2003ರಲ್ಲಿ ದಾಖಲಾದ ಪ್ರಕರಣದಲ್ಲಿ ಟ್ರಯಲ್ ಕೋರ್ಟ್ ೨೦೧೮ರಲ್ಲಿ ದಲೆರ್ ಮೆಹಂದಿಯನ್ನು ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲುಶಿಕ್ಷೆ ವಿಧಿ ಸಿತ್ತು. ಆನಂತರ ಜಾಮೀನು ಪಡೆದು ಹೊರಬಂದಿದ್ದ ದಲೆರ್ ಮೆಹಂದಿ ಪಾಟಿಯಾಲ ಸೆಷೆನ್ಸ್ ಕೋರ್ಟ್‌ನಲ್ಲಿ ಆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು.
ಪಿಜನ್ ಪೆಲ್ಟಿಂಗ್ ಮ್ಯೂಸಿಕ್ ತಂಡಗಳ ಮೂಲಕ ಜನರನ್ನು ಅಮೆರಿಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ದಲೆರ್ ಮೆಹಂದಿಯ ಅಣ್ಣ ಶಂಶೇರ್ ಮೆಹಂದಿ ಮೇಲೆ ಪ್ರಕರಣ ದಾಖಲಾ ಯಿತು. ನಂತರ ದಲೆರ್ ಮೆಹಂದಿಯ ಹೆಸರೂ ಈ ಪ್ರಕರಣ ದಲ್ಲಿ ತಗುಲಿ ಹಾಕಿಕೊಂಡಿತು. ಮೆಹಂದಿ ಸಹೋದರರು ಸೇರಿ ಏಳು ಮಂದಿ ವಿರುದ್ಧ ೨೦೦೩ ರಲ್ಲಿ ಪ್ರಕರಣ ದಾಖಲಾಯಿತು.
2018ರಲ್ಲಿ ಪಾಟಿಯಾಲ ಟ್ರಯಲ್ ಕೋರ್ಟ್ ದಲೆರ್ ಮೆಹಂದಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತು.
1998 ಮತ್ತು 1999ರಲ್ಲಿ ಮೆಹಂದಿ ಸಹೋದರರು ಎರಡು ಮ್ಯೂಸಿಕ್ ತಂಡಗಳ ಜೊತೆ 10 ಮಂದಿಯನ್ನು ಅಮೆರಿಕಕ್ಕೆ ಕರೆದೊ ಯ್ದಿದ್ದರು. ಅಲ್ಲಿ ಅವರನ್ನು ವಾಪಸ್ ಕರೆದುಕೊಂಡು ಬರದೇ ಅಲ್ಲಿಯೇ ಅಕ್ರಮವಾಗಿ ಬಿಟ್ಟು ಬರಲಾಯಿತು ಎಂಬ ಆರೋಪ ಕೇಳಿಬಂದಿತ್ತು.
2 ವರ್ಷ ಜೈಲುಶಿಕ್ಷೆ ವಿಧಿಸಿದ ಬಳಿಕ ಜಾಮೀನಿನ ಮೇಲೆ ಹೊರಬಂದ ದಲೆರ್ ಮೆಹಂದಿ ಒಂದು ವರ್ಷ ನಂತರ ಬಿಜೆಪಿ ಸೇರಿದ್ದರು.