Saturday, 23rd November 2024

ಕಳಪೆ ರಸ್ತೆಗಳ ದುರಸ್ಥಿ: ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ನೀಡಿದ್ದ ಹಿನ್ನೆಲೆ ಯಲ್ಲಿ ಕಳಪೆ ರಸ್ತೆಗಳನ್ನು ದುರಸ್ಥಿ ಗೊಳಿಸಿದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಬಳಿಯ ರಸ್ತೆಯನ್ನು ಮೋದಿ ಅವರು ಬೇಸ್ ಕ್ಯಾಂಪಸ್ ಅನ್ನು ಉದ್ಘಾಟಿ ಸಲು ಭೇಟಿ ನೀಡುವ ಕೆಲವು ದಿನಗಳಷ್ಟೇ ರಸ್ತೆಯನ್ನು ಸರಿ ಮಾಡಿದ್ದರು. ಇದೀಗ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ, ಹಾಗೂ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಮೂಲಗಳ ಪ್ರಕಾರ, ನೀರಿನ ಪೈಪ್ ಸೋರಿಕೆಯಿಂದಾಗಿ ರಸ್ತೆ ಕುಸಿದಿದೆ ಎಂದು ತಿಳಿದುಬಂದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಂಗಳವಾರ ಮೋದಿ ನಗರಕ್ಕೆ ಭೇಟಿ ನೀಡುವ ಮುನ್ನ ಸುಮಾರು 14 ಕಿ.ಮೀ ರಸ್ತೆಗಳನ್ನು ಸರಿಪಡಿಸಲು ಹಗಲಿರುಳು ಶ್ರಮಿಸಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದಾಗ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 15 ದಿನಗಳ ಹಿಂದೆ, ಕಾರ್ಯಕ್ರಮ ನಿಗದಿಯಾದಾಗ, ಎಲ್ಲಾ ರಸ್ತೆಗಳನ್ನು ಉತ್ತಮ ಸ್ಥಿತಿ ಯಲ್ಲಿಡಲು ನಾವು ಕ್ರಮ ಕೈಗೊಂಡಿದ್ದೇವೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಪಿ.ಎನ್ ಹೇಳಿದ್ದರು.