Saturday, 23rd November 2024

ಬಕ್ರೀದ್ ಹಬ್ಬದಂದು ರಸ್ತೆ, ಜಂಕ್ಷನ್’ಗಳಲ್ಲಿ ನಮಾಜ್‌ ಮಾಡುವಂತಿಲ್ಲ: ಬಿಬಿಎಂಪಿ

bbmp

ಬೆಂಗಳೂರು: ಬಕ್ರೀದ್ ಹಬ್ಬ ಜು.10ರಂದು ಆಚರಿಸಲಾಗುತ್ತಿದ್ದು, ರಸ್ತೆಗಳಲ್ಲಿ ಅಥವಾ ಜಂಕ್ಷನ್ ಗಳಲ್ಲಿ ನಮಾಜ್ ಮಾಡಬಾರದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು, ಸುಗಮ ಸಂಚಾರ ಖಚಿತ ಪಡಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳ ಲಾಗಿದೆ. ಈ ವಿಷಯವನ್ನು ಬೆಂಗಳೂರು ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ವಿವಾದಿತ ಈದ್ಗಾ ಮೈದಾನದ ಬಗ್ಗೆ ಮಾತನಾಡಿ, ಬಕ್ರೀದ್ ಹಬ್ಬಕ್ಕೂ ಮುನ್ನ ಪ್ರಾಣಿಗಳ ಮಾರಾಟದಿಂದಾಗಿ ಬಿಬಿಎಂಪಿ ಇನ್ನೂ ಈ ಪ್ರದೇಶವನ್ನು ಸ್ವಚ್ಛಗೊಳಿಸಿಲ್ಲ. ಚಾಮರಾಜ ಪೇಟೆ ಈದ್ಗಾ ಮೈದಾನದಲ್ಲಿ ನಮಾಜ್ ಮಾಡಬಹುದು, ಏಕೆಂದರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಂದ ಸ್ಪಷ್ಟ ತೀರ್ಪು ಬಂದಿರುವುದರಿಂದ ಮತ್ತು ಪ್ರತಿ ವರ್ಷದಂತೆ ಈ ಬಾರಿಯೂ ಪ್ರಾರ್ಥನೆಗೆ ಅನುಮತಿ ನೀಡಲಾಗುವುದು ಎಂದು ಒತ್ತಿ ಹೇಳಿದರು.

ಬಕ್ರೀದ್ ಸಂದರ್ಭದಲ್ಲಿ ಪ್ರಾಣಿಬಲಿಗೆ ಸಂಬಂಧಿಸಿದಂತೆ, ಬಿಬಿಎಂಪಿಯು ನಡಾವಳಿಯ ಪ್ರತಿಯನ್ನು ವಿತರಿಸಿದೆ, ಅದರಲ್ಲಿ ಬೆಂಗಳೂರು ಡಿಸಿ ಅವರು ಹೊಸ ಕಾಯ್ದೆಯನ್ನು ಜಾರಿಗೆ ತಂದ ನಂತರ ಹಸು, ಒಂಟೆ, ಎಮ್ಮೆಗಳನ್ನು ವಧೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.