ಇಂಡಿ : ಭಾರತ ಚುನಾವಣೆ ಆಯೋಗವು ೨೦೨೩ ಕ್ಕೆ ಅನ್ವಯವಾಗುವಂತೆ ಮತದಾರ ಪಟ್ಟಿ ಪರಿಷ್ಕರಣೆ ಕೈಗೊಳ್ಳಲು ಆದೇಶಿಸಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆಯ ತಿದ್ದುಪಡಿಗಳ ಅನುಸಾರವಾಗಿ ಮತ್ತು ಮತದಾರರ ನೊಂದಣಿ ನಿಯಮಗಳ ಅನುಸಾರವಾಗಿ ಭಾರತ ಚುನಾವಣಾ ಆಯೋಗವು ವಿಧಾನ ಸಭೆ,ಲೋಕಸಭೆ ಮತಕ್ಷೇತ್ರದ ಮತದಾರರ ಪಟ್ಟಿಯ ತಯಾರಿಕೆ ಮತ್ತು ಪರಿಷ್ಕರಣೆ ಯಲ್ಲಿ ಅಗತ್ಯ ಬದಲಾವಣಗಳನ್ನು ತರುವ ಪ್ರಕ್ರೀಯೆ ಪ್ರಾರಂಭಿಸಿದೆ. ಮತದಾರರ ಚೀಟಿಗೆ ಆಧಾರ ಕಾರ್ಡ ಸಂಖ್ಯೆ ಲಿಂಕ್ ಅಳವಡಿಸುವುದು,ಹೊಸ ಹೆಸರು ಸೇರ್ಪಡೆ ಯಂತಹ ಪರಿಷ್ಕರಣಾ ಚಟುವಟಿಕೆಗಳನ್ನು ಮಾಡಲಾಗುತ್ತದೆ ಎಂದು ತಹಶೀಲ್ದಾರ ನಾಗಯ್ಯ ಹಿರೇಮಠ ಹೇಳಿದರು.
ಅವರು ಸೋಮವಾರ ಉಪ ವಿಭಾಗಾಽಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಚುನಾವಣಾ ಸುಧಾರಣಾ ಕ್ರಮ ಕುರಿತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಅವಕಾಶಗಳಿದ್ದು, ಮೊದ ಲಿನಂತೆ ಅರ್ಹತಾ ದಿನಾಂಕದವರೆಗೆ ಕಾಯಬೇಕಿಲ್ಲ. ೧೭ ವರ್ಷ ವಯಸ್ಸು ಚಾಲ್ತಿಯ ಯುವಕರಿಗೆ ಮುಂಗಡ ಅರ್ಜಿ ಸಲ್ಲಿಸುವ ಸೌಲಭ್ಯ ಕಲ್ಪಿಸಲಾಗಿದೆ.
ಮತದಾರರ ನೊಂದಣಿಗಾಗಿ ಹೊಸ ಅರ್ಜಿ ನಮೂನೆಗಳನ್ನು ಸರಳೀಕರಿಸಲಾಗಿದೆ.ಮತದಾರರ ಪಟ್ಟಿಗೆ ಸ್ವಯಂ ಪ್ರೇರಿತ ಆಧಾರ ಜೋಡಣೆ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.
ಮತದಾರರ ಪಟ್ಟಿಯನನಉ ಪ್ರತಿ ತ್ರೆÊಮಾಸಿಕದಲ್ಲಿ ಕಾಲೋಚಿತಗೊಳಿಸಲಾಗಿದೆ.ತ್ರೆÊಮಾಸಿಕದಲ್ಲಿ ೧೮ ವರ್ಷ ತುಂಬುವ ಅರ್ಹ ಮತದಾರರ ಹೆಸರನ್ನು ಮತದಾರರ ಭಾವಚಿತ್ರದ ಗುರುತಿನ ಚೀಟಿಯನ್ನು ಸಹ ವಿತರಣೆ ಮಾಡಲಾಗುತ್ತದೆ.
ಪ್ರಸಕ್ತ ೨೦೨೩ ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆಯ ಸಂದರ್ಭದಲ್ಲಿ ೧ ನೇ ಎಪ್ರೀಲ್,೧ ನೇ ಜುಲೈ ಹಾಗೂ ೧ ನೇ ಅಕ್ಟೋಬರ ೨೦೨೨ ಕ್ಕೆ ೧೮ ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶ ಇದ್ದು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಎಸಿ ರಾಮಚಂದ್ರ ಗಡಾದೆ ಅಧ್ಯಕ್ಷತೆ ವಹಿಸಿದ್ದರು.ಗಣಪತಿ ಬಾಣಿಕೋಲ, ಲಾಯಪ್ಪ ದೊಡಮನಿ, ಇಲಿಯಾಸ ಬೊರಾಮಣಿ, ಮಹಿಬೂಬ ಬೇನೂರ, ರಾಜು ಮುಲ್ಲಾ, ಸಂಜೀವ ಚವ್ಹಾಣ,ವಿವೇಕ ರಾಠೋಡ, ದತ್ತಾ ಬಂಡೇನವರ, ರಮೇಶ ಧರೆನವರ, ಎಸ್.ಟಿ.ಪಾಟೀಲ,ಜಿ.ಜಿ.ಬರಡೋಲ ಮೊದಲಾದವರು ಈ ಸಮದರ್ಭದಲ್ಲಿ ಇದ್ದರು.