Saturday, 23rd November 2024

ಭಯೋತ್ಪಾದನೆಯಲ್ಲಿ ವಿದ್ಯಾವಂತರೇ ಹೆಚ್ಚು !

ವೀಕೆಂಡ್ ವಿತ್ ಮೋಹನ್

camohanbn@gmail.com

ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚಾಗಿ ವಿದ್ಯಾವಂತ ಯುವಕರನ್ನೇ ಆಕರ್ಷಿಸುತ್ತಿದೆ. ಕಟ್ಟರ್ ಮೂಲಭೂತವಾದಿ ವಿಷಯಗಳ ಆಧಾರದ ಮೇಲೆ ನಡೆಯುತ್ತಿರುವ ಒಂದು ಸಂಘಟಿತ ಕಾರ್ಯವೆಂದರೆ ಭಯೋತ್ಪಾದನೆ.

ಐಸಿಸ್ ನಂತಹ ಘೋರ ಉಗ್ರ ಸಂಘಟನೆಯನ್ನು ಸೇರುತ್ತಿರುವ ಬಹುತೇಕ ಯುವಕ ರೆಲ್ಲರೂ ಉನ್ನತ ವ್ಯಾಸಾಂಗ ಮಾಡಿದವರು. ಅಮೆರಿಕ, ಲಂಡನ್, ಜರ್ಮನಿ, ಆಫ್ರಿಕಾ, ಭಾರತದ ಕೇರಳ (ಅತೀ ಹೆಚ್ಚು ಸಾಕ್ಷರತೆ ಹೊಂದಿರುವ ರಾಜ್ಯ) ದೇಶಗಳಿಂದ ಹೆಚ್ಚಿನ ಯುವಕರು ಐಸಿಸ್ ಸೇರಿದ್ದಾರೆ. ಇರಾಕ್ ಹಾಗೂ ಸಿರಿಯಾ ದೇಶಗಳಲ್ಲಿ ತನ್ನ ನೆಲೆ ಹೊಂದಿರುವ ಐಸಿಸ್ ಸಂಘಟನೆಯಲ್ಲಿ ಅಲ್ಲಿನ ಸ್ಥಳೀಯರಿರುವುದು ಬಹಳ ವಿರಳ. ಬಹುತೇಕ ವಿದ್ಯಾವಂತ ಯುವಕರು ಇತರ ದೇಶಗಳಿಂದ ಬಂದು ಉಗ್ರ ಸಂಘಟನೆಯಲ್ಲಿ ತೊಡಗಿದ್ದಾರೆ.

ಜಗತ್ತಿಗೆ ಉಗ್ರವಾದವನ್ನು ಆಳವಾಗಿ ಪಸರಿಸಿದ ಒಸಾಮಾ ಬಿನ್ ಲಾಡೆನ್ ಒಬ್ಬ ಸಿವಿಲ್ ಎಂಜಿನಿಯರ್ ಪದವೀಧರ. ಈತ ಬಿಲಿಯನ್ ಗಟ್ಟಲೆ ಹಣವನ್ನು ಸೌದಿ ಅರೇಬಿಯಾ ದಲ್ಲಿ ಕಟ್ಟಡ ಕಾಮಗಾರಿಯ ವ್ಯವಹಾರದಲ್ಲಿ ಗಳಿಸಿದ್ದ. ಕೆಲವು ವರದಿಗಳ ಪ್ರಕಾರ ಈತ ಒಬ್ಬ ಮ್ಯಾನೇಜ್‌ಮೆಂಟ ಪದವೀಧರನೂ ಆಗಿದ್ದನಂತೆ. ಇಷ್ಟೊಂದು ಒಳ್ಳೆಯ ಕುಟುಂಬ ದಿಂದ ಬಂದಂತಹ ಲಾಡೆನ್ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರನಾಗಿ ಬೆಳೆದಿದ್ದ. ಪಾಕಿಸ್ತಾನ ಲಾಡೆನ್ ಪರವಾಗಿ ಆತ ಸಾಯುವವರೆಗೂ ನಿಂತಿತ್ತು.

ಅಮೆರಿಕವೇ ಬೆಳೆಸಿದ ಮುಸ್ಲಿಂ ನಾಯಕನೊಬ್ಬ ಜಗತ್ತಿನ ಮೋಸ್ಟ್ ವಾಂಟೆಡ್ ಉಗ್ರಗಾಮಿಯಾಗಿದ್ದ. ಕೊನೆಗೆ ಅಮೆರಿಕ ವಿರು ದ್ಧವೇ ತಿರುಗಿ ಬಿದ್ದಾಗ, ಲಾಡೆನ್ ಅಲ್ ಖೈದಾ ಎಂಬ ಉಗ್ರ ಸಂಘಟನೆಯನ್ನು ಕಟ್ಟಿದ. ಈ ಸಂಘಟನೆಯ ಮೂಲಕ ಜಗತ್ತಿನಾ ದ್ಯಂತ ಹಲವಾರು ವಿದ್ಯಾವಂತ ಮುಸ್ಲಿಂ ಯುವಕರನ್ನು ತನ್ನೆಡೆಗೆ ಸೆಳೆದುಕೊಂಡ. ಮೂಲತಃ ಎಂಜಿನಿಯರ್ ಲಾಡೆನ್, ಸ್ವತಃ ತಾನೇ ಬಾಂಬುಗಳನ್ನು ತಯಾರಿಸುವ ಕೆಲಸ ಮಾಡಿದ.

ಜಗತ್ತಿನ ಮೂಲೆ ಮೂಲೆಗಳಲ್ಲಿ ಉಗ್ರ ಕೃತ್ಯಗಳನ್ನು ಮಾಡಿಸಿದ, ನ್ಯೂಯಾರ್ಕ್ ನಗರದ ಅವಳಿ ಕಟ್ಟಡಗಳ ಮೇಲೆ ವಿಮಾನಗಳ
ದಾಳಿ ಮಾಡಿಸುವ ಮೂಲಕ ತನ್ನ ಅಟ್ಟಹಾಸ ಮೆರೆದ. ಸೆಪ್ಟೆಂಬರ್ 11, 2000ನೇ ಇಸವಿಯಲ್ಲಿ ನಡೆದ ಈ ದಾಳಿಯ ಪ್ರಮುಖ ರೂವಾರಿಯಾಗಿದ್ದ ಅಲ್ ಖೈದಾ ಉಗ್ರ ಸಂಘಟನೆಯ ಸದಸ್ಯ ಖಾಲಿದ್ ಶೇಕ್ ಮೊಹಮ್ಮದ್ ಮೂಲತಃ ಅಮೆರಿಕದ ಉತ್ತರ ಕ್ಯಾರಿಲೋನ ರಾಜ್ಯದ ವಿಶ್ವವಿದ್ಯಾಲಯದಲ್ಲಿ 1986ರಲ್ಲಿ ಉನ್ನತ ಮಟ್ಟದ ಪದವಿ ಪಡೆದಿದ್ದ. ಇಷ್ಟು ದೊಡ್ಡ ಪದವಿ ಪಡೆದವ ಪಾಕಿಸ್ತಾನಕ್ಕೆ ಹೋಗಿ ಒಸಾಮಾ ಬಿನ್ ಲಾಡೆನ್ ಜತೆಗೆ ಕೈ ಜೋಡಿಸಿದ್ದ.

ತನ್ನ ಪದವಿಯನ್ನು ಒಳ್ಳೆಯ ಕೆಲಸಕ್ಕೆ ಬಳಸದ ಈತ ಸಾವಿರಾರು ಜನರ ಮಾರಣ ಹೋಮಕ್ಕೆ ಕಾರಣನಾಗಿದ್ದು ಮಾತ್ರ ದುರ ದೃಷ್ಟಕರ. ನಾವು ಸಾಮಾನ್ಯವಾಗಿ ಅವಿದ್ಯಾವಂತನೊಬ್ಬ ಮಾತ್ರ ಇಂತಹ ಕೆಲಸ ಮಾಡಬಲ್ಲನೆಂದು  ಅಂದು ಕೊಂಡಿರುತ್ತೇವೆ. ಆದರೆ ಮುಸಲ್ಮಾನ್ ಭಯೋತ್ಪಾದಕ ಸಂಘಟನೆಯಲ್ಲಿ ಖಾಲಿದ್ ಶೇಕ್ ಮೊಹಮ್ಮದ್ ತರಹದ ನೂರಾರು ಜನರು ಸಿಗುತ್ತಾರೆ.

ಸೌದಿ ಅರೇಬಿಯಾ ನೆನ್ನೆ ಮೊನ್ನೆಯವರೆಗೂ ಕಟ್ಟರ್ ಮುಸಲ್ಮಾನ್ ಸಂಪ್ರದಾಯಗಳನ್ನು ತನ್ನ ಪ್ರಜೆಗಳ ಮೇಲೆ ಹೇರಿತ್ತು. ಹೆಂಗಸರು ಬುರ್ಖಾ ತೆಗೆದು ರಸ್ತೆಯಲ್ಲಿ ಓಡಾಡುವಂತಿರಲಿಲ್ಲ, ಕಾರು ಓಡಿಸುವಂತಿರಲಿಲ್ಲ. ಆದರೆ ಕೆಲವೊಂದು ಸಂಪ್ರದಾಯ ಗಳನ್ನು ಮೊಟಕುಗೊಳಿಸುವ ಮೂಲಕ ತನ್ನ ಜನರಿಗೆ ತುಸು ಸ್ವಾತಂತ್ರ್ಯ ನೀಡಿದೆ. ಎಪ್ಪತ್ತರ ದಶಕದವರೆಗೂ ಸೌದಿ ಅರೇಬಿಯಾ ಒಂದು ಹಳ್ಳಿಯಾಗಿತ್ತು, ಯಾವಾಗ ಅಲ್ಲಿ ತೈಲದ ನಿಕ್ಷೇಪಗಳು ಕಂಡವೋ ಅಂದಿನಿಂದ ಬಿಲಿಯನ್ ಗಟ್ಟಲೆ ಹಣ ಸಂಪಾದಿಸಿತು.

ಇಷ್ಟೊಂದು ಹಣ ಸಂಪಾದಿಸಿ ಜಗತ್ತಿಗೆ ದೊಡ್ಡವರಾದರೂ, ತನ್ನ ನೆಲದಲ್ಲಿ ಹಲವು ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಳೆಸಿತು. ಇದಕ್ಕೆ ಮೂಲ ಕಾರಣ ಸೌದಿಯಲ್ಲಿರುವ ಹಲವು ವಿದ್ಯಾವಂತರು ಹಳೆಯ ಕಟ್ಟರ್ ಮುಸ್ಲಿಂ ಸಂಪ್ರದಾಯವನ್ನು ಬೆಂಬಲಿಸಿದ್ದು. ಇಂದಿಗೂ ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಪುರುಷ ಪ್ರಧಾನವಾಗಿವೆ. ಭಾರತದಲ್ಲಿ ತ್ರಿವಳಿ ತಲಾಕ್ ನಿಷೇದ, ಹಿಜಾಬ್ ನಿಷೇಧ ಹೆಚ್ಚು ವಿರೋಽಸಿದವರು ವಿದ್ಯಾವಂತ ಮುಸಲ್ಮಾನರು.

ಆದರೆ ವಿದ್ಯಾವಂತರಿಗೆ ಯೋಚಿಸುವ ಶಕ್ತಿ ಇದ್ದರೂ ತಮ್ಮ ಬೆಂಬಲ ವ್ಯಕ್ತ ಪಡಿಸುವುದಿಲ್ಲ. ವಿದ್ಯಾವಂತ ಭಯೋತ್ಪಾದನೆಯ ವಿಚಾರದಲ್ಲಿ ಭಾರತದ ಪರಿಸ್ಥಿತಿ ಏನೂ ಕಡಿಮೆಯಿಲ್ಲ. 1993 ರ ಮುಂಬೈ ಸರಣಿ ಸ್ಪೋಟದ ರೂವಾರಿಗಳೆಲ್ಲರೂ ವಿದ್ಯಾ ವಂತರು. ದೂರದ ದುಬೈನಲ್ಲಿ ಕುಳಿತು ಮುಂಬೈನಲ್ಲಿ ಸರಣಿ ಸೋಟ ನಡೆಸಿದ ದಾವೂದ್ ಭಂಟ ಅಬು ಸಲೇಂ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದವನು. ಮುಸಲ್ಮಾನ್ ಯುವಕರ ತಲೆಯಲ್ಲಿ ಬಾಬ್ರಿ ಮಸೀದಿ ಕೆಡವಿದ ವಿಚಾರಗಳನ್ನು ತುಂಬಿ ಮುಂಬೈ ನಗರದಲ್ಲಿ ಸರಣಿ ಸ್ಫೋ ನಡೆಸಲು ಯೋಜನೆ ರೂಪಿಸಿದವನಿವನು.

ಮುಂಬೈ ಸರಣಿ ಸ್ಫೋದ ಮತ್ತೊಬ್ಬ ಪ್ರಮುಖ ಆರೋಪಿ ಯಾಕುಬ್ ಮೆಮೊನ್ ಒಬ್ಬ ಚಾರ್ಟರ್ಡ್ ಅಕೌಂಟೆಂಟ್. ಹಿಂದೂ ದೇವಸ್ಥಾನಗಳ ಮೇಲಾದ ದಾಳಿಯ ಸೇಡನ್ನು ವಿದ್ಯಾವಂತ ಹಿಂದೂವೊಬ್ಬ ಎಂದಿಗೂ ಉಗ್ರ ಚಟುವಟಿಗಳ ಮೂಲಕ, ಜನರನ್ನು ಕೊಂದು ತೀರಿಸಿಕೊಂಡ ಉದಾಹರಣೆಗಳಿಲ್ಲ. ಆದರೆ, ಮುಸಲ್ಮಾನ್ ಉಗ್ರವಾದಿಗಳು ತಾವು ವಿದ್ಯಾವಂತರಾಗಿದ್ದರೂ
ಸಹ ಜನರನ್ನು ಕೊಲ್ಲುವ ಮಟ್ಟಕ್ಕೆ ಸೇಡು ತೀರಿಸಿಕೊಳ್ಳುವ ಯತ್ನ ಮಾಡುತ್ತಿರುತ್ತಾರೆ.

2015ರ ಆಸುಪಾಸಿನಲ್ಲಿ ಒಂದು ಸಂಶೋಧನೆ ಮಾಡಲಾಗಿತ್ತು, ಈ ಸಂಶೋಧನೆಯ ಪ್ರಕಾರ ಐಸಿಸ್ ಉಗ್ರ ತಂಡಕ್ಕೆ ಸೇರುವ ಉಗ್ರಗಾಮಿಗಳಲ್ಲಿ ಶೇ. 69 ಮಂದಿ, ಕಡಿಮೆಯೆಂದರೂ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಬಂದವರು. ಯೂರೋಪಿನ ಹಲವು ರಾಷ್ಟ್ರಗಳಿಂದ ಯುವಕ, ಯುವತಿಯರು ಐಸಿಸ್ ಸೇರಿದ್ದರು. ಇವರ್ಯಾರಿಗೂ ಮನೆಯಲ್ಲಿ ತೊಂದರೆಯಿರಲಿಲ್ಲ. ಉತ್ತಮ ಕುಟುಂಬದಿಂದಲೇ ಬಂದಿದ್ದವರು. ಐಸಿಸ್ ನಿಯಂತ್ರಿತ ಪ್ರದೇಶಗಲ್ಲಿದ್ದ ಹಲವು ಉಗ್ರರನ್ನು ಸಂದರ್ಶನ ನಡೆಸಿದಾಗ ಈ ಸತ್ಯ ಹೊರಬಿದ್ದಿತ್ತು. ಅವರ ಪಾಸ್‌ಪೋರ್ಟ್, ಹುಟ್ಟಿದ ದೇಶ, ಓದಿದ ದೇಶ, ಕೆಲಸ ಮಾಡುತ್ತಿದ್ದ ಸ್ಥಳಗಳು, ಅವರ ವಿದ್ಯಾಭ್ಯಾಸ, ಮದುವೆಯ ವಿವರಗಳು, ಎಲ್ಲವನ್ನೂ ತುಲನೆ ಮಾಡಿ ಸಂಶೋಧನೆಯನ್ನು ನಡೆಸಲಾಗಿತ್ತು.

ಇಷ್ಟೆಲ್ಲ ವಿದ್ಯಾವಂತರಾಗಿರುವವರನ್ನು ತಾವು ಐಸಿಸ್ ನಲ್ಲಿ ಯಾವ ರೀತಿಯಲ್ಲಿ ತೊಡಗಿಸಿಕೊಳ್ಳುತ್ತೀರೆಂದು ಕೇಳಿದರೆ, ಹೆಚ್ಚಿನವರು ಆತ್ಮಾಹುತಿ ಬಾಂಬರ್‌ಗಳಾಗಲು ತಯಾರಾಗಿರುವುದಾಗಿ ಹೇಳಿದ್ದರು. ಕೇವಲ ಪಾಶ್ಚಿಮಾತ್ಯ ರಾಷ್ಟ್ರಗಳ ಮುಸ್ಲಿಂ ಯುವಕರು ಮಾತ್ರವಲ್ಲದೇ ಉತ್ತರ ಆಫ್ರಿಕಾ ಹಾಗೂ ಕೊಲ್ಲಿ ರಾಷ್ಟ್ರಗಳಿಂದ ಬಂದಿದ್ದಂತಹ ಯುವಕರೂ ಉತ್ತಮ ವಿದ್ಯಾಭ್ಯಾಸ ಹೊಂದ್ದಿದವರಾಗಿದ್ದರು.

ಮಧ್ಯ ಪ್ರಾಚ್ಯದಲ್ಲಿನ ಪ್ಯಾಲಿಸ್ತೇನ್ ನಗರಕ್ಕೊಮ್ಮೆ ಹೊಕ್ಕರೆ ಅದೆಷ್ಟು ವಿದ್ಯಾವಂತ ಯುವಕರು ಇಸ್ರೇಲಿನಲ್ಲಿ ದಾಳಿಯನ್ನು ನಡೆಸಲು ಸಿದ್ಧರಿದ್ದರೆಂದು ತಿಳಿಯುತ್ತದೆ. ೧೯೪೮ರಲ್ಲಿ ಇಸ್ರೇಲ್ ಸ್ವತಂತ್ರಗೊಂಡ ನಂತರ ಪ್ಯಾಲಿಸ್ತೇನ್ ಇಸ್ರೇಲಿಗಳ ಕೈ ಸೇರಲಿಲ್ಲ. ಆದರೆ 1967ರಲ್ಲಿ ನಡೆದ ಯುದ್ಧದಲ್ಲಿ ಇಸ್ರೇಲ್ ಪ್ಯಾಲಿಸ್ತೇನಿನ ಮೇಲೆ ಹಿಡಿತ ಸಾಧಿಸಿತ್ತು. ಅಂದಿನಿಂದ ಇಲ್ಲಿಯ ವರೆಗೂ ಇಸ್ರೇಲಿನಲ್ಲಿ ದಾಳಿಗಳನ್ನು ನಡೆಸಲು ಪ್ಯಾಲಿಸ್ತೇನಿಗಳು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇತ್ತ ಇಸ್ರೇಲಿ ಸೈನಿಕರು ಪ್ಯಾಲಿಸ್ತೇನಿ ಉಗ್ರರನ್ನು ಹೊಡೆದುರುಳಿಸಿರುತ್ತಾರೆ.

ಸಂಸತ್ ದಾಳಿಯ ರೂವಾರಿಯಾಗಿದ್ದ ಅಪ್ಜಲ್ ಗುರುವನ್ನು ನೇಣಿಗೆ ಹಾಕಿದ ನಂತರ ಕಾಶ್ಮೀರದಲ್ಲಿ ಹಲವು ವಿದ್ಯಾವಂತ ಯುವಕರನ್ನು ಉಗ್ರ ಸಂಘಟನೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಕಾಶ್ಮೀರದಲ್ಲಿನ ಹಲವು ವಿದ್ಯಾವಂತ ಯುವಕರ ತಲೆಯಲ್ಲಿ ಇಲ್ಲ ಸಲ್ಲದ ಕಟ್ಟುಪಾಡುಗಳನ್ನು ತುಂಬಿ, ಹಳೆಯ ವಿಚಾರಧಾರೆಗಳನ್ನು ಹೇಳಿ ಹೇಳಿ ಉಗ್ರ ಚಟುವಟಿಕೆಗಳಿಗೆ ಬಳಸಿಕೊಳ್ಳ ಲಾಗುತ್ತಿದೆ. ಭಾರತೀಯ ಸೈನಿಕರ ಗುಂಡಿಗೆ ಬಲಿಯಾಗುವ ಹಲವು ಉಗ್ರಗಾಮಿಗಳು ಕಾಶ್ಮೀರದಲ್ಲಿ ಪದವಿ ಪಡೆದವರಾಗಿದ್ದರು. ಅಫ್ಜಲ್ ಗುರು ಒಬ್ಬ ವೈದ್ಯಕೀಯ ವಿಭಾಗದ ವಿದ್ಯಾರ್ಥಿಯಾಗಿದ್ದು ಮೊದಲನೇ ವರ್ಷದ ತರಗತಿಗಳನ್ನು ಪೂರ್ಣಗೊಳಿಸಿದ್ದ.

ಬೆಂಗಳೂರಿನ ಬಸವನಗುಡಿಯಲ್ಲಿ ಸೆರೆ ಸಿಕ್ಕ ಉಗ್ರ, ರಾಮಯ್ಯ ಕಾಲೇಜಿನಲ್ಲಿ ವೈದ್ಯನಾಗಿದ್ದ. ಈತ ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ಸಹಾಯ ಮಾಡುತ್ತಿದ್ದನೆಂಬ ಆತಂಕಕಾರಿ ಅಂಶವು ಬೆಳಕಿಗೆ ಬಂದಿತು. ಐಸಿಸ್ ಸಂಸ್ಥಾಪಕ ಅಲ್ ಬಗ್ದಾದಿ ಇಸ್ಲಾ ಮಿಕ್ ಧರ್ಮದಲ್ಲಿ ಅತ್ಯುನ್ನತ ಪದವಿ ಸಂಪಾದಿಸಿದ್ದ, ಪದವಿಯ ಜತೆಗೆ ಈತ ಬಾಗ್ದಾದ್ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಸಹ ಪಡೆದಿದ್ದ. ಇಸ್ಲಾಮಿನಲ್ಲಿ ಒಂದು ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿದವ ಜಗತ್ತಿನ ಅತ್ಯಂತ ಕ್ರೂರ ಉಗ್ರ ಸಂಘಟನೆಯನ್ನು ಹುಟ್ಟಿ ಹಾಕುತ್ತಾನೆಂದು ಯಾರೂ ಅಂದುಕೊಂಡಿರಲಿಲ್ಲ, ತನ್ನ ಧರ್ಮ ಉಳಿಸುತ್ತೇ ನೆಂದು ಹೇಳಿ ಜಗತ್ತಿನಾದ್ಯಂತ ಇಸ್ಲಾಂ ಧರ್ಮವನ್ನು ಸ್ಥಾಪಿಸುವ ಏಕೈಕ ಉದ್ದೇಶದಿಂದ ಮನುಷ್ಯತ್ವ ಮರೆತು ಸಾವಿರಾರು ಜನರನ್ನು ಕೊಲ್ಲಲು ಉಗ್ರರಿಗೆ ಪ್ರೇರಣೆಯನ್ನು ನೀಡಿದ.

ಸಿರಿಯಾದಲ್ಲಿ ಸುಪ್ರಸಿದ್ಧವಾಗಿದ್ದ ಐತಿಹಾಸಿಕ ಪಲ್ಮೇರಾ ನಗರದ ಹಳೆಯ ಅವಶೇಷಗಳನ್ನು ಸರ್ವನಾಶ ಮಾಡುವ ಮೂಲಕ ಸಾವಿರಾರು ವರ್ಷಗಳ ಇತಿಹಾಸವನ್ನು ಐಸಿಸ್ ಉಗ್ರರು ಅಳಿಸಿ ಹಾಕಿದ್ದರು. ಅಲ್ ಬಗ್ದಾದಿ, ಒಸಾಮಾ ಬಿನ್ ಲಾಡೆನ್‌ನನ್ನು ತನ್ನ ಗುರುವಿನ ರೀತಿಯಲ್ಲಿ ನೋಡುತ್ತಿದ್ದ. ಅವನಿಗಿಂತಲೂ ಅಮಾನುಷವಾಗಿ ಜಗತ್ತಿನಾದ್ಯಂತ್ಯ ಉಗ್ರ ಚಟುವಟಿಕೆಗಳನ್ನು ನಡೆಸುವ
ಸಲುವಾಗಿ ಐಸಿಸ್ ಶುರುಮಾಡಿದ್ದ.