ಶ್ರೀಕಾಂತ್ ಹೆಸರಿನ ಯುವಕ ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ನೈನಾಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಎಚ್ಚರಿಕೆ ನೀಡಿದಾದರೂ, ಕಿಡಿಗೇಡಿ ತನ್ನ ವರ್ತನೆ ಬದಲಿಸಿಕೊಂಡಿಲ್ಲ. ಪೊಲೀಸರಿಂದ ಎಚ್ಚರಿಕೆ ನೀಡಿದರೂ ಕ್ಯಾರೆ ಎನ್ನದೇ ತನ್ನ ದುರ್ಬುದ್ಧಿಯನ್ನು ಮುಂದುವರಿಸಿದ್ದಾನೆ. ಇದನ್ನು ಬಿಟ್ಟರೆ ಸರಿಹೋಗುವುದಿಲ್ಲ ಎಂದರಿತಿರುವ ನೈನಾ ತಂದೆ ಅಶ್ವಿನ್ ಇದೀಗ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಆಟಗಾರ್ತಿಯಾಗಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ನೈನಾ, ತಮ್ಮ ಅಗಾಧ ಬುದ್ಧಿಶಕ್ತಿ ಯಿಂದಲೂ ಖ್ಯಾತಿ ಪಡೆದಿದ್ದಾರೆ.
8ನೇ ವಯಸ್ಸಿಗೆ ಹತ್ತನೇ ತರಗತಿ ಮುಗಿಸಿ, 13ನೇ ವಯಸ್ಸಿನಲ್ಲಿ ಪದವಿ, 15ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ ಮುಗಿಸಿದ ಈಕೆ ಏಷ್ಯಾದಲ್ಲೇ ಅತ್ಯಂತ ಕಿರಿಯ ವಯಸ್ಸಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ಗೌರವಕ್ಕೆ ಪಾತ್ರಳಾಗಿದ್ದಾರೆ.
ಮೋಟಿವೇಶನಲ್ ಸ್ಪೀಕರ್ ಆಗಿ ಮಿಂಚುತ್ತಿರುವ ನೈನಾ ಜೈಶ್ವಾಲ್ ಇತ್ತೀಚೆಗಷ್ಟೇ ತನ್ನ ತಾಯಿ ಭಾಗ್ಯಲಕ್ಷ್ಮಿಯೊಂದಿಗೆ ಎಲ್ಎಲ್ಬಿ ಸೇರಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.