Saturday, 23rd November 2024

ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ಪ್ರಯಾಣಿಕನ ಬಂಧನ

ನವದೆಹಲಿ: ಇಂಡಿಗೊ ಏರ್‌ಲೈನ್ಸ್‌ ವಿಮಾನದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆಗೊಳಿಸ ಲಾಗಿದೆ.

ಶ್ರೀನಗರ ಮತ್ತು ಲಖನೌ ನಡುವೆ ಸಂಚರಿಸುತ್ತಿದ್ದ 6E6075 ವಿಮಾನದಲ್ಲಿ ಈ ಪ್ರಕರಣ ವರದಿಯಾಗಿದೆ. ಅಮೃತಸರ ಮಾರ್ಗವಾಗಿ ಸಂಚರಿಸುವ ಈ ವಿಮಾನ ವು ಶ್ರೀನಗರದಿಂದ ಹಾರಾಟ ಆರಂಭಿಸಿದ ಬಳಿಕ, ಪ್ರಯಾಣಿಕ ಗಗನಸಖಿ ಯೊಂದಿಗೆ ವಾಗ್ವಾದ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ತಿಳಿಸಿದೆ.

ಬಳಿಕ ಈ ವಿಚಾರವನ್ನು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅದರಂತೆ ವಿಮಾನವು ಅಮೃತಸರ ನಿಲ್ದಾಣಕ್ಕೆ ಆಗಮಿಸುವ ಮುನ್ನ ಭದ್ರತಾ ಸಿಬ್ಬಂದಿಯನ್ನು ರನ್‌ವೇ ಬಳಿ ನಿಯೋಜಿಸಲಾಗಿತ್ತು. ನಂತರ ಪ್ರಯಾಣಿಕನನ್ನು ಬಂಧಿಸಿ, ಪೊಲೀಸರ ವಶಕ್ಕೆ ಕಳುಹಿಸಲಾಗಿದೆ.