ನೋಯ್ಡಾ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ರಂಜನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಛತ್ತೀಸ್ಗಢ ಪೊಲೀಸರು ಗಾಜಿಯಾ ಬಾದ್ನ ಇಂದಿರಾಪುರಂನಲ್ಲಿರುವ ರಂಜನ್ ಮನೆಗೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ.
‘ಸ್ಥಳೀಯ ಪೊಲೀಸರಿಗೆ ತಿಳಿಸದೆ ನನ್ನನ್ನು ಬಂಧಿಸಲು ಛತ್ತೀಸ್ಗಢ ಪೊಲೀಸರು ನನ್ನ ಮನೆಯ ಹೊರಗೆ ನಿಂತಿದ್ದಾರೆ. ಇದು ಕಾನೂನುಬದ್ಧವಾಗಿದೆಯೇ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಸ್ಎಸ್ಪಿ ಗಾಜಿಯಾಬಾದ್ ಮತ್ತು ಎಡಿಜಿ ಲಕ್ನೋ ಅವರನ್ನು ಟ್ಯಾಗ್ ಮಾಡಿದ ಟ್ವೀಟ್ನಲ್ಲಿ ರಂಜನ್ ಹೇಳಿದ್ದಾರೆ.
ಅವರ ಟ್ವೀಟ್ಗೆ ಪ್ರತಿಕ್ರಿಯೆಯಾಗಿ ರಾಯ್ಪುರ ಪೊಲೀಸರು ತಿಳಿಸಲು ಅಂತಹ ಯಾವುದೇ ನಿಯಮವಿಲ್ಲ ಎಂದು ಹೇಳಿದ್ದಾರೆ.
ವಿಷಯ ಸ್ಥಳೀಯ ಪೊಲೀಸರ ಅರಿವಿನಲ್ಲಿದೆ. ಇಂದಿರಾಪುರಂ ಪೊಲೀಸ್ ಠಾಣೆ ಸ್ಥಳದಲ್ಲೇ ಇದ್ದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಂಜನ್ ಅವರು ತಮ್ಮ ವಿಶೇಷ ಟೆಲಿವಿಷನ್ ಶೋನಲ್ಲಿ ಹಿರಿಯ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯನ್ನು ತಿರುಚಿತ್ತು.