿ ದಶಕಗಳಿಂದ ನೀಡುತ್ತಲೇ ಬಂದಿದ್ದಾರೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮವನ್ನು ಕೆಟ್ಟದಾಗಿ ಕೆಟ್ಟದಾಗಿ ಬಿಂಬಿಸುವ ಪ್ರಯತ್ನವನ್ನು ಮಾಡಿದ್ದರು. ಭಾರತ ವನ್ನು ತುಂಡರಿಸುವ ನಿಟ್ಟಿನಲ್ಲಿ ಪಠ್ಯದಲ್ಲಿ ಸೇರಿಸಬೇಕಾದಂತಹ ವಿಷಯಗಳನ್ನು ತಮ್ಮ ಸುಳ್ಳು ಇತಿಹಾಸದ ಮೂಲಕ ಸೇರಿಸಿದ್ದರು. ಇಂತಹವರ ಪಠ್ಯಗಳನ್ನು ಓದಿದ ವಿದ್ಯಾರ್ಥಿಯೊಬ್ಬ ‘ಭಾರತ್ ತೇರೆ ಟುಕ್ದೆ ಹೊಂಗೆ’ಎಂದಿದ್ದ. ಮತ್ತೊಬ್ಬ ವ್ಯಕ್ತಿ ಶಾಜಿ ಇಮಾಮ ಈಶಾನ್ಯ ರಾಜ್ಯಗಳ ಹೆಬ್ಬಾಗಿಲಾಗಿರುವ ‘ಚಿಕನ್ ನೆಕ್’ ಭಾಗವನ್ನು ತುಂಡರಿಸಿ ಸಂಪರ್ಕ ಸ್ಥಗಿತಗೊಳಿಸುವ ಮಾತುಗಳನ್ನಾಡಿದ್ದ.
ಇಂತಹ ಮನಃಸ್ಥಿತಿ ಮಕ್ಕಳಲ್ಲಿ ಬೆಳೆಯದೇ ಇರಲು ಎಡಚರರು ಸೃಷ್ಟಿಸಿದ್ದ ಸುಳ್ಳು ಇತಿಹಾಸಗಳ ಶುದ್ದೀಕರಣದ ಅಗತ್ಯವಿತ್ತು. ರಾಷ್ಟ್ರೀಯತೆ ಯನ್ನು ಮಕ್ಕಳಲ್ಲಿ ಬೆಳೆಸುವ ಪಠ್ಯ ಪರಿಷ್ಕರಣೆಗಳು ನಡೆದಾಗ ಎಡಚರರು ಬಾಯಿ ಬಡೆದುಕೊಳ್ಳುವುದು ಹೊಸತೇನಲ್ಲ. ಪಠ್ಯಗಳು ಮಕ್ಕಳ ಕೈಸೇರುತ್ತಿವೆ. ಕುತೂಹಲಕ್ಕಾಗಾದರೂ ಪೋಷಕರು ಓದಿದರೆ ಎಡಚರರು ಹೇಳಿದ ಸುಳ್ಳುಗಳ ಅನಾವರಣ ವಾಗುತ್ತದೆ.