Friday, 13th December 2024

ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಭಾರತೀಯ ತಂಡ ಪ್ರಕಟ

ನವದೆಹಲಿ: ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ 215 ಕ್ರೀಡಾಪಟುಗಳು ಮತ್ತು 107 ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ 322 ಸದಸ್ಯರ ತಂಡವನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಕಟಿಸಿದೆ.

ಕ್ರೀಡಾಕೂಟವು ಜು.28 ರಿಂದ ಆಗಸ್ಟ್ 8 ರವರೆಗೆ ಲಂಡನ್‌ ನಲ್ಲಿ ನಡೆಯಲಿದೆ. ಭಾರತ ತಂಡವು ಸಾಂಪ್ರದಾಯಿಕ ಶಕ್ತಿ ಕೇಂದ್ರಗಳಾದ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಂತರ ಮೂರನೇ ಸ್ಥಾನದಲ್ಲಿದೆ.

ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾತನಾಡಿ, ನಾವು ನಮ್ಮ ಅತ್ಯಂತ ಬಲಿಷ್ಠ ತಂಡಗಳಲ್ಲಿ ಒಂದನ್ನು ಸಿಡಬ್ಲ್ಯೂಜಿಗೆ ಕಳುಹಿಸುತ್ತಿದ್ದೇವೆ. ಶೂಟಿಂಗ್ ಇಲ್ಲದೇ ಇರುವಂತಹ ಬಲಯುತ ಕ್ರೀಡೆಯೊಂದಿಗೆ, ಕಳೆದ ಆವೃತ್ತಿಯಿಂದ ನಮ್ಮ ಪ್ರದರ್ಶನವನ್ನು ಉತ್ತಮಪಡಿಸುವ ವಿಶ್ವಾಸ ನಮಗಿದೆ ಎಂದಿದ್ದಾರೆ.