ಬಸವನಬಾಗೇವಾಡಿ: ಪ್ರತಿಯೊಬ್ಬರು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳ ಬೇಕು ಇದು ಗ್ರಾಮೀಣ ಭಾಗದ ಜರಿಗಾಗಿಯೇ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.
ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಶನಿವಾರ ಕಂದಾಯ ಇಲಾಖೆಯಿಂದ ಹಮ್ಮಿ ಕೊಂಡ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಾಕಷ್ಟು ಜನ ರೈತರು ಪಹಣಿ ತಿದ್ದುಪಡೆ ಪಿಂಚಣಿ ಸೌಲಭ್ಯ ಪಡೆಯುವದು ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಜಿಲ್ಲಾ ಕೇಂದ್ರಕ್ಕೆ ಹಾಗೂ ತಾಲೂಕಾ ಕೇಂದ್ರಕ್ಕೆ ಬರುತ್ತಾರೆ ಕೆಲ ಸಮಯದಲ್ಲಿ ಅಧಿಕಾರಿಗಳು ಕಚೇರಿಯಲ್ಲಿ ಇಲ್ಲದಿರುವುದರಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ ಇದನ್ನೆಲ್ಲ ಗಮನಿಸಿದ ಸರ್ಕಾರ ಗ್ರಾಮೀಣ ಭಾಗದ ಜನರ ಮನೆ ಭಾಗಿಲಿಗೆ ಸರ್ಕಾರದ ಯೋಜನೆ ಮುಟ್ಟಿಸುವಲ್ಲಿ ಇಂತಹ ಕಾರ್ಯಕ್ರಮ ಗಳನ್ನು ಆಯೋಜಿಸುತ್ತದೆ ಇದರಲ್ಲಿ ತಾವುಗಳು ಅರ್ಜಿ ಸಲ್ಲಿಸುವ ಮೂಲಕ ಸ್ಥಳದಲ್ಲಿ ಯೇ ತಮ್ಮ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ ಎಂದರು.
ರೈತರು ದಾರಿ ಸಮಸ್ಯ ಕುರಿತು ಹ¯ವಾರು ಅರ್ಜಿ ಬಂದಿವೆ ಎಂದು ತಹಶೀಲ್ದರಾ ವಿಜಕುಮಾರ ಕಡಕೋಳ ಸಭೆ ಗಮನಕ್ಕೆ ತಂದಾಗ ದಾರಿ ಸಮಸ್ಯ ಬಗೆ ಹರಿಸುವ ಅಧಿಕಾರ ನಮಗೆ ಇಲ್ಲ ಅದನ್ನ ನ್ಯಾಯಾಲಯದಲ್ಲಿ ಇತ್ಯಾರ್ಥಪಡಿಸಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಅಕ್ಕ ಪಕ್ಕದಲ್ಲೇ ಇರುವ ತಾವು ಗಳು ಹೊಂದಾಣಿಕೆಯೊAದಿಗೆ ಸಮಸ್ಯಯನ್ನು ಬಗೆ ಹರಿಸಿಕೊಳ್ಳಲು ಪ್ರಯತ್ನಿಸಿ ಎಂದು ಜಿಲ್ಲಾಧಿಕಾರಿಗಳು ರೈತರಿಗೆ ತಿಳಿ ಹೇಳಿದರು.
ಗ್ರಾಮದ ರೇಖಾ ಹಿರೂರ ತನ್ನ ಮಗಳು ಶ್ರೀರಕ್ಷಾಳಿಗೆ ಅಂಗವಿಕಲ ಕಾರ್ಡ ನೀಡಲು ಆರೋಗ್ಯ ಅಧಿಕಾರಿಗಳು ವಿಳಂಭ ಮಾಡು ತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಕರೆದು ಮಗುವನ್ನು ತಪಾಸಣೆ ಮಾಡಿ ಕೂಡಲೇ ಅವರಿಗೆ ಆರೋಗ್ಯ ಕಾರ್ಡ ವಿತರಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪಹಣಿ ತಿದ್ದುಪಡೆ ಪಿಂಚಣಿ, ದಾರಿ ಸಮಸ್ಯ, ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ ಸೇರಿದಂತೆ ವಿವಿಧ ಅರ್ಜಿ ಗಳು ಬಂದಿದ್ದು ಕೆಲವನ್ನು ಸ್ಥಳದಲ್ಲಿ ಇತ್ಯರ್ಥ ಪಡಿಸಿದರೆ ಕೆಲವನ್ನು ಪರಿಸೀಲಿಸಿ ಕೂಡಲೇ ಇತ್ಯರ್ಥಗೊಳಿಸುವಂತೆ ಜನರಿಗೆ ತಿಳಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾ,ಪಂ ಅಧ್ಯೆಕ್ಷೆ ಲಕ್ಷೀಬಾಯಿ ವಡ್ಡರ, ಮುಖಂಡ ಅರವಿಂದ ಕುಲಕರ್ಣಿ, ಜಿಲ್ಲಾ ಉಪ ವಿಭಾಗಧಿಕಾರಿ ಮಹೇಶ ಮಾಲಗತ್ತಿ, ಜಿಲ್ಲಾ ಯೋಜನಾಧಿಕಾರಿ ಸಿ,ಬಿ ದೇವರಮನಿ, ಹಾಗೂ ವಿವಿಧ ಜಿಲ್ಲಾ, ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಪಂಚಾಯತ ಸಸ್ಯರು ಉಪಸ್ಥಿರಿದ್ದರು.