ಶರಣಬಸಪ್ಪಾ. ಎನ್ ಕೆ.
ಇಂಡಿ: ಭೀಮಾತೀರ ಎಂದಾಕ್ಷಣ ಘನ್ನಿನ ಘರ್ಜನೆ ಎಂದೆನ್ನಕೋಳ್ಳಬೇಡಿ ಇಲ್ಲಿ ಪೆನ್ನಿನ ಆಯುಧ ಕೂಡಾ ಇದೆ ಎನ್ನುವುದಕ್ಕೆ ಗಡಿಭಾಗದಲ್ಲಿ ಹಲಸಂಗಿ ಸಾಹಿತಿಗಳ ಗೆಳೆಯರಾದ ಮಧುರಚೆನ್ನ, ದೂಲಾಸಾಹೇಬ ಮತ್ತು ಖ್ಯಾತ ನಾಟಕಕಾರ ಶ್ರೀರಂಗರು ಹೀಗೆ ಅನೇಕ ಸಾಹಿತಿಗಳು ಬರವಣಿಗೆಯಿಂದ ಶ್ರೀಮಂತಗೋಳಿಸಿದ್ದಾರೆ.
ಶಿಕ್ಷಕರಿಗೆ ಈ ಭಾಗದಲ್ಲಿ ಎಷ್ಟು ಗೌರವ ಇದೆ ಎಂಬುದು ಸಾಕಷ್ಟು ಉದಾಹರಣೆಗಳು ಇಲ್ಲಿವೆ. ಅಥರ್ಗಾ ಗ್ರಾಮದಲ್ಲಿ ಶಿಕ್ಷಕ ಶ್ರೀರೇವಣಿಸಿದ್ದಪ್ಪ ಮಾಸ್ತರ ಇವರ ಗುಡಿ ಕಟ್ಟಿ ಗ್ರಾಮದ ಜನರು ದೇವರಂತೆ ಪೂಜಿಸುತ್ತಿರುವದು ಶಿಕ್ಷಕ ಕುಲಕ್ಕೆ ಸಂದಗೌರವ ಐತಿಹಾಸಿಕ ಸಾಲೋಟಗಿ ಶಿಕ್ಷಣ ನೀಡುವ ವಿಶ್ವ ವಿಧ್ಯಾಲಯವಾಗಿತ್ತು ಎಂದು ಚೀನಿ ಯಾತ್ರಿಕ ಹೋಯನ್ ತ್ಯಾಂಗ್ಸ್ ಹೇಳಿದ್ದಾನೆ.
ಇಂಡಿ ತಾಲೂಕಿನಲ್ಲಿ ಬರಗಾಲ ಬರಡು ಭೂಮಿಯಲ್ಲಿ ಜ್ಞಾನದ ಒರತೆಯ ಚೀಲುಮೆಯಾಗಿದ್ದ ಮಲ್ಲಿಕಾರ್ಜುನ .ಪಿ ಬಿರಾದಾರ ಅತ್ಯೆಂತ ಮುಗ್ದ , ಸರಳ ಸ್ವಭಾವದ ಕಿಂಚ್ಚಿತ್ತೂ ಯಾರಿಗೂ ನೋವನ್ನುಂಟ್ಟು ಮಾಡದೆ ಇರುವ ಅಜಾತ ಶತ್ರು ಸರಳ ಸಹಕಾರ ಮೂರ್ತಿಯಾದ ಇವರು ಪಟ್ಟಣದ ಸರಕಾರಿ ಪ್ರೌಢ ಶಾಲೆಯ ಮುಖ್ಯೋ ಪಾಧ್ಯಾಯರಾಗಿ ತಮ್ಮ ಶಿಕ್ಷಕ ಸೇವಾ ಕಾರ್ಯವೈಖ್ಯಿಂದ ವಿಧ್ಯಾರ್ಥಿಗಳಿಗೆ ಶಿಕ್ಷಣದ ದಾಹ ನೀಗಿಸಿದ ದಾಸೋಹ ಮೂರ್ತಿ ಇವರಿಂದ ಕಲಿತ ಅನೇಕ ವಿಧ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉನ್ನತ ಉದ್ದೆ ಅಲಂಕರಿಸಿದ್ದಾರೆ.
ಎಂ.ಪಿ ಬಿರಾದಾರ ಶಿಸ್ತು, ಪ್ರಮಾಣಿಕತೆ ಬಡವ ,ಶ್ರೀಮಂತ ಎಂಬ ತಾರತಮ್ಯ ಇಲ್ಲದೆ ಎಲ್ಲಾ ಮಕ್ಕಳಿಗೂ ಸಮಾನವಾಗಿ ಗೌರವಿಸುವ ಗುಣ ಇವರದಾಗಿತ್ತು. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ತಮ್ಮ ಮಕ್ಕಳಂತೆ ಪ್ರೀತಿ,ವಿಶ್ವಾದಿಂದ ಗೌರವಿಸುವ ಗುಣ ಅವರಲ್ಲಿದೆ ಇಂತಹ ಮುಖ್ಯಗುರುಗಳು ಜುಲೈ ೩೧ ರಂದು ತಮ್ಮ ಸಾರ್ಥಕ ಬದಕಿನ ಸೇವಾ ಅವಧಿ ಮುಗಿಸಿ ತೆರಳುತ್ತಿರು ವುದು ವಿಧ್ಯಾರ್ಥಿ ಗಳಲ್ಲಿ ಹಾಗೂ ಸಿಬಂದ್ದಿಗಳಲ್ಲಿ ಒಂದು ಕಡೆ ಸಂತಸ ತಂದರೆ ಇನ್ನೋಂದು ಕಡೆ ದುಖ;ಮಡುಗಟ್ಟಿದ ವಾತಾವರಣ ಭಗವಂತ ಧೀರ್ಘಾ ಯುಷ್ಯ ನೀಡಲಿ ಎಂದು ಹಾರೈಸೋಣ.
ಬಾಲ್ಯ ಜೀವನ; ೨೭ಜುಲೈ ೧೯೬೨ರಲ್ಲಿ ಜನನ, ಪ್ರಾಥಮಿಕ ಶಿಕ್ಷಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಡಿಹಾಳ, ಪ್ರೌಢ ಶಿಕ್ಷಣ ಶ್ರೀಗುರುದೇವ ರಾನಡೆ ಜ್ಞಾನ ಧಾಮ ಆಶ್ರಮ ನಿಂಬಾಳ, ಪದವಿ ಶಿಕ್ಷಣ ಶ್ರೀಸಂಗನಬಸವ ಕಲಾ ಮಹಾವಿಧ್ಯಾಲಯ ವಿಜಯಪೂರ, ಬಿ.ಈ ಡಿ ಶ್ರೀಜ್ಞಾನ ಯೋಗಿ ಶ್ರೀಸಿದ್ದೇಶ್ವರ ಶಿಕ್ಷಣ ಮಹಾವಿಧ್ಯಾಲಯ ವಿಜಯಪೂರ, ಎಂ.ಈಡಿ ಕರ್ನಾಟಕ ವಿಶ್ವವಿಧ್ಯಾಲಯ ಧಾರವಾಡ,
ಸೇವೆ; ಸರಕಾರಿ ಮಾದರಿ ಶಾಲೆ ಗಳಗಿ ಹುಲಕೊಪ್ಪ ಕಲಘಟಗಿ ತಾಲೂಕು ೧೯೮೪-೧೯೯೦ , ಸರಕಾರಿ ಮಾದರಿ ಶಾಲೆ ಕೋರವಾರ ೧೯೯೦-೧೯೯೯, ಶಾಸಕರ ಮಾದರಿ ಶಾಲೆ ತಾಂಬಾ ೧೯೯೯-೨೦೦೬, ಸರಕಾರಿ ಪ್ರೌಢ ಶಾಲೆ ಜೇವೂರ೨೦೦೭-೨೦೦೯, ಸರಕಾರಿ ಪ್ರೌಢ ಶಾಲೆ ನಾದ ಕೆ.ಡಿ ೨೦೦೯-೨೦೧೨, ಸರಕಾರಿ ಪ್ರೌಢ ಶಾಲೆ ಇಂಡಿ ೨೦೧೨ರಿಂದ ೨೦೨೨ ಅಖಂಡ ೩೮ ವರ್ಷಗಳವರೆಗೆ ಮುಖ್ಯೋ ಪಾಧ್ಯಾಯರಾಗಿ ಅನನ್ಯೆ ದಾಖಲೆ ಮಾಡಿದ ಇತಿಹಾಸ ಇವರಿಗಿದೆ.
ಪ್ರಶಸ್ತಿಗಳು; ತಾಲೂಕಾ ಉತ್ತಮ ಶಿಕ್ಷಕ, ಜಿಲ್ಲಾ ಉತ್ತಮ ಶಿಕ್ಷಕ, ಬಸವ ಭೂಷಣ ಪ್ರಶೇಸ್ತಿಗಳು ಇವರ ಮುಡಿಗೇರಿವೆ.
***
ಎಂ.ಪಿ ಬಿರಾದಾರ ತಾಲೂಕಿನ ಒಬ್ಬ ಆದರ್ಶ ಶಿಕ್ಷಕರ ಸಾಲಿನಲ್ಲಿ ಇರುವ ವ್ಯಕ್ತಿ. ಅವರ ಸೇವಾ ಅವಧಿಯಲ್ಲಿ ವಿಧ್ಯಾರ್ಥಿಗಳ ಕಲಿಕೆಗೆ ಹೆಚ್ಚು ಒತ್ತು ನೀಡಿ ಪರೀಕ್ಷೆ ಹೇಗೆ ಎದುರಿಸಬೇಕು ಎಂಬ ಆತ್ಮಸ್ಥೆರ್ಯ ವಿಧ್ಯಾರ್ಥಿಗಳಿಗೆ ತುಂಬಿ. ಎಸ್.ಎಸ್ ಎಲ್.ಸಿ ಪರೀಕ್ಷೆಯಲ್ಲಿ ವಿಧ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಇವರು ಬಂದ ನಂತರ ಮಕ್ಕಳ ಸಂಖ್ಯೆಯಲ್ಲಿ ಅಧಿಕ ಹೆಚ್ಚಳ ಕಂಡಿದೆ. ನಿವೃತ್ತಿ ನಂತರ ಸಮಾಜ ಕಾರ್ಯಕ್ಕೆ ತೋಡಗಲಿ ಅವರಿಂದ ಸಮಾಜಕ್ಕೆ ಇನ್ನಷ್ಟು ಸೇವೆ ಸಿಗಲಿ.
ಶಾಸಕ ಯಶವಂತರಾಯಗೌಡ ಪಾಟೀಲ.