ಶಹಾಪುರ : ನಿಸ್ವಾರ್ಥತೆಯಿಂದ 19 ವರ್ಷ ಸೇವೆ ಸಲ್ಲಿಸಿದ ಬಿಸಿ ಊಟ ನೌಕರರನ್ನು 60 ವರ್ಷ ನೆಪವೊಡ್ಡಿ ಕೆಲಸದಿಂದ ಬಿಡುಗಡೆಗೊಳಿಸಿರುವ ಸರ್ಕಾರದ ಕ್ರಮ ವಿರೋಧಿಸಿ ರಾಜ್ಯದ್ಯಂತ ಪ್ರತಿನಿಧಿ ಪ್ರತಿ ಭಟನೆಗಳು ನಡೆದಿದ್ದು, ಬಿಸಿಊಟ ಅಡಿಗೆಯ ವರಿಗೆ ಸೂಕ್ತ ಪರಿಹಾರ ನೀಡುವವರೆಗೂ ಕೆಲಸದಿಂದ ಕೈ ಬಿಡಬಾರದು ಎಂದು ಮುಖ್ಯಮಂತ್ರಿ ಹಾಗೂ ಸಂಬಂಧ ಪಟ್ಟ ಸಚಿವರ ಜೊತೆ ತಾವು ಮಾತುಕತೆ ನಡೆಸಿ ಈ ನೌಕರರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ಅಕ್ಷರ ದಾಸೋಹ ನೌಕರರ ಸಂಘ ಸಿಐಟಿಯು ಸಂಯೋಜಿತ ತಾಲೂಕ ಸಮಿತಿ ವತಿ ಯಿಂದ ಶಾಸಕ ಶರಣಬಸಪ್ಪಗೌಡ ದರ್ಶನಾಪೂರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇದೇ ಸಮಯದಲ್ಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, 19 ವರ್ಷದಿಂದ ಅತ್ಯಂತ ಕಡಿಮೆ ಸಂಬಳದಲ್ಲಿ ದುಡಿದು ಶೈಕ್ಷಣಿಕ ಪ್ರಗತಿಯಲ್ಲಿ ಅಕ್ಷರ ದಾಸೋಹ ನೌಕರರ ಪಾತ್ರ ಪ್ರಮುಖವಾಗಿದೆ. ಸರ್ಕಾರ ಇವರ ಸೇವೆಯನ್ನು ಗುರುತಿಸಿ ನಿವೃತ್ತಿ ಸೌಲಭ್ಯ, ಸೇವೆ ಸಲ್ಲಿಸಿರುವುದಕ್ಕೆ ಒಂದಿಷ್ಟು ಹಣ ಕೊಡಬೇಕಾಗಿರೋದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಯಾಗಿದೆ. ಆದರೆ ಸರ್ಕಾರ ತನ್ನ ಜವಾಬ್ದಾರಿ ಯನ್ನು ಮರೆತಿದ್ದು, ತಾವು ಸಲ್ಲಿಸಿರುವ ಮನವಿ ಪತ್ರದಲ್ಲಿರುವ ಬೇಡಿಕೆಗಳ ಬಗ್ಗೆ ಮುಖ್ಯ ಮಂತ್ರಿ ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವದಾಗಿ ಭರವಸೆ ನೀಡಿದ ಅವರು ನಿಮ್ಮ ಈ ನ್ಯಾಯಯುತ ವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿರುತ್ತದೆ ಎಂದು ಭರವಸೆ ನೀಡಿದರು.
ಮನವಿಪತ್ರವನ್ನು ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಅಕ್ಷರ ದಾಸೋ ನೌಕರ ಸಂಘದ ತಾಲೂಕ ಗೌರವಾಧ್ಯಕ್ಷ ಸುನಂದ ಹಿರೇಮಠ್, ಕಾರ್ಯದರ್ಶಿ ಈರಮ್ಮ ಹೈಯಾಳ್ಕರ್, ಖಜಾಂಚಿ ಮಂಜುಳ ಹೊಸಮನಿ, ನ್ಯಾಮ್ಕಿಬಾಯಿ, ಸುಮಿತ್ರ ಇದ್ದರು.