ಜಲ ಜೀವನ್ ಮಿಷನ್ ಅಡಿಯಲ್ಲಿ, ನಮ್ಮ ಸರ್ಕಾರವು 10 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ನೀರನ್ನ ಒದಗಿಸಿದೆ ಎಂದು ಪ್ರಧಾನಿ ಹೇಳಿದರು.
ಕಳೆದ 3 ವರ್ಷಗಳಲ್ಲಿ 7 ಕೋಟಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸೌಲಭ್ಯ ವನ್ನ ಒದಗಿಸಲಾಗಿದೆ, ಇದು ಸಾಮಾನ್ಯ ಸಾಧನೆಯಲ್ಲ.
ಅಟಲ್ ಭೂಜಲ್ ಯೋಜನೆ, ಜಲ ಜೀವನ್ ಮಿಷನ್, ದೇಶದ ಪ್ರತಿ ಜಿಲ್ಲೆಯಲ್ಲೂ 75 ಕೆರೆಗಳ ನಿರ್ಮಾಣ ಮತ್ತು ನದಿಗಳ ಜೋಡಣೆ ದೇಶದ ಪ್ರತಿ ಮನೆಗೂ ನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದರು.
‘ಗೋವಾವು ಪ್ರತಿ ಮನೆಗೂ ನೀರನ್ನು ತಲುಪಿಸಿದ ಮೊದಲ ರಾಜ್ಯವಾಗಿದೆ. ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ಸಹ ನೀರು-ಪ್ರಮಾಣೀಕೃತ ಕೇಂದ್ರಾಡಳಿತ ಪ್ರದೇಶಗಳಾಗಿವೆ. ನಾವು ಪ್ರತಿಯೊಂದು ದಿಕ್ಕಿನಲ್ಲಿಯೂ ಫಲಿತಾಂಶ ಗಳನ್ನು ಪಡೆಯುತ್ತಿದ್ದೇವೆ. ಅಮೃತಕಾಲವು ಇದಕ್ಕಿಂತ ಉತ್ತಮ ಆರಂಭವನ್ನು ಪಡೆ ಯಲು ಸಾಧ್ಯವಿಲ್ಲ’ ಎಂದರು.