Wednesday, 11th December 2024

ಸಣ್ಣ ಪುಟ್ಟ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಇತ್ಯರ್ಥ ಪಡಿಸಿಕೋಳ್ಳಿ

ಹರಪನಹಳ್ಳಿ : ನ್ಯಾಯಾಲಯದ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಣ್ಣ ಪುಟ್ಟ ವಾಜ್ಯ ಪ್ರಕರಣಗಳನ್ನು ರಾಷ್ಟಿಯ ಲೋಕ ಅದಾಲತ್. ಆಗಸ್ಟ್ ೧೩ ರಂದು ನಡೆಯಲಿದ್ದು, ಕಕ್ಷಿದಾರರು ನ್ಯಾಯಾವಾದಿಗಳ ಸಮ್ಮುಖದಲ್ಲಾಗಲಿ ಅಥಾವ ನೇರವಾಗಿ ಉಭಯ ನ್ಯಾಯಾಲಯಕ್ಕೆ ಹಾಜರಾಗಿ ನಿಮ್ಮ ಪ್ರಕರಣಗಳನ್ನು ಇತ್ಯಾರ್ಥ ಪಡಿಸಿ ಕೋಳ್ಳಬಹುದು ಎಂದು ಹಿರಿಯ ನ್ಯಾಯಾ ಧೀಶೆ ಎಂ.ಭಾರತಿ ಹೇಳಿದರು

ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಆವರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘದಿ0ದ ಆಯೋಜಿಸಲಾಗಿದ್ದ ಉಭಯದ ನ್ಯಾಯಾಧೀಶರು ರಾಷ್ಟ್ರೀಯ ಲೋಕ ಅದಾಲತ್ ನ ಕಾರ್ಯಕ್ರಮದಲ್ಲಿ ಸಸಿಗೆ ನೀರು ಏರೆಯುವ ಮೂಲಕ ಉಭಯ ನ್ಯಾಯಾಲಯದ ನ್ಯಾಯಾಧೀಶರುಗಳು ಮಾತನಾಡಿದರು,

ಕಕ್ಷಿದಾರ/ಸಾರ್ವಜನಿಕರು ಆಗಸ್ಟ್ ೧೩ ರಂದು ನಡೆಯಲಿರುವ ‘ರಾಷ್ಟ್ರೀಯ ಲೋಕ ಅದಾಲತ್’ನ ವ್ಯಾಪ್ತಿಯಲ್ಲಿ ಬರುವ ಚೆಕ್ಕು ಅಮಾನದ ಪ್ರಕರಣ, ಬ್ಯಾಂಕ್ ವಸೂಲಾತಿ, ಮೋಟಾರು ಅಪಘಾತ, ಭೂಸ್ವಾಧೀನ , ಸಿವಿಲ್, ಹಾಗೂ ಕ್ರಿಮಿನಲ್ ಪ್ರಕಣಗಳನ್ನು ರಾಜೀ ಸಂದಾನದ ಮೂಲಕ ಇತ್ಯಾರ್ಥ ಪಡಿಸಿಕೋಳ್ಳಿ ಎಂದು ಸಾರ್ವಜನಿಕ ಕಕ್ಷಿದಾರ ರಿಗೆ ಸೂಚಿಸಿದರು.

ಕಕ್ಷಿದಾರರು ರಾಜಿ ಸಂದಾನದಿAದ ನೆಮ್ಮದಿಯ ಜೀವನ ಮಾಡಲು ಸಾಧ್ಯ ಉದಾ. ಸಿವಿಲ್ ಪ್ರಕರಣದ ಯಾವುದೋ ಒಂದು ಪ್ರಕರಣ ಡಿಕ್ರಿಯಾಗಿ ಜಡ್ಜ್ ಮೆಂಟ್ ಆದರೆ ಇಬ್ಬರು ಕಕ್ಷಿದಾರರ ನಡುವೆ ಒಬ್ಬರ ಪರವಾದರೆ ಇನ್ನೊಬ್ಬರ ಏನು ಆಗುವದಿಲ್ಲ ಆದೇ ರೀತಿ ಕಕ್ಷಿದಾರರು ಪರಸ್ಪರ ಒಪ್ಪಿಗೆಯಿಂದ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಂಡರೆ ಇಬ್ಬರಿಗೂ ಸಮಾನ ಪಾಲು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಎಂದು ಕಕ್ಷಿದಾರ ಸಾರ್ವಜನಿಕರಿಗೆ ತಿಳಿ ಹೇಳಿದರು

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಫಕ್ಕಿರವ್ವ ಕೆಳಗೇರಿ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶ್ ಗೌಡ್ರು, ವಕೀಲರ ಸಂಘದ ಕಾರ್ಯದರ್ಶಿ ಎಸ್.ಜಿ.ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಎಂ.ನಾಗೇAದ್ರಪ್ಪ,ಖಜಾAಚಿ ಹುಲಿಯಪ್ಪ, ವಕೀಲರಾದ ಎಂ.ಮೃತAಜಯ್ಯ, ಬಿ.ಗೋಣಿಬಸಪ್ಪ, ಜೆ.ಸೀಮಾ, ಬಂಡ್ರಿ ಆನಂದ ,ರೇವಣಸಿದ್ದಪ್ಪ, ಕೆ.ಸಣ್ಣ ನಿಂಗನಗೌಡ, ಬಿ.ಸಿದ್ದೇಶ್, ನಂದೀಶ್ ನಾಯ್ಕ,ಗೀರಿಶ್ ಗೌಡ,ಸಿ.ಹನುಮಂತಪ್ಪ, ಗುಡದಯ್ಯ,ಬಿ. ತಿಪ್ಪೇಶ್,ಕೆ.ಸಿದ್ದೇಶ್, ಕೊಟ್ರೇಶ್ , ಬಸವರಾಜ್ ,ಮತ್ತು ಇತರರು ಇದ್ದರು.