Saturday, 23rd November 2024

ಸೆನ್ಸೆಕ್ಸ್ 318 ಅಂಕ ಕುಸಿತ

sharemkt

ಮುಂಬೈ: ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ವ್ಯವಹಾರ ಆರಂಭಿ ಸಿದೆ. ಸೆನ್ಸೆಕ್ಸ್ 318 ಅಂಕ ಕುಸಿತ ಕಂಡು 51177.30ಕ್ಕೆ ತಲುಪಿದೆ.

ನಿಫ್ಟಿ 100 ಅಂಕ ಕುಸಿದು 15,260ರಂತೆ ವಹಿವಾಟು ನಡೆಸುತ್ತಿದೆ. ಒಟ್ಟಾರೆ ಷೇರು ಮಾರು ಕಟ್ಟೆಯು ನಿರಂತರವಾಗಿ ಭಾರೀ ಕುಸಿದಿದೆ. ಮುಖ್ಯವಾಗಿ ಫಾರ್ಮಾ ಷೇರುಗಳು ಭಾರೀ ಇಳಿಕೆ ಕಂಡಿದೆ. ತಜ್ಞರು ಆಗಿರುವವರು ನೆಸ್ಟ್ಲೆ ಹಾಗೂ ಕೆನರಾ ಬ್ಯಾಂಕ್ ಷೇರು ಗಳನ್ನು ಖರೀದಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇಂಡಸ್‌ಇಂಡಸ್, ಕೆನರಾ ಬ್ಯಾಂಕ್, ನೆಸ್ಟ್ಲೆ ಭಾರೀ ನಷ್ಟವನ್ನು ಕಂಡಿದೆ.

ಕಳೆದ ಎರಡು ದಿನಗಳಿಂದ ನಷ್ಟದೊಂದಿಗೆ ಸಾಗಿದ್ದ ರಿಲಯನ್ಸ್ ಶುಕ್ರವಾರ ಕೊಂಚ ಏರಿಕೆ ಕಂಡಿದೆ. ಈ ನಡುವೆ ಟಿಸಿಎಸ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್ ನಷ್ವದಲ್ಲಿದೆ. ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಕೂಡಾ ನಷ್ಟ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ 1045.60 ಅಂಕ ಕುಸಿದು, 51,495.79ಕ್ಕೆ ತಲುಪಿದೆ. ಇನ್ನು ನಿಫ್ಟಿ 331.55 ಅಂಕ ಕುಸಿದು 15,360.60ಕ್ಕೆ ತಲುಪಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಷೇರು ಮಾರು ಕಟ್ಟೆಯು ಇಷ್ಟೊಂದು ಕೆಳಕ್ಕೆ ಕುಸಿದು ವಹಿವಾಟು ಅಂತ್ಯ ಮಾಡಿದೆ.