ಬೆಂಗಳೂರು: “ಕೆಜಿಎಫ್-2′, “ಜೇಮ್ಸ್, “777 ಚಾರ್ಲಿ’, “ವಿಕ್ರಾಂತ್ ರೋಣ’ ಸೇರಿದಂತೆ ಮೊದಲಾದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಿಂಚು ಹರಿಸಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಗಾಳಿಪಟ-2′.
ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶದಲ್ಲೂ ಜೋರಾಗಿಯೇ ಸದ್ದು ಮಾಡಿರುವುದು ಸ್ಯಾಂಡಲ್ ವುಡ್ ಹೆಚ್ಚುಗಾರಿಕೆ.
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಭಟ್ ಕಾಂಬಿನೇಶ ನ್‌ನಲ್ಲಿ ಮೂಡಿಬಂದ ಈ ಚಿತ್ರ ಈಗ ಸೂಪರ್ ಹಿಟ್ ಲಿಸ್ಟ್‌ಗೆ ಸೇರಿದೆ. ಜಚಿತ್ರ ಆ.12ರಂದು ಬಿಡುಗಡೆಯಾದರೂ, ಅದಕ್ಕೂ ಒಂದು ದಿನ ಮುನ್ನವೇ ಅಂದರೆ ಆ.11ರಂದು ರಾತ್ರಿ 20ಕ್ಕೂ ಹೆಚ್ಚು ಕಡೆಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಅಲ್ಲಿಂದಲೇ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿವೆ.
ಈ ಮೂಲಕ ಈ ವರ್ಷ ಸ್ಯಾಂಡಲ್‌ವುಡ್‌ಗೆ ಮತ್ತೂಂದು ಗೆಲುವು ಸಿಕ್ಕಂತಾಗಿದೆ. ಗಣೇಶ್ ಹಾಗೂ ಭಟ್ ಕಾಂಬಿನೇಶನ್‌ನಲ್ಲಿ 15 ವರ್ಷಗಳ ಹಿಂದೆ ಬಂದ “ಗಾಳಿ ಪಟ’ ಚಿತ್ರವೂ ಹಿಟ್ ಆಗಿತ್ತು. ಈಗ “ಗಾಳಿಪಟ-2′ ಚಿತ್ರವನ್ನು ಪ್ರೇಕ್ಷಕ ಕೈ ಹಿಡಿದಿದ್ದಾನೆ.
“ಗಾಳಿಪಟ-2′ ಚಿತ್ರದ ಗೆಲುವಿನಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಅವರ ಪಾತ್ರ ಪ್ರಮುಖವಾಗಿದೆ. ಕರೋನಾ ಪೂರ್ವದಲ್ಲಿ ಆರಂಭವಾದ ಚಿತ್ರವಿದು. ಸಾಕಷ್ಟು ಸಿನಿಮಾಗಳು ಕರೋನಾದ ಹೊಡೆತಕ್ಕೆ ತನ್ನ ಪ್ಲ್ರಾನ್ ಅನ್ನೇ ಬದಲಿಸಿಕೊಂಡಿರುವ ಸಮಯದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಮಾತ್ರ ತಂಡದ ಕನಸಿಗೆ ಸಾಥ್ ನೀಡುವಲ್ಲಿ ಹಿಂದೇಟು ಹಾಕಿಲ್ಲ. ಚಿತ್ರದ ಬಹುತೇಕ ಚಿತ್ರೀಕರಣ ವಿದೇಶದಲ್ಲಿ ನಡೆಸಲಾಗಿದೆ.
ನಿರ್ಮಾಪಕ ರಮೇಶ್ ರೆಡ್ಡಿ ಈ ಹಿಂದೆ ಮೂರು ಸಿನಿಮಾಗಳನ್ನು ಮಾಡಿದ್ದರೂ ಅದರಿಂದ ದೊಡ್ಡ ಮಟ್ಟದ ಲಾಭ ನೋಡಿಲ್ಲ. ಅದೇ ಕಾರಣದಿಂದ ಅವರು “ಗಾಳಿಪಟ-2′ ಚಿತ್ರದ ಪ್ರತಿ ಪತ್ರಿಕಾಗೋಷ್ಠಿಗಳಲ್ಲೂ “ಈ ಹಿಂದೆ ನಾನು ಬರೆದ ಮೂರು ಎಕ್ಸಾಂ ಗಳಲ್ಲಿ ಪಾಸಾಗಲಿಲ್ಲ.
ಇದು ನಾಲ್ಕನೇ ಬಾರಿ ಬರೆಯುತ್ತಿದ್ದೇನೆ. ಈ ಬಾರಿಯಾದರೂ ಪಾಸು ಮಾಡಿ’ ಎಂದು ಪ್ರೇಕ್ಷಕರನ್ನು ಕೇಳಿಕೊಳ್ಳುತ್ತಿದ್ದರು. ಈ ಬಾರಿ ಪ್ರೇಕ್ಷಕ ಅವರನ್ನು ಜಸ್ಟ್ ಪಾಸ್ ಅಲ್ಲ, ರ್‍ಯಾಂಕ್ ಬರುವಂತೆ ಮಾಡಿದ್ದಾನೆ. ಈ ಖುಷಿಯನ್ನು ಹಂಚಿಕೊಳ್ಳುವ ನಿರ್ಮಾಪಕ ರಮೇಶ್ ರೆಡ್ಡಿ, “ಚಿತ್ರದ ಗೆಲುವು ನನಗೆ ತುಂಬಾ ಖುಷಿ ಕೊಟ್ಟಿದೆ. ಈ ಬಾರಿ ನಾನು ಫಸ್ಟ್‌ರ್‍ಯಾಂಕ್‌ನಲ್ಲಿ ಪಾಸಾಗಿದ್ದೇನೆ. ಜನ ಈ ಬಾರಿ ನಮ್ಮ ಕೈ ಹಿಡಿದಿದ್ದಾರೆ’ ಎನ್ನುತ್ತಾರೆ.