Saturday, 14th December 2024

JEE ಮೇನ್ಸ್; ಜುಲೈ 25ಕ್ಕೆ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಜಂಟಿ ಪ್ರವೇಶ ಮೇನ್ಸ್ ಪರೀಕ್ಷೆ ಎರಡನೇ ಅವಧಿ ಯನ್ನು ಜು.21ರ ಬದಲಿಗೆ ಜು.25ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ.

ಪರೀಕ್ಷೆ ಮುಂದೂಡಿರುವ ಬಗ್ಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಭಾರತ ಸೇರಿದಂತೆ ಒಟ್ಟು 17 ದೇಶಗಳಲ್ಲಿ ಪರೀಕ್ಷೆ ನಡೆಯಲಿದ್ದು ಸುಮಾರು 6.29ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪ್ರವೇಶ ಪತ್ರಿಕೆಗಳು ಗುರುವಾರದಿಂದ ಲಭ್ಯವಿರುತ್ತದೆ.

ಈ ಮೊದಲು ಎರಡನೇ ಅವಧಿಯ ಪರೀಕ್ಷೆಯನ್ನು ಜು.21ರಿಂದ 30ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಮೊದಲ ಅವಧಿಯ ಪರೀಕ್ಷೆಯನ್ನು ಜೂನ್ 23ರಿಂದ 29ರವರೆಗೆ ನಡೆಸಲಾಗಿತ್ತು. ಫಲಿತಾಂಶವನ್ನು ಜುಲೈ 12ರಂದು ಪ್ರಕಟಿಸ ಲಾಗಿತ್ತು.