ಪತಿ ಹಾಗೂ ಮಕ್ಕಳ ಜೊತೆಗಿರುವ ಫೋಟೋ ಹಂಚಿಕೊಂಡ ನಟಿ ನಮಿತಾ ಮನೆಗೆ ಹೊಸ ಅತಿಥಿಗಳ ಆಗಮನದ ಕುರಿತು ಖುಷಿ ಹಂಚಿಕೊಂಡಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಮಿತಾ ಚೆನ್ನೈ ಮೂಲದ ವೀರೇಂದ್ರ ಚೌಧರಿ ಅವರ ಜೊತೆ ಹಸೆಮಣೆ ಏರಿದ್ದರು.
ಬೇಬಿ ಬಂಪ್ ಫೋಟೋಗಳನ್ನು ಇತ್ತೀಚೆಗಷ್ಟೇ ಅಭಿಮಾನಿಗಳಿಗಾಗಿ ಹಂಚಿ ಕೊಂಡಿದ್ದರು. ಮದುವೆಯ ನಂತರ ಸಿನಿಮಾ ರಂಗದಿಂದ ನಮಿತಾ ದೂರವಿದ್ದರೂ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
ಗುಜರಾತ್ ಮೂಲದ ನಮಿತಾ ತೆಲುಗು ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಬಳಿಕ ಕನ್ನಡ ಹಾಗೂ ತಮಿಳು ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.