Saturday, 14th December 2024

ಕಿರಾತಕ ಮನಃಸ್ಥಿತಿ ಕೊನೆಯಾಗಲಿ

ರಾಜಸ್ಥಾನದ ಉದಯಪುರದಲ್ಲಿ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾರನ್ನು ಬೆಂಬಲಿಸಿ ಪೋಸ್ಟ್ ಹಾಕಿದ್ದ ಟೈಲರ್
ಕನ್ಹಯ್ಯಾ ಲಾಲ್ ಎಂಬಾತನನ್ನು ಹಾಡಹಗಲಿನ ಹತ್ಯೆ ಮಾಡಲಾಗಿದೆ.

ಅದೂ ತಾಲಿಬಾನ್ ಮಾದರಿಯಲ್ಲಿ ಟೈಲರ್‌ನ ಅಂಗಡಿಗೆ ನುಗ್ಗಿದ ಆರೋಪಿಗಳು ಕತ್ತು ಕೊಯ್ದು ಹತ್ಯೆ ಮಾಡಿ, ಹತ್ಯೆ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ದಲ್ಲಿ ಪೋಸ್ಟ್ ಮಾಡಿದ್ದಾರೆ. ಇಂಥ ಪೈಶಾಚಿಕ ಘಟನೆಯನ್ನು ಬಣ್ಣಿಸಲು ಪದಗಳಿಲ್ಲ. ಘಟನೆ ಇಡೀ ದೇಶಕ್ಕೇ ತೀವ್ರ ಘಾಸಿ ಉಂಟು ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಕಾರಣಕ್ಕೆ ಹಾಡ ಹಗಲೇ ಕಾನೂನು ಕೈಗೆತ್ತಿಕೊಂಡು, ಒಬ್ಬ ವ್ಯಕ್ತಿಯ ಶಿರಚ್ಛೇದ ಮಾಡುವಂಥ ಕಠೋರ ಘಟನೆಗಳು ಭಾರತದಂತ ಶಾಂತಿಯ ನೆಲದಲ್ಲೂ ನಡೆಯುವುದು ಸರ್ವಥಾ ಅಪೇಕ್ಷಣಿಯವಲ್ಲ. ಅನುಮಾನವೇ ಇಲ್ಲ, ಇದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪೈಶಾಚಿಕ ಕೃತ್ಯ.

ಹಿಂಸೆ ಯಾವುದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಯಾವ ಧರ್ಮವೂ ಹಿಂಸೆ ಯನ್ನು ಒಪ್ಪುವುದೂ ಇಲ್ಲ. ಇಂಥ ಕಿರಾತಕ ಹತ್ಯೆಯನ್ನು ಪಕ್ಷಾತೀತವಾಗಿ ಖಂಡಿಸಲೇ ಬೇಕು. ಆ ಪಾತಕಿಗಳಿಗೆ ಕಠಿಣಾತಿ ಕಠಿಣ ಶಿಕ್ಷೆ ವಿಽಸಲೇಬೇಕು. ಕಾನೂನು, ಕೋರ್ಟ್, ವಿಚಾರಣೆಗಳ ನೆಪದಲ್ಲಿ ಶೀಕ್ಷೆಯನ್ನು ವಿಳಂಬ ಮಾಡಿದಷ್ಟೂ ಇತರ ವಿಕೃತ ಮನಃಸ್ಥಿ ತಿಗಳು ಇನ್ನಷ್ಟು ವಿಜೃಂಭಿಸುವುದರಲ್ಲಿ ಅನುಮಾನವಿಲ್ಲ. ದೇಶದಲ್ಲಿ ಮತ್ತೊಮ್ಮೆ ಇಂಥ ಘಟನೆಗಳು ಮರುಕಳಿಸಲೇ ಬಾರದು. ಅದಕ್ಕಾಗಿ ಸರಕಾರ, ನ್ಯಾಯಾಲಯ ಇದನ್ನು ವಿಶೇಷ ಪ್ರಕರಣ ವೆಂದು ಪರಿಗಣಿಸಿ ತಕ್ಷಣಕ್ಕೆ ಉಗ್ರ ಶಿಕ್ಷೆಯಾಗುವಂತೆ ಕ್ರಮ ಜರುಗಿಸುವುದು ಅತ್ಯಗತ್ಯ.

ಏಕೆಂದರೆ ರಕ್ಕಸರಷ್ಟೇ ಇಂಥ ಕೃತ್ಯ ಎಸಗಲು ಸಾಧ್ಯ. ಕಾನೂನು- ಕಾಯ್ದೆ ಎನ್ನುವುದಕ್ಕಿಂತ ಇತರರ ಮನಃಪರಿವರ್ತನೆಗಾಗಿ ತುರ್ತು ಕ್ರಮ  ವನ್ನು ಜರುಗಿಸಲೇಬೇಕಿದೆ. ಇಂಥ ಮನಃಸ್ಥಿತಿಯಿಂದ ದುರಳರನ್ನು ಹೊರ ತರಲು ಕಠಿಣ ಕ್ರಮಗಳಿಂದಷ್ಟೇ ಸಾಧ್ಯ. ಕೊಲೆ, ಕೋಮುವಾದ, ಅಸಹಿಷ್ಣುತೆ, ದ್ವೇಷದಿಂದ ಯಾವ ಧರ್ಮಗಳೂ ಈ ಜಗತ್ತಿನ ಇತಿಹಾಸದಲ್ಲಿ ಉಳಿದಿಲ್ಲ, ಇನ್ನು ಉಳಿಯುವುದೂ ಇಲ್ಲ. ಮಾನವೀಯತೆ ಸತ್ತವರಲ್ಲಷ್ಟೇ ಇಂಥ ಅಂಧ ಧರ್ಮಾಭಿಮಾನ ಹೆಡೆಯೆತ್ತುತ್ತದೆ. ಮಾನವತೆಯನ್ನು ಸಾರದ, ಜೀವ ಪ್ರೀತಿಯನ್ನು ಬೋಽಸದ ಧರ್ಮಗಳಿಲ್ಲವೇ ಇಲ್ಲ. ಇಂಥ ವಿಕೃತ ಧರ್ಮಾಭಿಮಾನ ಹೆಚ್ಚಿದಷ್ಟೂ ಧರ್ಮಗಳೂ ಅಳಿಯುತ್ತವೆ.

ಕನ್ಹಯ್ಯ ಕೊಲೆ ಇಂಥ ಅಮಾನವೀಯ ದರ್ಮಾನುಯಾಯಿಗಳನ್ನು ನಾಮಾವಶೇಷ ಮಾಡಲೇಬೇಕಿದೆ. ಇಡೀ ದೇಶ ಕಣ್ಣೀರಿಡುತ್ತಿರುವ ಒಂದು ಹತ್ಯೆಗೆ ನ್ಯಾಯ ಸಿಗಬೇಕೆಂದರೆ, ಈ ನೆಲ ಮರಳಿ ಶಾಂತಿಯ ನೆಲೆವೀಡಾಗಬೇಕೆಂದರೆ ಕೊಂದು ವಿಜೃಂಭಿಸುವ ಕಿರಾರತಕ ಮನಃಸ್ಥಿತಿಯನ್ನು ತಕ್ಷಣ ಚಿವುಟಬೇಕು.