ನಾಗಮೂರ್ತಿ, ಹುತ್ತಕ್ಕೆ ಹಾಲೆರೆದ ಮಹಿಳೆಯರು…
ವಿಶೇಷ ವರದಿ :- ಚಂದ್ರಶೇಖರ ಮದ್ಲಾಪೂರು
ಮಾನವಿ :- ಇಂದು ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನ ನಮ್ಮ ಮಾನವಿ ತಾಲೂಕಿನ ನೀರಮಾನವಿ ಸೇರಿದಂತೆ ನಾಡಿನೆಲ್ಲೆಡೆ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ ಕಲಿಯುಗದ ಪ್ರತ್ಯಕ್ಷ ದೇವರಾದ ನಾಗ ದೇವತೆಗಳನ್ನು ಆರಾಧಿಸುವ ಈ ವಿಶೇಷ ದಿನದಂದು ಬದುಕಿನ ಸರ್ವ ಸಂಕಷ್ಟಗಳು ದೂರವಾಗಿ, ನಾಡಿನೆಲ್ಲೆಡೆ ಸುಖ, ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಜನರು ಆಶಿಸಿ ನಾಗನನ್ನು ಭಕ್ತಿಯಿಂದ ಪೂಜಿಸುವ ಹಬ್ಬದ ಸಂಪ್ರದಾಯವಾಗಿದೆ..
ವಿಶೇಷವಾಗಿ ಅವಿವಾಹಿತ ಮಹಿಳೆಯರು ನಾಗರ ಪಂಚಮಿ ವ್ರತ ಮತ್ತು ಪೂಜೆ ಆಚರಿಸಿ ದರೆ ಉತ್ತಮ ಪತಿಯನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಅಲ್ಲದೆ, ಹಾವು ಕಡಿತದಿಂದ ರಕ್ಷಣೆಯೂ ಸಿಗುತ್ತದೆ. ಆದಾಗ್ಯೂ, ಪ್ರಾರ್ಥನೆಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಯಾರಾದರೂ ನಾಗ ದೇವರನ್ನು ಪ್ರಾರ್ಥಿಸಿ ಫಲ ಪಡೆಯಬಹುದು ಎನ್ನುವ ನಂಬಿಕೆ ಇದೆ..
ಇನ್ನೂ ಕೆಲವರ ಮನೆಗಳಲ್ಲಿ ಬೆಳ್ಳಿ-ಹಿತ್ತಾಳೆಯ ನಾಗಮೂರ್ತಿ ಅಥವಾ ಅಕ್ಕಿಹಿಟ್ಟು ಇಲ್ಲವೇ ತಂಬಿಟ್ಟಿನಿಂದ ನಾಗರ ಮೂರ್ತಿ ಯನ್ನು ತಯಾರು ಮಾಡಿ, ಮಹಿಳೆ-ಮಕ್ಕಳೆ ಲ್ಲರೂ ಸೇರಿ ಹಳದಿ ದಾರವನ್ನು ಕೊರಳಲ್ಲಿ ಧರಿಸಿ, ಹಾಲು-ತುಪ್ಪವನ್ನು ನಾಗ ಮೂರ್ತಿಗೆ ಎರೆದು ಪ್ರಾರ್ಥಿಸುತ್ತಾರೆ. ನೈವೇದ್ಯಕ್ಕಾಗಿ ಅರಳು, ಶೇಂಗಾ, ಕಡಲೆ, ಕೊಬ್ಬರಿ, ಬೇಸನ್ ಲಡ್ಡು, ಕಡಲೆ ಕಾಯಿ-ಹುರಿಗಡಲೆ ಉಂಡೆ, ನವಣೆ ಉಂಡೆಗಳನ್ನು ಇಟ್ಟಿರುತ್ತಾರೆ. ಮನೆಗೆ ಬಂದ ಮುತ್ತೈದೆಯರಿಗೆ ಹೊಸ ಬಳೆ, ಸೀರೆ ಕುಪ್ಪಸ ನೀಡುವ ಸಂಪ್ರದಾಯ ಇದೆ.
ನೀರಮಾನವಿ ಗ್ರಾಮದ ಶ್ರೀಯಲ್ಲಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿರುವ ನಾಗ ಮೂರ್ತಿ ಹಾಲೆರೆಯುವ ಮೂಲಕ ಮಹಿಳೆಯರು ಸಂಪ್ರದಾಯವನ್ನು ಆಚರಣೆ ಮಾಡುತ್ತಾರೆ ಬೆಳಗ್ಗೆಯೇ ಹುತ್ತಕ್ಕೆ ಹಾಲೆರೆದು ನಾಗರ ಪಂಚಮಿ ವಿಶೇಷ ಹಾಲು ಪಾಯಸ ಮಾಡುತ್ತಾರೆ.
ಪೌರಾಣಿಕ ಕಾಲದಿಂದಲೂ ಸರ್ಪಗಳನ್ನು ದೇವರಂತೆ ಪೂಜಿಸಲಾಗುತ್ತದೆ. ನಾಗರ ಪಂಚಮಿಯ ದಿನದಂದು ನಾಗದೇವತೆ ಯನ್ನು ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ನಂಬಲಾಗಿದೆ.
ನಾಗ ಪಂಚಮಿಯಂದು ನಾಗನ ಆರಾಧನೆಯಿಂದ ರಾಹು-ಕೇತು ಮತ್ತು ಕಲಸರ್ಪ ದೋಷಗಳ ದುಷ್ಪರಿಣಾಮಗಳಿಂದ ಮುಕ್ತಿಯನ್ನು ನೀಡುತ್ತದೆ. ಈ ದಿನದಂದು ನಾಗದೇವತೆಯ ಪೂಜೆಯ ಜೊತೆಗೆ ಶಿವನನ್ನು ಪೂಜಿಸುವ ಮತ್ತು ರುದ್ರಾಭಿಷೇಕ ಮಾಡುವ ವ್ಯಕ್ತಿಯ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.