ದಾಸ್ ಕ್ಯಾಪಿಟಲ್
dascapital1205@gmail.com
ಶ್ರೀಮನ್ ಮಹಾಶಯರೇ, ಇಲ್ಲಿಯವರೆಗೆ ನೀವು ಮಾಡಿದ್ದಾದರೂ ಏನು? ಸಾಧಿಸಿದ್ದಾದರೂ ಯಾವುದನ್ನು? ವೇದಗಳನ್ನು
ಉಪೇಕ್ಷೆ ಮಾಡಿದಿರಿ. ಉಪನಿಷತ್ತುಗಳನ್ನು ಜರೆದಿರಿ. ಗೀತೆಯನ್ನು ಹಿಂಸಾ ಬೋಧಕ ಗ್ರಂಥವೆಂದಿರಿ. ಪುರಾಣಗಳನ್ನು ಹಂಗಿಸಿ ದಿರಿ.
ರಾಮಾಯಣ ಮಹಾಭಾರತ ಕಾವ್ಯ ಇತಿಹಾಸ ಗ್ರಂಥಗಳನ್ನು ಅಣಕಿಸಿದಿರಿ. ಇತಿಹಾಸ ಪುರುಷರನ್ನು ನಿಂದಿಸಿ ಅವಮಾನಿಸಿದಿರಿ. ಶ್ರೀರಾಮ ಶ್ರೀಕೃಷ್ಣರನ್ನು ಉಪೇಕ್ಷೆ ಮಾಡಿ ದಿರಿ. ಅಯೋಧ್ಯೆಯನ್ನು ಅಲ್ಲಗಳೆದಿರಿ. ಮಥುರೆಯನ್ನು ಹೀಗಳೆದಿರಿ. ರಾಮಸೇತುವೆ ಸುಳ್ಳು ಎಂದಿರಿ. ರಾಮ ಯಾವ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರ್ ಪದವೀಧರ ಎಂದಿರಿ. ಹಿಂದೂ, ಹಿಂದುತ್ವವನ್ನು ಆಜನ್ಮ ವೈರಿಯಾಗಿ ಕಂಡಿರಿ. ಹಿಂದೂಪರ ಮಾತಾಡಿದವರನ್ನು ಕೋಮುವಾದಿ ಎಂದಿರಿ. ಹಿಂದೂವಾಗೇ ಇದ್ದು ಹಿಂದುತ್ವವನ್ನು, ಹಿಂದೂಸ್ತಾನವನ್ನು ಖಂಡಿಸುತ್ತ ಬೌದ್ಧ, ಇಸ್ಲಾಂ ಅನ್ನು ಹೊಗಳಿದಿರಿ.
ಎಷ್ಟು ಸಾಧ್ಯವೋ ಅಷ್ಟೂ ಬಗೆಯಲ್ಲಿ ರಾಷ್ಟ್ರೀಯತೆಯನ್ನು ನಪುಂಸಕ ವಾದವೆಂದು ವ್ಯಾಖ್ಯಾನಿಸಿದಿರಿ. ರಾಷ್ಟ್ರೀಯತೆಯನ್ನು ಪ್ರತಿನಿಧಿಸಿದಿರಿ. ರಂಗಭೂಮಿ, ಸಂಗೀತ, ಸಾಹಿತ್ಯ, ಜನಪದ, ರೇಡಿಯೋ, ರಾಜಕೀಯ, ಅಕಾಡೆಮಿ, ಪ್ರತಿಷ್ಠಾನ, ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು ಎಲ್ಲಿ ಸಾಧ್ಯವೋ ಅಲ್ಲ ಎಡಪಂಥದ ಚಹರೆಯನ್ನು ವಿಸ್ತರಿಸಿ ಬೆಳೆಸಿದಿರಿ. ಸಾಹಿತ್ಯ ಮತ್ತು ರಾಜಕೀಯ ದಲ್ಲಂತೂ ಅತಿರೇಕ ಎಂಬಷ್ಟು ಬೆಳೆಸಿ ವಿಸ್ತರಿಸಿದಿರಿ. ಸ್ವಾತಂತ್ರ್ಯಾನಂತರದಲ್ಲಿ ಈ ದೇಶದ ನೈಜ ಇತಿಹಾಸವನ್ನು ಅಧಿಕಾರಕ್ಕೆ ಬೇಕಾದಂತೆ ಬೇಕಾದ ಹಾಗೆ ತಿರುಚಿದಿರಿ.
ಮಕ್ಕಳ ಕಲಿಕೆಯಲ್ಲಿ ಎಡಪಂಥೀಯ ಸಿದ್ಧಾಂತವನ್ನು ಪ್ರತಿನಿಧಿಸುವ ಪಠ್ಯವಿಷಯಗಳನ್ನು ಪ್ರಾಥಮಿಕ ಹಂತದಿಂದ ವಿವಿವರೆಗೆ, ಅನ್ಯಾನ್ಯ ಕ್ಷೇತ್ರ, ವಿಭಾಗ ಅಂತ ಏನೇನಿದೆಯೋ ಅಲ್ಲ ತುಂಬಿದಿರಿ. ಕಥೆಗಳನ್ನು ಕಟ್ಟಿದಿರಿ. ಕಟ್ಟಿಸಿದಿರಿ. ಬರೆದಿರಿ. ಬರೆಸಿದಿರಿ. ಒಂದಷ್ಟು ಸತ್ಯವನ್ನೂ, ಮೂಲವನ್ನೂ ಉದ್ದೇಶಪೂರ್ವಕವಾಗಿ ಮರೆತಿರಿ. ಮರೆಸಿದಿರಿ. ಕಾದಂಬರಿಗಳಲ್ಲಿ ಅಣಕವಾಡಿದಿರಿ. ದೇಶಭಕ್ತಿಗೀತೆಗಳನ್ನು ಮನಬಂದಂತೆ ಬದಲಾಯಿಸಿದಿರಿ. ವಂದೇಮಾತರಂ ಬದಿಗೊತ್ತಿದಿರಿ. ರಘುಪತಿ ರಾಘವ ರಾಜಾರಾಮ ಎಂಬ ರಾಮಧುನ್ ಅಸ್ಮಿತೆಯನ್ನೇ ಬದಲಾಯಿಸಿ ಈಶ್ವರ, ಅ ಭೇದವಿಲ್ಲವೆಂದಿರಿ.
ಅಹಿಂಸೆಯನ್ನು ಹಿಂದೂಗಳಿಗೆ ಮಾತ್ರ ಉಪದೇಶಿಸಿದಿರಿ. ಬೋಧಿಸಿದಿರಿ. ಅವರೇನೇ ಮಾಡಿದರೂ ಧರ್ಮಯುದ್ಧ ಎಂದಿರಿ. ಗೀತೆ
ಯನ್ನು ಅಪವಿತ್ರಗೊಳಿಸಿದಿರಿ. ಕರ್ಮದ ವ್ಯಾಖ್ಯಾನವನ್ನು ತಿರುಚಿದಿರಿ. ಕಂಡಕಂಡ ಕಡೆಗೆಲ್ಲ ನಿಮ್ಮ ನಿಮ್ಮವರ ಹೆಸರುಗಳನ್ನು ಕೆತ್ತಿಸಿದಿರಿ. ದೇವದೇವತೆಗಳ ಮೂರ್ತಿಭಂಜಕರನ್ನು ಬೆಂಬಲಿಸಿದಿರಿ. ದೇವಸ್ಥಾನಗಳನ್ನು ಪುಡಿಮಾಡಿ ಮಸೀದಿಗಳನ್ನು ಕಟ್ಟಿಸಿ ದವರನ್ನು ಕೊಂಡಾಡಿ ಓದುವಂತೆ ಮಾಡಿದಿರಿ.
ಕಳ್ಳಕೊರಮರ ಚರಿತ್ರೆಯನ್ನು ಬಾಯಿಪಾಠ ಮಾಡಿಸಿದಿರಿ. ಗತಿಗೋತ್ರ ಇಲ್ಲದವರನ್ನು ವೈಭವೀಕರಿಸಿದಿರಿ. ನಗರ, ಪಟ್ಟಣ,
ರಸ್ತೆ, ಕಟ್ಟಡ, ಹಾದಿ ಬೀದಿ, ಓಣಿ, ಊರು-ಕೇರಿಗಳ ಹೆಸರುಗಳನ್ನು ರಾಜಕೀಯ ಸ್ವಾರ್ಥಕ್ಕೆ ಬದಲಾಯಿಸಿದಿರಿ. ಜಾತ್ಯತೀತ
ಎನ್ನುತ್ತಲೇ ಜಾತಿಯನ್ನು ಬಲಗೊಳಿಸಿದಿರಿ. ಅವರಿವರನ್ನು ಓಲೈಸುತ್ತಾ ಯಾರ್ಯಾರನ್ನೋ ಬಲಿಕೊಟ್ಟಿರಿ. ಹಿಂದೂ ರಾಜ
ಮಹಾರಾಜರನ್ನು ನಿರ್ಲಕ್ಷ್ಯವಾಗಿ ಚಿತ್ರಿಸಿದಿರಿ.
ನಿರ್ಲಜ್ಜೆಯಿಂದ ಅಪಮೌಲ್ಯಗೊಳಿಸಿದಿರಿ. ಇತಿಹಾಸವನ್ನು ನಿಮಗೆ ಬೇಕಾದಂತೆ ತಿರುಚಿ ಬರೆಸಿದಿರಿ. ದೇಶವ್ಯಾಪಿ ನಿಮ್ಮ ಪಟಾಲಂ ಅನ್ನು ಕಾಂಗ್ರೆಸ್ ಗಿಡದಂತೆ ಬೆಳೆಸಿದಿರಿ. ಹಸುವಿನ ಹಾಲನ್ನು ಕುಡಿಯುತ್ತ ಗೋವನ್ನು ಎಳೆದಾಡಿದಿರಿ. ಕಡಿಯಲು ಪ್ರೇರಣೆ ನೀಡಿದಿರಿ. ಗೋವನ್ನು ಇಟ್ಟುಕೊಂಡೇ ರಾಜಕೀಯ ಮಾಡಿದಿರಿ. ಹಗರಣಗಳ ಮೇಲೆ ಹಗರಣಗಳನ್ನು ಸೃಷ್ಟಿಸಿದಿರಿ.
ಅವುಗಳ ಮೇಲೆಯೇ ಮಲಗಿ ಸುಖಿಸಿದಿರಿ. ಬೀದಿಯಲ್ಲಿ ನಿಂತು ಪ್ರತಿಭಟಿಸುತ್ತ ಗೋವನ್ನು ತಿಂದು ತೇಗಿದಿರಿ. ಅಸಹಿಷ್ಣುತೆಯನ್ನು ಅಭಿವ್ಯಕ್ತಿಸುತ್ತ ಪ್ರಜಾಪ್ರಭುತ್ವದ ಮಾನವನ್ನು ಹರಾಜಿಗಿಟ್ಟಿರಿ. ಈ ನೆಲದ ಪರಂಪರೆಯನ್ನು ಸಂಸ್ಕೃತಿಯನ್ನು ಮೌಲ್ಯಹೀನ ಗೊಳಿಸಿದಿರಿ.
ಬುಡಕ್ಕೇ ಬೆಂಕಿ ಬಿದ್ದಾಗ ಕೈಲಾಗದವ ಮೈ ಪರಚಿಕೊಂಡ ಎಂಬಂತೆ ಓಡಿಹೋಗಿ ಹೊಡೆದುಕೊಂಡ ಪ್ರಶಸ್ತಿಗಳನ್ನು ವಾಪಸ್ ಮಾಡಿ ಪ್ರಶಸ್ತಿ ಪುರಸ್ಕಾರಗಳ ಘನತೆ ಯನ್ನು ಕೆಡಿಸಿದಿರಿ. ಸರಕಾರದಿಂದ ಬೇಕುಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ಪಡೆದು ಸರಕಾರದ ವಿರುದ್ಧವೇ ಸೆಟೆದು ಪ್ರತಿಭಟನೆಗೆ ನಿಂತಿರಿ. ಜಾತಿ ಜಾತಿಯನ್ನು ಎತ್ತಿಕಟ್ಟಿ ಒಡೆದಿರಿ, ತನ್ಮೂಲಕ ಒಡಕನ್ನು ಸೃಷ್ಟಿಸಿದಿರಿ.
ಇತಿಹಾಸವನ್ನು ವಾದ-ಚರ್ಚೆ-ಸಾಕ್ಷಿಗೆ ಬೇಕಾದಂತೆ ಬಳಸಿಕೊಂಡಿರಿ. ಚರಿತ್ರೆಯ ಮತ್ತು ವರ್ತಮಾನದ ಸಂದರ್ಭ ಸನ್ನಿವೇಶ ಗಳನ್ನು ಅನುಕೂಲಕ್ಕೆ ತಕ್ಕಂತೆ ಒದಗಿಸಿಕೊಂಡಿರಿ. ಪರಿಸ್ಥಿತಿಯ ಲಾಭವನ್ನು ಪಡೆಯಲು ಕೃತಕ ಸನ್ನಿವೇಶಗಳನ್ನು ಹುಟ್ಟಿಸಿ ಕೊಂಡಿರಿ. ಯಾರ್ಯಾರನ್ನೋ ಛೂ ಬಿಟ್ಟು ಬ್ಲಂಡರ್ಗಳನ್ನು ಉತ್ಪತ್ತಿ ಮಾಡಿದಿರಿ. ಸಹಿಷ್ಣುತೆ ತುಂಬಿದ ನೆಲದಲ್ಲಿ ಅಸಹಿಷ್ಣುತೆ ಯನ್ನು ದೇಶವ್ಯಾಪಿ ಹುಯಿಲೆಬ್ಬಿಸಿದಿರಿ. ಘರ್ ವಾಪಸೀ ಕೈಗೊಂಡಿರಿ. ಅನವರತ ಕ್ಷೋಭೆಯನ್ನು ಹೊತ್ತಿಸುವಲ್ಲಿ ನಿರತರಾದಿರಿ. ರಸ್ತೆಗಿಳಿದು ಬೆಂಕಿ ಹಚ್ಚಿದಿರಿ.
ಸಾರ್ವಜನಿಕ ಆಸ್ತಿಗಳನ್ನು ನಾಶಮಾಡಿದಿರಿ. ಜನಸಾಮಾನ್ಯರ ಬದುಕಿಗೆ ಅಡ್ಡಿಯಾದಿರಿ. ಹಿಂದೂ ದೇವದೇವತೆಗಳನ್ನು ನಗ್ನ
ಗೊಳಿಸಿ ವಿಕೃತವಾಗಿ ಚಿತ್ರಿಸಿದಿರಿ. ಶಾಂತಿಯ ಹೆಸರಲ್ಲಿ ಅಶಾಂತಿಯನ್ನು ತಂದಿಟ್ಟಿರಿ. ಭಯೋತ್ಪಾದಕರು, ಅಪರಾಧಿಗಳ ಪರ
ನಿಂತು ವಕಾಲತ್ತು ವಹಿಸಿದಿರಿ. ವಿರೋಧಕ್ಕೆ ಅಂತಿರುವ ಸಾಂವಿಧಾನಿಕ ನೆಲೆಗಳ ಅಸ್ಮಿತೆಯನ್ನೇ ಹುಸಿಯಾಗಿಸಿದಿರಿ. ಹಿಂದುತ್ವದ
ಬಗ್ಗೆ ಮಾತಾಡಿದರೆ ಕೋಮುವಾದ ಎಂದಿರಿ. ಶಂಕರ, ಮಧ್ವ, ರಾಮಾನುಜರ ಸಿದ್ಧಾಂತಗಳನ್ನು ಪ್ರಶ್ನಿಸುತ್ತ ಉಢಾಪೆ ಮಾಡಿ
ದಿರಿ. ಕಾಂಗ್ರೆಸ್ಸಿನ ಕಾರ್ಯವನ್ನು ಬೆಂಬಲಿಸಿದಿರಿ.
ಉದಾರವಾದ, ಸಮಾಜವಾದ, ಸೆಕ್ಯುಲರ್ ವಾದಗಳಿಂದ ರಾಷ್ಟ್ರೀಯತೆಗೆ ಮಾರಕವಾಗುತ್ತಲೇ ರಾಷ್ಟ್ರವ್ಯಾಪಿ ಎಡಪಂಥದ
ಡೇರೆಗಳನ್ನು ಕಟ್ಟಿದಿರಿ. ಬೇಕು ಬೇಕಾದವರಿಗೆ ಪ್ರಶಸ್ತಿ ಪದವಿ ಪುರಸ್ಕಾರವನ್ನು ಕೊಡುತ್ತಲೇ ಓಟ್ ಬ್ಯಾಂಕ್ ರಾಜಕೀಯವನ್ನು
ಇನ್ನಿಲ್ಲದಂತೆ ಬೆಳೆಸಿದಿರಿ. ಎಷ್ಟು ಸಾಧ್ಯವೋ ಅಷ್ಟೂ ನೆಲೆಯಲ್ಲಿ ದೇಶವನ್ನು ಸ್ವಾರ್ಥಕ್ಕೆ ಬಳಸಿಕೊಂಡಿರಿ. ಸರಕಾರದ ಹಣದಲ್ಲಿ
ಮೋಜು ಮಸ್ತಿ ಮಾಡಿ ದೇಶವಾಸಿಗಳ ಕಣ್ಣಿಗೆ ಮಣ್ಣೆರಚಿದಿರಿ.
ಅವರ ದುಡ್ಡನ್ನು ಲೂಟಿ ಮಾಡಿದಿರಿ. ಮಕ್ಕಳು ಮೊಮ್ಮಕ್ಕಳು ಮರಿಮಕ್ಕಳಿಗೆ ಆಗುವಷ್ಟು ಸಂಪತ್ತನ್ನು ಲೂಟಿ ಹೊಡೆದು
ಸಂಗ್ರಹಿಸಿದಿರಿ. ಮುಸ್ಲಿಂರಿಗೆ ನೋವಾಗುತ್ತದೆ ಎಂದು ಹಿಂದೂವಾಗಿದ್ದೇ ಹಿಂದೂಗಳನ್ನು ವಿರೋಧಿಸಿದಿರಿ. ನಿಮ್ಮ ಅನುಕಂಪ, ದಯೆ, ವಾತ್ಸಲ್ಯ, ಕರುಣೆಯೆಲ್ಲವೂ ಕಾಲದೇಶವನ್ನು ಮೀರದೆಯೇ ಸಂಕುಚಿತವಾಗೇ ಈ ದೇಶದಲ್ಲಿ ಬೇರೂರಿಸಿ ಮೆರೆಯಿಸಿದಿರಿ. ಅದನ್ನು ಈಗಲೂ ಹಾಗೆಯೇ ಮುಂದುವರೆಸುತ್ತಾ ಮೊಂಡು ಪ್ರದರ್ಶನ ಮಾಡುತ್ತಿದ್ದಿರಿ.
ಹೆಸರೇ ಹೇಳುವಂತೆ ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆಯಾದ, ಹಲವು ನೂರಾರು ಸನ್ನಿವೇಶಗಳಲ್ಲಿ, ವಿಪತ್ತಿನ ಸಂದ
ರ್ಭಗಳಲ್ಲಿ ತನುಮನಧನದ ರೂಪದಲ್ಲಿ ಸಕ್ರಿಯವಾಗಿ ಭಾಗಿಯಾದ, ರಾಷ್ಟ್ರೀಯ ಭದ್ರತೆಯ ಊರುಗೋಲಾಗಿ ನಿಂತುಕೊಂಡಿ ರುವ ಆರೆಸ್ಸೆಸ್ಸನ್ನು ಕೋಮುವಾದಿ ಸಂಘಟನೆಯೆಂದಿರಿ. ಆರೆಸ್ಸೆಸ್ಸಿಂದ ಅದೇನೂ ದೇಶದ್ರೋಹವಾಗಿದೆಯೋ ಆ ದೇವನೂರೇ ಹೇಳಬೇಕು. ಅ ರಾಷ್ಟ್ರೀಯ ಭದ್ರತೆಗೆ ಸವಾಲೆಂಬಂತೆ ನಡೆದುಕೊಂಡಿರಿ. ಅದರ ಆಳ ಅಗಲದ ಬಗ್ಗೆ ಅಪಪ್ರಚಾರ ಮಾಡಿದಿರಿ.
ಮನುಸ್ಮೃತಿಯನ್ನು ಅಸಡ್ಡೆ ಮಾಡಿ ಸುಟ್ಟಿರಿ. ಯಾವುದೋ ಜನ್ಮದ ವೈರಿಯೇನೋ ಎಂಬಂತೆ ಬ್ರಾಹ್ಮಣರನ್ನು ನಿಂದಿಸಿದಿರಿ. ಸಮಾಜ ಘಾತುಕ ಶಕ್ತಿಗಳನ್ನು ಪ್ರಶ್ನಿಸಿದೆ ಅವರನ್ನು ವಿರೋಽಸಿದವರನ್ನು ಬೆಂಬಲಿಸಿದಿರಿ. ಹಿಂದೂಗಳನ್ನು ವಿರೋಧಿಸಿದಿರೇ ವಿನಾ ಭಯೋತ್ಪಾದನೆಯನ್ನೂ, ದೇಶದಲ್ಲಿ ಆಗುತ್ತಿರುವ ಭಯೋತ್ಪಾದನೆಗೆ ಮೂಲವನ್ನು ಹುಡುಕುವುದನ್ನು ಉದ್ದೇಶ ಪೂರ್ವಕವಾಗಿ ಮರೆತಿರಿ.
ಈಗೀಗಲಂತೂ ನಿಮ್ಮ ವಿರೋಧ, ಪ್ರತಿಭಟನೆಗಳೆಲ್ಲವೂ ಪ್ರಜಾಪ್ರಭುತ್ವದ ಅಣಕಾಗಿ ಕಾಣತೊಡಗಿದೆ. ದೊಂಬಿಗಳಾಗಿ ಬೆಳೆ
ಯುತ್ತಿವೆ. ವಿಕೃತಿಗಳಾಗಿ ಮೆರೆಯುತ್ತಿವೆ. ಕೃಷಿ ಮಸೂದೆಯ ವಿರೋಧದ ಒಟ್ಟೂ ನಡೆಯೇ ದೇಶದ್ರೋಹದ ಪರಮಾವಧಿಯಾಗಿ ಕಂಡಿದ್ದು ಸುಳ್ಳಲ್ಲವೇ ಹೇಳಿ? ಸಂವಿಧಾನವನ್ನೂ ಅಂಬೇಡ್ಕರರನ್ನೂ ನಿಮಗೊದಗುವಂತೆ ನೀವು ಬಳಸಿಕೊಂಡಿದ್ದಕ್ಕಂತೂ ಎಯೇ ಇಲ್ಲವೇನೋ! ಮೋದಿ ಸರಕಾರ ಏನೂ ಮಾಡಿದರೂ ಈ ಹಿನ್ನೆಲೆಯಲ್ಲಿಯೇ ವಿರೋಧಿಸುವುದನ್ನು ನಿತ್ಯ ಕಾಯಕವಾಗಿ ಮಾಡಿಕೊಂಡ ನೀವು ಅಂತಾರಾಷ್ಟ್ರೀಯ ನೀತಿಗಳನ್ನು ನಿಮಗೆ ಬೇಕಾದಂತೆ ಮಾಡಬೇಕೆಂದು ಆಗ್ರಹಿಸುತ್ತಾ ಬಂದಿರಿ. ಕಾಶ್ಮೀರ ತಹಬಂದಿಗೆ ಬಂದದ್ದು ನಿಮಗಿಷ್ಟವಾಗಲಿಲ್ಲ. ಅಗ್ನಿಪಥ ನಿಮಗಾಗಲೇ ಇಲ್ಲ.
ಕ್ಷೋಭೆಯನ್ನು ಉದ್ದೇಶಪೂರಕವಾಗಿ ಹೊತ್ತಿಸಿದಿರಿ. ಸತ್ಯದ ಮಾತನ್ನು ಬೆಂಬಲಿಸಿದ ವ್ಯಕ್ತಿಯನ್ನು ಕೊಂದದ್ದರ ವಿರುದ್ಧ
ನಿಮ್ಮ ದನಿ ಏಳಲೇ ಇಲ್ಲ! ಅವರ ಮತಗ್ರಂಥ, ಪ್ರವಾದಿಯ ಬಗ್ಗೆ ಮಾತಾಡಿದಾಗ ಧರ್ಮನಿಂದನೆಯೆಂದು ಬೊಬ್ಬಿಡುವ
ನಿಮಗೆ ಹಿಂದೂ ದೇವದೇವತೆಗಳನ್ನು ಪ್ರಶ್ನಿಸಿ ಅವಮಾನಿಸಿ ವಿಕೃತವಾಗಿ ನಡೆದುಕೊಂಡಾಗ ನೀವು ನರಸತ್ತವರಾದಿರಿ! ನಿಮಗೆ ಬೇಕಾದಂತೆ ನ್ಯಾಯಾಲಯಗಳು ತೀರ್ಪನ್ನು ಕೊಡ ಬೇಕು. ನಿಮಗೆ ಬೇಕಾದಂತೆ ಸರಕಾರ ನಡೆದುಕೊಳ್ಳಬೇಕು.
ಇಲ್ಲದಿರೆ ನ್ಯಾಯಾಂಗದ ವಿರುದ್ಧವೇ ಯುದ್ಧಕ್ಕೆ ನಿಲ್ಲುವ, ಸರಕಾರದ ವಿರುದ್ಧವೇ ಪ್ರತಿಭಟಿಸುವ ನಿಮಗೆ ರಾಷ್ಟ್ರೀಯತೆಯ
ಬಗ್ಗೆಯಾಗಲೀ, ಯೋಗಿಯಂಥ ಮೇರು ವ್ಯಕ್ತಿತ್ವದ ಮೋದಿಯನ್ನು ಪ್ರಶ್ನಿಸುವುದಕ್ಕೆ ನೈತಿಕತೆ ಇದೆಯೇ ಎಂದು ಅನಿಸುತ್ತದೆಯೇ? ಆಫ್ ಕೋರ್ಸ್ ಅನಿಸಬೇಕಿತ್ತು. ಉಹುಂ..ಅನಿಸಲೇ ಇಲ್ಲ. ಅಷ್ಟಕ್ಕೂ ಇಲ್ಲಿಯವರೆಗೆ ಆದ ಅನಾಹುತಗಳಾ ಗಲೀ, ಘಟನೆ ಗಳಿಗಾಗಲೀ ಏನು ಕಾರಣ, ಯಾವುದು ಕಾರಣಎಂಬುದನ್ನು ಅವಲೋಕಿಸಿದರೆ ಅರಾಷ್ಟ್ರೀಯ ಚಿಂತನೆಗಳ ಮಹಾಪೂರವೇ ಕಾಣುತ್ತದೆ.
ಶ್ರೀಮನ್ ಮಹಾಶಯರೇ, ಮೋದಿಯಾಗಲೀ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವಾಗಲೀ ಪ್ರಶ್ನಾತೀತವಲ್ಲ ಎಂಬುದನ್ನೂ ಅರಿಯಬೇಕಿದೆ. ಹಾಗಂತ ಪ್ರಶ್ನಿಸುವುದಕ್ಕೂ ಪ್ರಜಾಪ್ರಭುತ್ವದ್ದೇ ಆದ ಮಾರ್ಗವಿದೆಯಲ್ಲ. ಎಲ್ಲದಕ್ಕೂ ವಿರೋಧವೆಂಬುದು ಚೀಪಾಗಿ ಬಿಡುತ್ತದೆ. ಅಽಕಾರವನ್ನೇ ನೀವು ಚಲಾಯಿಸಬಾರದು ಎಂದರೆ ಮೂರ್ಖತನವಲ್ಲವೆ?