ದಾಸ್ ಕ್ಯಾಪಿಟಲ್
dascapital1205@gmail.com
ಬಾಸ್ ಆದವನು ಎಲ್ಲರಿಗೂ ತಲೆಬಾಗಬೇಕು ಎಂದರ್ಥವೇನಲ್ಲ. ಸೋಲಬೇಕೆಂದೇನಲ್ಲ. ಶರಣಾಗಬೇಕೆಂದಲ್ಲ. ಕಂಡ
ಕಂಡವರ ತಾಳಕ್ಕೆ ಕುಣಿಯಬೇಕೆಂದಲ್ಲ. ಅವನಿಗೂ ಒಂದು ಸ್ಥಾನಮಾನ, ಘನತೆ, ಪದವಿ, ಅಂತಸ್ತು ಇದ್ದೇ ಇದೆ, ಇರುತ್ತದೆ ಕೂಡ.
ಒಂದೇ ರೀತಿಯ ನೀತಿ-ನಿಯಮಗಳನ್ನೊಳಗೊಂಡ ವ್ಯವಸ್ಥೆಬದ್ಧ ಆಡಳಿತ ವನ್ನು ನೀಡುತ್ತಿರುವ ‘ವ್ಯವಸ್ಥೆ’ ಯಲ್ಲಿ ಪರಮಾಧಿ ಕಾರವುಳ್ಳವನೇ ಬಾಸ್ ಆಗಿರುತ್ತಾನೆ. ವಿವಿಧ ಸ್ತರಗಳ ಉದ್ಯೋಗಕ್ಕನುಸಾರವಾಗಿ ವಿವಿಧ ನೆಲೆಯಲ್ಲಿ ಪಂಚಾಯತ್ ಅಧ್ಯಕ್ಷನಿಂದ ರಾಷ್ಟ್ರಾಧ್ಯಕ್ಷರವರೆಗೆ ಬಾಸ್ ಗಳಿರುತ್ತಾರೆ.
ಯಜಮಾನ, ಧರ್ಮದರ್ಶಿ, ಊರ ಮುಖಂಡ, ಗುಂಪಿನ ನಾಯಕ, ಎಚ್ ಓಡಿ, ಸಾಹೇಬ, ಅಧ್ಯಕ್ಷ, ಮುಖ್ಯಸ್ಥ, ಕುಲಪತಿ, ಕುಲಸಚಿವ, ಪ್ರಾಚಾರ್ಯ, ಪ್ರಾಂಶುಪಾಲ, ಮುಖ್ಯಾಧ್ಯಾಪಕ, ಮ್ಯಾನೇಜರ್, ಎಂಡಿ, ಸಕ್ರೇಟರಿ, ಚೇರ್ಮನ್, ಪ್ರಧಾನ ಸಂಪಾದಕ, ಕಾರ್ಯದರ್ಶಿ- ಇತ್ಯಾದಿ ಅಧಿಕಾರ ಯುತ ಸ್ಥಾನಗಳನ್ನು ಬಾಸ್ ಎಂದು ಪರಿಗಣಿಸಲಾಗುತ್ತದೆ. ಯಾವುದೇ ವಲಯಗಳಲ್ಲಿ ಬಾಸ್ ಆಗಲು ಅಪಾರ ಪರಿಶ್ರಮ, ವ್ಯಾವಹಾರಿಕ ಜ್ಞಾನ, ಆಡಳಿತ ನಿರ್ವಹಣಾ ಕೌಶಲ, ಸುಸಂಘಟನೆಯ ಸಾಮರ್ಥ್ಯ, ನಾಯಕತ್ವದ ಗುಣ, ಸಂವಹನ ಕಲೆ, ಮಾನವೀಯತೆ, ಸೂಕ್ಷ್ಮ ಸಂವೇದನೆ, ಹಾಸ್ಯಪ್ರಜ್ಞೆ, ಸಮನ್ವಯತೆ, ಆತ್ಮಸಂಮಾನ, ಅರ್ಥಪೂರ್ಣ ಸ್ವಯಂ ಶಿಸ್ತು, ಸಂಯಮ, ವಿಷಯ ಜ್ಞಾನ, ಭಾಷಾ ಪ್ರಭುತ್ತ್ವ ಇರಬೇಕು.
ಶುದ್ಧಾಂಗ ವ್ಯಕ್ತಿತ್ವದ ಜತೆ ಅದೃಷ್ಟವೂ ಬೇಕು. ಹಾರ್ಡ್ವರ್ಕ್ ಮಾಡುವ ಮನಸ್ಥಿತಿಯ ಜತೆಗೆ ವ್ಯವಸ್ಥೆಗೆ ಕಮಿಟೆಡ್ ಆಗಿರ ಬೇಕು. ನಿಯತ್ತು ಹೊಂದಿರಬೇಕು. ಒಂದಂತೂ ನಿಜ, ಬಾಸ್ ಆದವನಿಗೆ ಅಧಿಕಾರ ಬಲವಿರುತ್ತದೆ. ಸಲಾಂ ಹೊಡೆಯುವವರು ಇದ್ದೇ ಇರುತ್ತಾರೆ. ಚೇಲಾಗಳೂ ಇರುತ್ತಾರೆ. ತಮ್ಮ ಹಾಗೆಯೇ ತಮ್ಮ ಬಾಸ್ಗಳಿರಬೇಕೆಂಬ ದುರುಳ ಮನಸ್ಥಿತಿಯವರೂ ಇರಬೇಕು. ಮೆಹರಬಾನಿಗೆ ಭಟ್ಟಂಗಿಗಳಿರುತ್ತಾರೆ. ಕೊನೆಯ ಪಕ್ಷ ಏನು ದಂಡು ಕಡಿಯದಿದ್ದರೂ ಬಾಸ್ ಆದವನಿಗೆ ಸಂಪಾದನೆಯಿರುತ್ತದೆ. ಲಂಚಾವತಾರಕ್ಕೆಡೆಯಿರುತ್ತದೆ.
ಕಾಲಿಗೆ ಕೈಗೆ ಅಂತ ಜನರಿರುತ್ತಾರೆ. ಈ ಸವಲತ್ತು, ಸೌಲಭ್ಯ, ಹೆಚ್ಚುಗಾರಿಕೆಯೆಂಬುದು ಅಧಿಕಾರದ ಅಮಲನ್ನು ತರುತ್ತದೆ!
ಬದುಕಿನ ಗತಿಯನ್ನು ಬದಲಿಸುತ್ತದೆ! ಅಧಿಕಾರವೂ ಒಂದು ಜಾತಿಯ ಮದವೇ ತಾನೆ? ಅದರಲ್ಲೂ ಬಾಸ್ ಆದವನಿಗೆ ದೈಹಿಕ ಬಲವಿದ್ದರೆ ಮುಗಿದೇಹೋಯ್ತು, ನರಿಬುದ್ಧಿಯಿದ್ದರಂತೂ ಕೇಳುವುದೇ ಬೇಡ. ಹಿತ್ತಾಳೆ ಕಿವಿಯ ಸ್ವಭಾವವಾದರೆ
ಸರ್ವ ಬಣ್ಣವೂ ಮಸಿ ನುಂಗಿದಂತೆ!
ಉತ್ತಮ ಬಾಸ್ಗಳಿರುವಂತೇ ಕೆಟ್ಟ ಬಾಸ್ಗಳೂ ಇರುತ್ತಾರೆ. ಬಾಸ್ ಚಲಾಯಿಸುವ ಅಽಕಾರದ ದರ್ಪವೇ ಬಾಸಿಸಂ. ಈ ಬಾಸಿಸಂ ಎಂಬುದು ಕಣ್ಣಿಗೆ ಪೊರೆ ಬಂದಂತೆ. ಯಾವುದೂ ಕಾಣದು. ದುಷ್ಟಬುದ್ಧಿ, ದುಷ್ಟಮನಸ್ಸಿನಿಂದ ತನ್ನ ಮತ್ತು ತನ್ನ ಗದ್ದುಗೆಯ ಮಾನವನ್ನೇ ಕಳೆದ ಬಾಸ್ ಗಳನ್ನು ಯಾರು ನೋಡಿಲ್ಲ ಹೇಳಿ? ಅಧಿಕಾರ ಬರುವುದು ಸೇವೆಗಾಗಿ; ಸಂಪತ್ತು ದಾನಕ್ಕಾಗಿ ಎನ್ನುವ ಬಾಸ್ ಗಳೂ ಇದ್ದಾರೆ. ಬಾಸ್ ಆದವನು ಅಯೋಗ್ಯನೆನ್ನಿಸಿಕೊಳ್ಳಲು ಏನೂ ಮಾಡಬೇಕಾಗಿಲ್ಲ. ಮಾಡಿದ ಘನಂದಾರೀ ಕೆಲಸಗಳೇ ಸಾಕಾಗುತ್ತದೆ.
ಆದರೆ ಯೋಗ್ಯನೆನಿಸಿಕೊಳ್ಳಬೇಕಾದರೆ ಜೀವಮಾನವಿಡೀ ಎಚ್ಚರದಿಂದಿರಬೇಕಾಗುತ್ತದೆ. ವ್ಯಷ್ಟಿ-ಸಮಷ್ಟಿಯ ಹಿತಚಿಂತನೆ ಯಲ್ಲಿ ಸಮನ್ವಯತೆಯನ್ನು ಕಂಡುಕೊಂಡ ಬಾಸ್ ಬಹುಕಾಲ ಬಾಸ್ ಆಗಿರುತ್ತಾನೆ. ಒಬ್ಬ ಬಾಸ್ ನನ್ನು ದ್ವೇಷಿಸುವುದಕ್ಕೆ ಸಾವಿರಾರು ಕಾರಣಗಳಿರುತ್ತವೆ. ಇಷ್ಟಪಡುವುದಕ್ಕೆ ಬಾಸ್ನ ನಗುವೊಂದೇ ಸಾಕಾಗುತ್ತದೆ. ಉತ್ತಮ ಬಾಸ್ ಎನ್ನಿಸಿಕೊಳ್ಳ ಬೇಕಾದರೆ ಬಾಸ್ಗೆ ಕೆಲವು ಗುಣಲಕ್ಷಣಗಳಿರಬೇಕು. ಅಥವಾ ಮಾನವೀಯ ಗುಣ ಲಕ್ಷಣಗಳು ಉತ್ತಮ ಬಾಸ್ ಆದವನಲ್ಲಿ ಹಾಸುಹೊಕ್ಕಾಗಿರುತ್ತದೆ.
ಮುಖ್ಯವಾಗಿ ನೈತಿಕ ಬದ್ಧತೆ, ಕಾರ್ಯಬದ್ಧತೆ, ಕಾರ್ಯಕ್ಷಮತೆ ಬಾಸ್ ಆದವನಿಗೆ ಅತೀ ಮುಖ್ಯ. ತನ್ನ ಆಡಳಿತ ಅಥವಾ ಅಧಿಕಾರದಲ್ಲಿ ಪಾರದರ್ಶಕತೆಯನ್ನು, ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಬೇಕು. ವೈಯಕ್ತಿಕವಾಗಿಯೂ ಅಧಿಕಾರಯುತ ವಾಗಿಯೂ ಆದರ್ಶದ ತಾದಾತ್ಮ್ಯವಿರಬೇಕು. ಆತ್ಮಗೌರವದೊಂದಿಗೆ ಅನ್ಯರನ್ನು ಗೌರವಿಸುವ ಮನೋಧರ್ಮ ವಿರಬೇಕು. ಅಽಕಾರದ ವ್ಯಾಪ್ತಿಯ ಅರಿವಿನೊಳಗೆ ಸಮಾಜಮುಖೀ ಕಾರ್ಯವನ್ನು ಮಾಡುವ, ಅನ್ಯರ ವಿಚಾರದಲ್ಲಿ ಮೂಗು ತೂರಿಸದ ಗುಣ ವಿರಬೇಕು. ಜಾತಿಪ್ರೇಮ, ಸ್ವಜನ ಪಕ್ಷಪಾತ, ಗುಂಪುಗಾರಿಕೆ ಮಾಡಬಾರದಷ್ಟೇ ಅಲ್ಲ ಅಂಥವುಗಳನ್ನು ಯಾವತ್ತೂ
ಸಮರ್ಥಿಸಲೂ ಬಾರದು. ತನ್ನಿಂದಾದ ತಪ್ಪನ್ನು ಮತ್ತೊಬ್ಬರ ಹೆಗಲಿಗೇರಿಸದೆ ತಾನೇ ಒಪ್ಪಿಕೊಂಡು ಸಾಂದರ್ಭಿಕವಾಗಿ
ಕ್ಷಮೆಯಾಚಿಸುವಲ್ಲಿ ದೊಡ್ಡತನ ತೋರಬೇಕು.
ಅನ್ಯರ ವಿಷಯಗಳ ಬಗ್ಗೆ ಕೆಟ್ಟ ಕುತೂಹಲವಿಟ್ಟುಕೊಳ್ಳಬಾರದು. ಸಂದರ್ಭ ಸನ್ನಿವೇಶಗಳಿಗನುಗುಣವಾಗಿ ನಾಲಗೆಯನ್ನು
ಹೊರಳಿಸಬಾರದು. ನಾಲಗೆಯ ಸಂಸ್ಕಾರವನ್ನು ಹೊಂದಿರಬೇಕು. ಅಽಕಾರದ ಸುತ್ತಮುತ್ತಲೂ ಆರೋಗ್ಯಯುತವಾದ ವಾತಾವರಣವು ಅಸ್ತಿತ್ತ್ವದಲ್ಲಿರುವಂತೆ ನೋಡಿಕೊಳ್ಳಬೇಕು. ಸಾಹಿತ್ಯ-ಸಂಗೀತ-ಕಲೆ-ಸಮಾಜಸೇವೆಗಳಲ್ಲಿ ಅಭಿರುಚಿ ಯಿದ್ದು ತನ್ನವರ ಶ್ರಮಗೌರವ ಮತ್ತು ಸಂಸ್ಕೃತಿಯನ್ನು ಸಾಮೂಹಿಕವಾಗಿ ಗುರುತಿಸಿ ಆದರಿಸಿ ಪ್ರೋತ್ಸಾಹಿಸಬೇಕು.
ಅನ್ಯರ ಲೋಪದೋಷಗಳನ್ನು ಮನ್ನಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಅಂಥವುಗಳು ಮತ್ತೆ ಹುಟ್ಟದಂತೆ ಎಚ್ಚರವಹಿಸಬೇಕು. ವ್ಯವಸ್ಥೆಯ ನೀತಿನಿಯಮಗಳಲ್ಲಿ ಶೈಥಿಲ್ಯವನ್ನು ತೋರುವ ಔದಾರ್ಯವಿರಬೇಕು. ಕ್ಷಮಾಗುಣದ ಔದಾರ್ಯವನ್ನು ಹೊಂದಿರ ಬೇಕು. ನಿಜವಾದ ಶ್ರಮಿಕರನ್ನು ಗುರುತಿಸಿ ಗೌರವಿಸಬೇಕೆ ಹೊರತು ತನ್ನನ್ನು ಓಲೈಸುವವರನ್ನಲ್ಲ, ಯಾಜಮಾನಿಕೆಯ ಸ್ಥಾನದಲ್ಲಿದ್ದು ಎಲ್ಲರಿಗೂ ವೃತ್ತಿ ಭದ್ರತೆ ಮತ್ತು ಘನತೆಯನ್ನು ಸಮಾನವಾಗಿ ನೀಡಬೇಕು.
ಏಕಪಕ್ಷೀಯವಾಗಿ ನಿರ್ಧಾರವನ್ನಾಗಲೀ ಕ್ರಮವನ್ನಾಗಲೀ ತೆಗೆದುಕೊಳ್ಳದೆ ತಾಳ್ಮೆಯಿಂದ ಸಹನೆಯಿಂದ ಕೂಲಂಕಷವಾಗಿ ಸಮಸ್ಯೆಯನ್ನು ಬಗೆಹರಿಸಿ ಭಿನ್ನಾಭಿಪ್ರಾಯಕ್ಕೋ, ಸಂಘರ್ಷಕ್ಕೋ, ವೈಮನಸ್ಸಿಗೋ, ದ್ವೇಷಕ್ಕೋ ಆಸ್ಪದವೀಯದಂತೆ ಪರಿಸ್ಥಿತಿಯನ್ನು ನಿರ್ವಹಿಸಬೇಕು. ಆಡುವ ಮಾತು, ವರ್ತನೆಗಳಲ್ಲಿ ಬಾಸಿಸಂ ಇರದಂತೆ ನಡೆದುಕೊಳ್ಳಬೇಕು. ಯಶಸ್ಸು, ಕೀರ್ತಿ ದೊರೆತಾಗ ತನ್ನವರ ಶ್ರಮವನ್ನು ಪ್ರಚುರಪಡಿಸಿ ಅದನ್ನು ಸ್ವೀಕರಿಸಬೇಕು.
ತನ್ನ ಕಾರ್ಯಕ್ಷಮತೆ, ಕಾರ್ಯದಕ್ಷತೆಯಿಂದ ಉಳಿದವರಿಗೆ ಮಾದರಿಯಾಗಬೇಕು. ಸೂಕ್ಷ್ಮವನ್ನು ಗ್ರಹಿಸುವ, ಚಿಂತಿಸುವ, ತರ್ಕಿಸುವ, ತೀಕ್ಷ್ಣಬುದ್ಧಿಯ ಸೃಜನಶೀಲ ವ್ಯಕ್ತಿತ್ತ್ವವನ್ನು ಹೊಂದಿರಬೇಕು. ವ್ಯವಸ್ಥೆಯನ್ನೂ ಅಧಿಕಾರವನ್ನೂ ಸ್ವಂತಕ್ಕೆ ದುರುಪಯೋಗ ಮಾಡಿಕೊಳ್ಳುವ ಸ್ವಭಾವವಿರಬಾರದು. ಅಪ್ರಾಮಾಣಿಕನಾಗದೆ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕು. ತನ್ನನ್ನೇ ಎಲ್ಲರೂ ಒಪ್ಪಬೇಕೆಂಬ ಹಠವಿರದೆ ಅನ್ಯರನ್ನು ಒಪ್ಪುವ ವೈಶಾಲ್ಯವಿರಬೇಕು.
ಒರಟುತನದ ಮನೋಭಾವ ಇರಬಾರದು. ಎಲ್ಲರ ಅಭಿಪ್ರಾಯ ಅನಿಸಿಕೆ ಸಲಹೆಗಳೊಂದಿಗೆ ಪ್ರಾತಿನಿಽಕವಾದ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳುವ ಮನಸ್ಸಿರಬೇಕು. ದೀನರಿಗೆ ಸಹಾಯವಾಗುವಂತೆ ಅಧಿಕಾರ ವ್ಯಾಪ್ತಿಯನ್ನು ಹಿಗ್ಗಿಸಿ ಕೊಳ್ಳಬೇಕು. ಯೋಚಿಸಿ ಮಾತನಾಡಬೇಕೇ ವಿನಾ ಮಾತಾಡಿ ಯೋಚಿಸಬಾರದು. ನಡೆನುಡಿ, ವೇಷಭೂಷಣಗಳು ವೃತ್ತಿಗೆ ವಯಸ್ಸಿಗೆ ಒಪ್ಪುವಂತಿರಬೇಕು. ವಯಸ್ಸು ಮತ್ತು ವೃತ್ತಿಯ ಘನತೆಯನ್ನು ಕಾಪಿಡಬೇಕು.ಅಜಜ್ಟಛಿooಜಿqಛಿ ಸ್ವಭಾವ ಹೊಂದಿರಬೇಕು.
ಆಡಿದ ಮಾತಿಗೆ, ನಿರ್ಧಾರಕ್ಕೆ, ತನ್ನವರಿಗೆ ಯಾವಾಗಲೂ ಬದ್ಧನಾಗಿರಬೇಕು. ತನ್ನನ್ನು ಸೂಕ್ಷ್ಮವಾಗಿ ಅವಲೋಕಿಸು ತ್ತಿರುತ್ತಾರೆಂಬ ಎಚ್ಚರವಿರಬೇಕು. ಸಂಘಟನೆಯ ಚಾಣಾಕ್ಷತನವನ್ನು, ಸಮೂಹದೊಂದಿಗೆ ಪಾಸಿಟಿವ್ ಸಂಬಂಧವನ್ನು ಹೊಂದಿರಬೇಕು. ಮನುಷ್ಯ ಬದುಕುವುದು ಅಧಿಕಾರದಿಂದಲ್ಲ, ಸಂಪತ್ತಿನಿಂದಲ್ಲ, ಗಳಿಸಿದ ಆಸ್ತಿಯಿಂದ ಮಾತ್ರವಲ್ಲ, ಸಮುದಾಯದ ಮೇಲಿನ ಕಾಳಜಿ ಮತ್ತು ಪ್ರೀತಿಯಿಂದ. ಬಾಸ್ ಆದವನಿಗೆ ಪ್ರಾಮಾಣಿಕತೆಗಿಂತ ಮಾನವೀಯತೆ ಮುಖ್ಯ.
ಪ್ರಾಮಾಣಿಕತೆಯಿಂದ ಹುಟ್ಟುವ ಅಹಂಕಾರದಲ್ಲಿ ಮಾನವೀಯತೆ ಬತ್ತಿಹೋಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಹೃದಯ ವಂತಿಕೆಯೇ ಮುಖ್ಯ. ಇಂಥ ಗುಣಗಳಿರುವ ಬಾಸ್ ಮತ್ತು ಆ ವ್ಯವಸ್ಥೆ ಸಾರ್ವಕಾಲಿಕವಾದ ಮನ್ನಣೆಯನ್ನು ಪಡೆಯುತ್ತದೆ. ಮೇಲೆ ಹೇಳಿದ ಅಂಶಗಳೆಲ್ಲವೂ ಬಾಸ್ ಆದವನಲ್ಲಿ ಇರಬೇಕೆಂಬ ನಿಲುವುಗಳು ಸರಿಯೇನೋ ಅಹುದು. ಆದರೆ
ಬಾಸ್ ಆದವನು ಎಲ್ಲರಿಗೂ ತಲೆಬಾಗಬೇಕು ಎಂದರ್ಥವೇನಲ್ಲ. ಸೋಲಬೇಕೆಂದೇನಲ್ಲ. ಶರಣಾಗಬೇಕೆಂದಲ್ಲ.
ಕಂಡ ಕಂಡವರ ತಾಳಕ್ಕೆ ಕುಣಿಯಬೇಕೆಂದಲ್ಲ. ಅವನಿಗೂ ಒಂದು ಸ್ಥಾನಮಾನ, ಘನತೆ, ಪದವಿ, ಅಂತಸ್ತು ಇದ್ದೇ ಇದೆ,
ಇರುತ್ತದೆ ಕೂಡ. ಇವುಗಳಿಗೆ ವಿರುದ್ಧವಾಗಿ ಅನೈತಿಕವಾಗಿ ನಡೆದುಕೊಳ್ಳುವವರೆಗೆ ಬಾಸ್ ಆದವನನ್ನು ಯಾವ ಸಂದರ್ಭ ದಲ್ಲೂ ಪ್ರಶ್ನಿಸುವಂತಿಲ್ಲ. ನೈತಿಕತೆ ಇರುವುದು ಪ್ರದರ್ಶನಕ್ಕಲ್ಲ, ಅಟ್ಟಹಾಸ ಮೆರೆಯುವುದಕ್ಕಲ್ಲ. ಇದು ಬಾಸ್ ಆದವನಿಗೂ ತಿಳಿದಿರಬೇಕು, ಅವನಽನದಲ್ಲಿ ದುಡಿಯುವವರಿಗೂ ಗೊತ್ತಿರಬೇಕು.