Saturday, 23rd November 2024

ಅತ್ಯಾಚಾರಕ್ಕೊಳಗಾದ ಮಹಿಳೆ ವಿರೋಧಿಸದಿರುವುದು ಲೈಂಗಿಕತೆಗೆ ಒಪ್ಪಿಗೆಯಲ್ಲ: ಪಾಟ್ನಾ ಹೈಕೋರ್ಟ್

ಪಾಟ್ನಾ: ಅತ್ಯಾಚಾರಕ್ಕೊಳಗಾದ ಮಹಿಳೆ ಲೈಂಗಿಕ ದೌರ್ಜನ್ಯದ ಸಮಯದಲ್ಲಿ ಹೋರಾ ಡದಿದ್ದರೆ ಅವಳು ಲೈಂಗಿಕತೆಯಲ್ಲಿ ತೊಡಗಿದ್ದಳು ಎಂದರ್ಥವಲ್ಲ ಎಂದು ಪಾಟ್ನಾ ಹೈಕೋರ್ಟ್ ತೀರ್ಪು ನೀಡಿದೆ.

ಮಹಿಳೆ ಅತ್ಯಾಚಾರ ವಿರೋಧಿಸದಿದ್ದರೆ, ಅತ್ಯಾಚಾರಕ್ಕೆ ಪ್ರತಿರೋಧ ತೋರಿರುವ ಯಾವುದೇ ಕುರುಹುಗಳು ಇಲ್ಲದಿದ್ದರೆ, ಆಕೆ ಲೈಂಗಿಕತೆಗೆ ಒಪ್ಪಿಗೆ ನೀಡಿದ್ದಾಳೆ ಎನ್ನುವುದು ಸರಿಯಲ್ಲ ಎಂದು ನ್ಯಾಯಮೂರ್ತಿ ಎ ಎಂ ಬದರ್‌ ಹೇಳಿದ್ದಾರೆ.

2015ರ ಏಪ್ರಿಲ್‌ 9ರಂದು ಮಹಿಳೆಯೊಬ್ಬಳು ಗ್ರಾಮದ ಇಟ್ಟಿಗೆ ಗೂಡುಗಳಲ್ಲಿ ದಿನಗೂಲಿ ಕಾರ್ಮಿಕಳಾಗಿದ್ದು, ಅಂದು ಆಕೆ ಸಂಬಳ ಕೇಳಲು ಮಾಲೀಕನ ಬಳಿ ಹೋಗಿದ್ದಳು. ಈ ವೇಳೆ ಆತ ಹಣ ನೀಡುತ್ತೇನೆ ಎಂದು ಹೇಳಿ ರಾತ್ರಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರ ವೆಸಗಿದ್ದಾನೆ. ಘಟನೆ ಸುದ್ದಿ ತಿಳಿಯುತ್ತಿದ್ದಂತೇ ಅಕ್ಕಪಕ್ಕದ ಮನೆಯವರು ಆರೋಪಿ ಯನ್ನು ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ತೀರ್ಪು ನೀಡುವಾಗ, ನ್ಯಾಯಮೂರ್ತಿ ಎ ಎಮ್ ಬದರ್ ಅವರು, ಮನೆಗೆ ನುಗ್ಗಿದ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದಾಗ, ಮಹಿಳೆಗೆ ಪ್ರತಿರೋಧ ವ್ಯಕ್ತಪಡಿಸಲು ಸಾಧ್ಯವಾಗದೇ ಇರಬಹುದು. ವಿರೋಧ ವ್ಯಕ್ತಪಡಿಸದೇ ಇರುವುದನ್ನು ಲೈಂಗಿಕ ಚಟುವಟಿಕೆಗೆ ಒಪ್ಪಿಗೆ ಇದೆ ಎಂದು ಪರಿಗಣಿಸಲಾಗುವುದಿಲ್ಲ ಎಂದಿದ್ದಾರೆ.

ಪಾಟ್ನಾ ಹೈಕೋರ್ಟ್ ಪೀಠವು ಈ ತೀರ್ಪು ನೀಡಿದ್ದು, ಆರೋಪಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.