Saturday, 23rd November 2024

ಸೆನ್ಸೆಕ್ಸ್ 498 ಪಾಯಿಂಟ್‌ ಏರಿಕೆ

ಮುಂಬೈ: ಗುರುವಾರ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟೈಟಾನ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಹೀಂದ್ರಾ ಲಾಭ ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 498 ಪಾಯಿಂಟ್‌ಗಳಷ್ಟು ಏರಿ, 54,183ಕ್ಕೆ ತಲುಪಿದರೆ, ನಿಫ್ಟಿ 16,000 ಗಡಿಯನ್ನು ದಾಟಿ ವ್ಯವಹರಿಸುತ್ತಿದೆ. ಸೆನ್ಸೆಕ್ಸ್ 320 ಅಂಕ ಏರಿಕೆಯೊಂದಿಗೆ 54,071 ನಲ್ಲಿ ಮತ್ತು ನಿಫ್ಟಿ 50 ಸೂಚ್ಯಂಕ 90 ಅಂಕ ಏರಿ 16,080 ಕ್ಕೆ ತಲುಪಿದೆ.

ಎನ್‌ಎಸ್‌ಇಯಲ್ಲಿನ 15 ಸೆಕ್ಟರ್ ಗೇಜ್‌ಗಳು ಕೂಡಾ ಲಾಭ ಕಂಡಿದೆ. ನಿಫ್ಟಿ ಆಟೋ, ಪಿಎಸ್‌ಯು ಬ್ಯಾಂಕ್, ರಿಯಾಲ್ಟಿ, ಬ್ಯಾಂಕ್, ಖಾಸಗಿ ಬ್ಯಾಂಕ್, ತೈಲ ಮತ್ತು ಅನಿಲ, ಲೋಹ ಮತ್ತು ಐಟಿ ಸೂಚ್ಯಂಕಗಳು ಶೇಕಡ ಒಂದರಷ್ಟು ಏರಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇಕಡಾ 0.93 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ ಶೇ.1.2ರಷ್ಟು ಹೆಚ್ಚಾಗಿದೆ.

ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ವಿಪ್ರೋ, ಒಎನ್‌ಜಿಸಿ, ಸನ್ ಫಾರ್ಮಾ, ಮಹೀಂದ್ರಾ ಆಂಡ್ ಮಹೀಂದ್ರ, ಎನ್‌ಟಿಪಿಸಿ, ಭಾರತ್ ಪೆಟ್ರೋಲಿಯಂ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಕೂಡಾ ಏರಿಕೆ ಕಂಡಿದೆ. 2.049 ಷೇರುಗಳು ಏರಿಕೆಯಾದರೆ 583 ಷೇರುಗಳು ಕುಸಿದಿದೆ.